ವೈರಲ್ ವಿಡಿಯೋ; ಮಂಗಗಳಿಗೆ ನೀರು ಕುಡಿಸಿದ ಪೊಲೀಸ್ ಸಿಬ್ಬಂದಿ

ಬೆಂಗಳೂರು, ಮೇ 07 : ಒಂದು ಕಡೆ ಲಾಕ್ ಡೌನ್, ಮತ್ತೊಂದು ಕಡೆ ಬೇಸಿಗೆಯ ಧಗೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳಿಗೆ ಸರಿಯಾದ ಆಹಾರ, ನೀರು ಸಿಗುತ್ತಿಲ್ಲ. ಬಿಸಿಲ ಧಗೆ ತಾಳಲಾರದೆ ಮಂಗಗಳು ಮಿನಿರಲ್ ವಾಟರ್ ಮೊರೆ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೈಋತ್ಯ ರೈಲ್ವೆ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ರೈಲ್ವೆ ಸುರಕ್ಷತಾ ದಳದ ಪೊಲೀಸ್ ಸಿಬ್ಬಂದಿಯೊಬ್ಬರು ರೈಲು ನಿಲ್ದಾಣದಲ್ಲಿದ್ದ ಮಂಗಗಳಿಗೆ ನೀರು ಕುಡಿಸಿದ್ದಾರೆ. ಬಿಸಿಲಝಲದಲ್ಲಿ ಬಸವಳಿದಿದ್ದ ಮಂಗ ಸುಮ್ಮನೆ ಕುಳಿತು ನೀರು ಕುಡಿದಿದೆ.

ಆರಕ್ಕೂ ಹೆಚ್ಚು ಮಂಗಗಳು ರೈಲು ನಿಲ್ದಾಣದಲ್ಲಿದ್ದವು. ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿದ್ದಂತೆ ಅವುಗಳಿಗೆ ದಾಹವಾಗಿದೆ. ಅಲ್ಲಿಂದ ಪೊಲೀಸ್ ಸಿಬ್ಬಂದಿ ಅವುಗಳಿಗೆ ಬಾಟಲಿಯಲ್ಲಿದ್ದ ಮಿನಿರಲ್ ವಾಟರ್ ಕೊಟ್ಟಿದ್ದಾರೆ. ಒಂದು ಮಂಗ ಸುಮ್ಮನೆ ಕುಳಿತು ನೀರು ಕುಡಿದಿದೆ.

Viral Video Railway Police Personnel Take Care Of Monkeys

ಮತ್ತೊಂದು ಮಂಗಳ ಸ್ವಲ್ಪ ಗಾಬರಿಯಾಗಿದ್ದು, ಪೊಲೀಸರ ಕೈಯಿಂದ ಬಾಟಲಿ ಕಸಿದುಕೊಂಡು ಓಡಲು ಪ್ರಯತ್ನ ನಡೆಸಿದೆ. ಆದರೆ, ಬಾಟಲಿ ಕೊಡದ ಪೊಲೀಸ್ ಸಿಬ್ಬಂದಿ ಮಂಗಕ್ಕೆ ನಿಧಾನವಾಗಿ ನೀರು ಕುಡಿಸಿದ್ದಾರೆ. ಒಂದು ಮಂಗ ನೀರು ಕುಡಿಯುವಾಗ ಮತ್ತೊಂದು ಕಾಯುತ್ತಾ ಕುಳಿತ ವಿಡಿಯೋ ವೈರಲ್ ಆಗಿದೆ.

ಮಂಗ ಬಾಟಲಿ ಕಸಿಯಲು ಪ್ರಯತ್ನ ನಡೆಸಿದಾಗ "ಏ ತಡಿಯೋ...ಹತ್ತಿರ ಬಾ" ಎಂದು ಪೊಲೀಸ್ ಸಿಬ್ಬಂದಿ ಅವುಗಳ ಜೊತೆ ಸಂಭಾಷಣೆ ನಡೆಸಿದ್ದಾರೆ. ನೀರು ಕುಡಿದ ಕೋತಿ ಅಲ್ಲಿಂದ ಓಡಿದೆ.

ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಪ್ರಯಾಣಿಕ ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ. ಆದರೆ, ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಗೂಡ್ಸ್ ರೈಲು ಸಂಚಾರ ನಡೆಸುತ್ತಿದೆ. ರೈಲ್ವೆ ಇಲಾಖೆ ಸಿಬ್ಬಂದಿ, ರೈಲ್ವೆ ಸುರಕ್ಷತಾ ದಳದ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+