ಶಿಖಾ ಸೇರಿದಂತೆ 19 ಐಎಎಸ್ ಅಧಿಕಾರಿಗಳು ವರ್ಗ
ಬೆಂಗಳೂರು, ಆಗಸ್ಟ್ 06: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಸೋಮವಾರ(ಆಗಸ್ಟ್ 06) ಸಂಜೆ 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಈ ಮೂಲಕ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ.
ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಮುಗಿದ ಬಳಿಕ 20 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಜುಲೈ ತಿಂಗಳಿನಲ್ಲೇ ಇನ್ನೊಮ್ಮೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾಯಿಸಲಾಗಿತ್ತು. ಈಗ ಮತ್ತೊಮ್ಮೆ 19ಕ್ಕೂ ಅಧಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು : ಯಾವ ಇಲಾಖೆಯಿಂದ ಯಾವ ಇಲಾಖೆಗೆ ಎಂಬ ವಿವರ ಮುಂದಿದೆ-
1. ಡಾ. ಎ. ಸೆಲ್ವಕುಮಾರ್: ಸಿಎಂ ಕಾರ್ಯದರ್ಶಿ- ಕೆಪಿಟಿಸಿಎಲ್ ಎಂಡಿ
2. ಸಿ. ಶಿಖಾ: ಪಿಯು ಬೋರ್ಡ್ ನಿರ್ದೇಶಕಿ ಸ್ಥಾನದಿಂದ ಬೆಸ್ಕಾಂ ಎಂಡಿಯಾಗಿ ವರ್ಗಾವಣೆ
3. ಎಂ.ವಿ. ಸಾವಿತ್ರಿ: ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ
4. ಡಾ. ಎ.ಆರ್. ವಿಶಾಲ್- ಆಯುಕ್ತರು, ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
5. ಬಿ.ಎಸ್. ಶೇಖರಪ್ಪ- ನಿರ್ದೇಶಕರು, ನಗರಾಡಳಿತ

6. ಮನೋಜ್ ಜೈನ್ : ಗದಗ ಡಿಸಿ ಸ್ಥಾನದಿಂದ ಎಂಡಿ, ಕರ್ನಾಟಕ ಸಾರ್ವಜನಿಕ ಭೂ ದಾಖಲೆ ವಿಭಾಗ
7. ಪಿ. ರಾಜೇಂದ್ರ ಚೋಳನ್ : ಬೆಸ್ಕಾಂ ಎಂಡಿ ಸ್ಥಾನದಿಂದ ಎಂಡಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ
8. ಟಿಎಚ್ಎಂ ಕುಮಾರ್ : ಎಂಡಿ ಪಿಸಿಕೆಎಲ್ ನಿಂದ ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆ
9. ಎಂ. ಕನಗವಲ್ಲಿ: ಕೊಪ್ಪಳ ಡಿಸಿ ಸ್ಥಾನದಿಂದ ನಿರ್ದೇಶಕರು, ಪಿಯು ಬೋರ್ಡ್ ಹಾಗೂ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ
10. ಎಂ.ಜಿ. ಹಿರೇಮಠ: ಬಿಆರ್ ಟಿಎಸ್ ಎಂಡಿ ಸ್ಥಾನದಿಂದ ಜಿಲ್ಲಾಧಿಕಾರಿ, ಗದಗ
11. ಚಾರುಲತಾ ಸೋಮಲ್: ಸಿಎಂ ಸಚಿವಾಲಯದಿಂದ ಆಯುಕ್ತರು, ಶಿವಮೊಗ್ಗ ನಗರಪಾಲಿಕೆ ಹಾಗೂ ಹೆಚ್ಚುವರಿಯಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ನಿಗಮ
12. ಸುರಲ್ಕರ್ ವಿಕಾಸ್ ಕಿಶೋರ್: ಬಾಗಲಕೋಟೆ ಸಿಇಒ ಸ್ಥಾನದಿಂದ ಎಂಡಿ, ಜೆಸ್ಕಾಂ, ಕಲಬುರುಗಿ
13. ಡಾ. ಅರುಂಧತಿ ಚಂದ್ರಶೇಖರ್ : ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆಯಿಂದ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
14. ಸಿ.ಎನ್. ಮೀನಾ ನಾಗರಾಜ್ : ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ
15. ಗಂಗೂಬಾಯಿ ರಮೇಶ್ ಮನಕರ- ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ
16. ಮಹಂತೇಶ್ ಬೆಳಗಿ- ಸಿಇಒ, ವಿಜಯಪುರ ಜಿಲ್ಲಾ ಪಂಚಾಯತಿ
17. ಕೆ.ಎ. ದಯಾನಂದ: ಎಂಕೆ ಶ್ರೀರಂಗಯ್ಯ ಅವರ ಬದಲಿಗೆ ಜಿಲ್ಲಾಧಿಕಾರಿ ಚಿಕ್ಕಮಗಳೂರು
18. ಪಿ. ಸುನಿಲ್ ಕುಮಾರ್ : ಜಿಲ್ಲಾಧಿಕಾರಿ, ಕೊಪ್ಪಳ
19. ಸುಂದರೇಶ್ ಬಾಬು: ಎಂಡಿ, ಹೆಸ್ಕಾಂ, ಹುಬ್ಬಳ್ಳಿ












Click it and Unblock the Notifications