ಚಿತ್ರಗಳು : ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟ ಕಾಂಗ್ರೆಸ್ ನಾಯಕರು

Posted By: Gururaj
Subscribe to Oneindia Kannada

ಬೆಂಗಳೂರು, ಆ.06 : ಆದಾಯ ತೆರಿಗೆ ದಾಳಿ ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಐಟಿ ಇಲಾಖೆ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ.

ಬುಧವಾರದಿಂದ ಶನಿವಾರ ಬೆಳಗ್ಗೆ ತನಕ ಡಿ.ಕೆ.ಶಿವಕುಮಾರ್ ಮತ್ತು ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಮೂರು ದಿನ ಸಚಿವರನ್ನು ಭೇಟಿ ಮಾಡಲು ಯಾರಿಗೂ ಐಟಿ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ.

ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ: ಡಿಕೆಶಿ

ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ವಿವಿಧ ಸಚಿವರು, ನಂಜಾವಧೂತ ಸ್ವಾಮೀಜಿ ಮುಂತಾದವರು ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು, ಧೈರ್ಯ ತುಂಬಿದರು.

ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತವಾದದ್ದು ಎಂದು ಕಾಂಗ್ರೆಸ್ ಮುಖಂಡರು ದಾಳಿ ನಡೆದ ದಿನದಿಂದ ಆರೋಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಳಿ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಹೇಳಿದ್ದರು.

ಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲ

ಪರಮೇಶ್ವರ ಭೇಟಿ

ಪರಮೇಶ್ವರ ಭೇಟಿ

ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಿಮ್ಮ ಜೊತೆ ನಾವಿದ್ದೇವೆ, ನಿಮ್ಮ ಶಕ್ತಿ ಏನೆಂದು ಪಕ್ಷಕ್ಕೆ ಗೊತ್ತಿದೆ ಎಂದು ಅವರು ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ.

ಡಿಕೆಶಿ ಭೇಟಿ ಮಾಡಿದ ಕೆ.ಜೆ.ಜಾರ್ಜ್

ಡಿಕೆಶಿ ಭೇಟಿ ಮಾಡಿದ ಕೆ.ಜೆ.ಜಾರ್ಜ್

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭಾನುವಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 'ಪ್ರತಿಯೊಂದು ವಿಷಯದಲ್ಲಿಯೂ ರಾಜಕಾರಣ ಮಾಡುತ್ತಾ ಬಿಜೆಪಿ ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುತ್ತಿದೆ. ರಾಜಕೀಯದಲ್ಲಿ ಇದೆಲ್ಲ ಸಹಜ, ಎದೆಗುಂದ ಬೇಡಿ' ಎಂದು ಜಾರ್ಜ್ ಹೇಳಿದರು.

ಡಿಕೆಶಿ ಭೇಟಿ ಮಾಡಿದ ಸಚಿವ ಎ.ಮಂಜು

ಡಿಕೆಶಿ ಭೇಟಿ ಮಾಡಿದ ಸಚಿವ ಎ.ಮಂಜು

ಪಶುಸಂಗೋಪನಾ ಸಚಿವ ಎ.ಮಂಜು ಅವರು ಸದಾಶಿವ ನಗರದ ನಿವಾಸಕ್ಕೆ ಭಾನುವಾರ ನಂಜವಧೂತ ಸ್ವಾಮೀಜಿಗಳ ಜೊತೆ ಭೇಟಿ ನೀಡಿ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಿದರು.

ಶಿವಕುಮಾರ್ ಭೇಟಿ ಮಾಡಿದ ಪಾಟೀಲ್

ಶಿವಕುಮಾರ್ ಭೇಟಿ ಮಾಡಿದ ಪಾಟೀಲ್

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

I T Raid On Dk Shivakumar House Behind Govindaraju Dairy ? | Oneindia Kannada
ನಂಜವಧೂತ ಸ್ವಾಮೀಜಿ ಭೇಟಿ

ನಂಜವಧೂತ ಸ್ವಾಮೀಜಿ ಭೇಟಿ

ಭಾನುವಾರ ನಂಜವಧೂತ ಸ್ವಾಮೀಜಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಕಾಲಿಗೆ ಬಿದ್ದು ನಮಸ್ಕರಿಸಿ ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress leaders visited the Energy Minister minister DK Shivakumar house in Bengaluru on August 06, 2017. DK Shivamumar who is being raided by IT officials on August 2.
Please Wait while comments are loading...