ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಆಡಳಿತದಲ್ಲಿ ಹಣಕ್ಕೆ ಬೆಲೆಯಿದೆ, ಸಾವು-ನೋವಿಗಲ್ಲ: ಪ್ರಿಯಾಂಕ್ ಖರ್ಗೆ

|
Google Oneindia Kannada News

ಬೆಂಗಳೂರು, ನವೆಂಬರ್ 5: ಬಿಜೆಪಿ ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಯಾರೇ ಆದರೂ ಮಾನವೀಯತೆ ಮೆರೆಯಬೇಕು. ಆದರೆ ಸರಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ. ಹಣ ಕೊಟ್ಟವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ. ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಬಗ್ಗೆ ಗಮನಹರಿಸಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಕೆಲವು ಪಿಎಸ್ಐ ಅಭ್ಯರ್ಥಿಗಳು ಗೃಹ ಸಚಿವರ ಬಳಿ ಅಳಲು ತೋಡಿಕೊಳ್ಳಲು ಹೋದರೆ ಡಿವೈಎಸ್‌ಪಿ ಕಪಾಳಕ್ಕೆ ಹೊಡೆಯುತ್ತಾರೆ. ಇಲ್ಲಿ ಮಹಿಳೆ ಗಂಭೀರ ಆರೋಗ್ಯ ಸಮಸ್ಯೆ ಎಂದು ಗೊತ್ತಿದ್ದರೂ ಕಾರ್ಡ್ ಕೊಡಿ, ಹಣ ಕೊಡಿ ಎಂದು ಹೇಳಿ ಚಿಕಿತ್ಸೆ ನೀಡಿಲ್ಲ. ಇದು ಸರಕಾರದ ಪ್ರಾಯೋಜಿತ ಹತ್ಯೆ. ಇದಕ್ಕೆ ಕಾರಣ ಯಾರು? ಅಮಾನತು ಗೊಳಿಸಿದರೆ ಸಾಕೆ? ಅವರ ಪರವಾನಿಗೆ ರದ್ದು ಮಾಡಬೇಕು. ವೈದ್ಯರು ವೃತ್ತಿ ಆರಂಭಿಸುವಾಗ ಮಾನವೀಯತೆ ಆಧಾರದ ಮೇಲೆ ಪ್ರತಿಜ್ಞೆ ಮಾಡಿರುತ್ತಾರೆ. ಅದನ್ನು ಮರೆತು ಇಂದು ಈ ರೀತಿ ಚಿಕಿತ್ಸೆ ತಿರಸ್ಕರಿಸಿದರೆ. ಈ ಸರಕಾರದಲ್ಲಿ ಜೀವಕ್ಕೆ ಬೆಲೆ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿಬಿದ್ದ ರಸ್ತೆಯಲ್ಲಿ ತುಳಸಿ ಪೂಜೆ ಮಾಡಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಗುಂಡಿಬಿದ್ದ ರಸ್ತೆಯಲ್ಲಿ ತುಳಸಿ ಪೂಜೆ ಮಾಡಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ

ಚಾಮರಾಜನಗರ ಜಿಲ್ಲಾಸ್ಪತ್ರೆ ಸಾವಿನ ಪ್ರಕರಣದಲ್ಲಿ ಸಚಿವರು ಬೇಜವಾಬ್ದಾರಿಯಿಂದ ವಿರೋಧ ಪಕ್ಷದ ನಾಯಕರನ್ನೆ ಪ್ರಶ್ನೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ ' ಈ ಸರಕಾರ ರಚನೆ ಆಗಿರುವುದೇ ದುಡ್ಡಿನ ಮೇಲೆ. ಇದೇ ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತಾಗ, ಯಾರು ಸತ್ತೇ ಇಲ್ಲ ಎಂದರು. ಲೋಕಸಭೆಯಲ್ಲಿ ಮಾಹಿತಿ ಕೇಳಿದಾಗ ಈ ಬಗ್ಗೆ ಸರಕಾರಕ್ಕೂ ಮಾಹಿತಿ ಇಲ್ಲ. ಆದರೂ ಇವರು ನಿರಾಕರಿಸುವ ಮನಸ್ಥಿತಿಯಲ್ಲಿದೆ. ದುಡ್ಡಿನ ಮೇಲೆ ರಚನೆಯಾದ ಸರಕಾರ ಶೇ 40 ಭ್ರಷ್ಟಚಾರದಲ್ಲಿ ಮುಳುಗಿದ್ದು, ಇದರಿಂದ ಮಾನವೀಯತೆ ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.

ರಸ್ತೆ ಗುಂಡಿಗೆ 21 ಬಲಿ

ರಸ್ತೆ ಗುಂಡಿಗೆ 21 ಬಲಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾವು ಆರಂಭವಾಗಿದೆ. ಈ ಬಗ್ಗೆ ಸರಕಾರ ಏನಾದರೂ ಮಾಡಿದೆಯಾ? ಜನ ಯಾಕೆ ಸಾಯುತ್ತಿದ್ದಾರೆ ಎಂದು ಕೇಳಿದರೆ, ನಿಮ್ಮ ಸರಕಾರದಲ್ಲಿ ರಸ್ತೆ ಗುಂಡಿ ಇರಲಿಲ್ಲವೇ ಎಂದು ಕೇಳುತ್ತಿದ್ದಾರೆ. ರಸ್ತೆ ಗುಂಡಿಗೆ 21 ಬಲಿಯಾಗಿದ್ದು, ಆ ಬಗ್ಗೆ ಮಾತನಾಡಿ ಎಂದರೆ ಹಳೆ ಸರಕಾರದ ಬಗ್ಗೆ ಮಾತನಾಡುತ್ತಾರೆ. ಮಾತೆತ್ತಿದರೆ ಸಿದ್ದರಾಮಯ್ಯ ಕಾಲದ ಅಕ್ರಮ ತನಿಖೆ ಮಾಡುತ್ತೇವೆ ಎನ್ನುತ್ತಾರೆ. ನಿರುದ್ಯೋಗಿ ಯುವಕರು ದಿನನಿತ್ಯ ಕಣ್ಣೀರು ಹಾಕುತ್ತಿದ್ದರೂ ಅವರಿಗೆ ಮಾನವೀಯತೆ ತೋರಲು ಆಗುತ್ತಿಲ್ಲ. ಅವರದೇ ಶಾಸಕರು ಶಾಸಕರ ಭವನದಲ್ಲಿ ಡೀಲ್ ಮಾಡುತ್ತಿದ್ದಾರೆ. ಈ ಸರ್ಕಾರ ಹಣದಿಂದ, ಹಣಕ್ಕಾಗಿ, ಹಣ ಗಳಿಸಲಿಕ್ಕೋಸ್ಕರ ಇರುವ ಸರ್ಕಾರವಾಗಿದೆ ಎಂದು ತಿರುಗೇಟು ನೀಡಿದರು.

ಇ.ಡಿ ಅಧಿಕಾರಿಗಳು ಯಾಕೆ ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್‌ ಬೇಸರಇ.ಡಿ ಅಧಿಕಾರಿಗಳು ಯಾಕೆ ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್‌ ಬೇಸರ

ಸುಧಾಕರ ಈಗಾಗಲೇ ರಾಜೀನಾಮೆ ನೀಡಬೇಕಿತ್ತು

ಸುಧಾಕರ ಈಗಾಗಲೇ ರಾಜೀನಾಮೆ ನೀಡಬೇಕಿತ್ತು

ಸಚಿವ ಸುಧಾಕರ್ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರಿಗೆ ವಿಮ್ಸ್ ಪ್ರಕರಣ, ಆಕ್ಸಿಜನ್ ಕೊರತೆ ಪ್ರಕರಣ, ಕೋವಿಡ್ ನಿರ್ವಹಣೆ ವೈಫಲ್ಯ ಆದಾಗಲೇ ರಾಜೀನಾಮೆ ನೀಡಬೇಕಿತ್ತು. ಆಗ ರಾಜೀನಾಮೆ ನೀಡದವರಿಂದ ಈಗ ನಿರೀಕ್ಷೆ ಮಾಡಲು ಸಾಧ್ಯವೇ? ಈ ಸರಕಾರಕ್ಕೆ ಭ್ರಷ್ಟಾಚಾರ ಸೋಂಕು ತಗುಲಿ ಸೋಂಕಿತ ಸರಕಾರವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ನಾನು ರಾಜೀನಾಮೆ ನೀಡುತ್ತೇನೆ ಎಂಬುದು ಅವರ ಸಮರ್ಥನೆಯೇ? ಮಾತೆತ್ತಿದರೆ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರಲ್ಲ. ಹಾಗಾದರೆ ಕೊರೊನಾ ಸಮಯದಲ್ಲಿ ರೋಗಿಗಳನ್ನು ದಾಖಲಿಸಿಕೊಂಡ ಆಸ್ಪತ್ರೆ ಕಟ್ಟಿಸಿದವರು ಯಾರು? ಬಿಜೆಪಿಯವರೇ? ಕೇಂದ್ರದಲ್ಲಿ 8 ವರ್ಷಗಳಿಂದ ಮೋದಿ ಸರಕಾರ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಿಮ್ಮ ಸರಕಾರದ ಕೊಡುಗೆ ಏನು? ಈಗಲೂ ಕಾಂಗ್ರೆಸ್ ಮೇಲೆ ಗೂಬೇ ಕೂರಿಸಿದರೆ ಜನ ನಿಮಗೆ ತಕ್ಕ ಉತ್ತರ ನೀಡುತ್ತಾರೆ" ಎಂದು ಕಿಡಿಕಾರಿದರು.

ಈಶ್ವರಪ್ಪ 500 ಕೋಟಿ ರೂಪಾಯಿ ಆಫರ್ ಹೇಳಿಕೆಯಲ್ಲಿ ಅಚ್ಚರಿಯಿಲ್ಲ

ಈಶ್ವರಪ್ಪ 500 ಕೋಟಿ ರೂಪಾಯಿ ಆಫರ್ ಹೇಳಿಕೆಯಲ್ಲಿ ಅಚ್ಚರಿಯಿಲ್ಲ

ಶಾಸಕ ಸಂಗಮೇಶ್ ಅವರಿಗೆ ಹಣ ಕೊಟ್ಟು ಪಕ್ಷಕ್ಕೆ ಆಹ್ವಾನ ಮಾಡಿರುವ ಈಶ್ವರಪ್ಪ ಹೇಳಿಕೆಗೆ ಉತ್ತರಿಸಿ," ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಅವರು ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾರೆ. ಅವರ ಪ್ರಕರಣ ಏನಾಯ್ತು? ಅವರ ಮನೆ ಮೇಲೆ ಐಟಿ ದಾಳಿ ಆದಾಗ ಹಣ ಎಣಿಕೆ ಯಂತ್ರ ಸಿಕ್ಕಿತ್ತು. ಅವರ ಬಳಿ ಹಣ ಇತ್ತಾ? ಅವರು ವ್ಯಂಗ್ಯವಾಗಿ ಮಾತನಾಡಿದ್ದರೆ, ರಾಜ್ಯದಲ್ಲಿ ಆಪರೇಶನ್ ಕಮಲ ಆಗಿಲ್ಲವೇ? ಪಕ್ಷ ಬಿಟ್ಟು ಹೋದವರು ತತ್ವ ಸಿದ್ಧಾಂತದ ಮೇಲೆ ಹೋಗಿದ್ದಾರಾ? ಇವರೆಲ್ಲ ಹಣ ಪಡೆದು ಹೋಗಿದ್ದಾರೆ. ಟಿಆರ್ ಎಸ್ ಶಾಸಕರ ಖರೀದಿ ಸಮಯದಲ್ಲಿ ಅವರು ರಾಜ್ಯದ ಆಪರೇಶನ್ ಕಮಲದ ಪ್ರಸ್ತಾಪ ಆಗಿದೆ. ಈಶ್ವರಪ್ಪ ಅವರ ಮೇಲಿನ ಐಟಿ ಇಡಿ ಕೇಸ್ ಏನಾಯ್ತು? ಯಾಕೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಳ್ಳುತ್ತಿಲ್ಲ? ಆ ಪ್ರಕರಣ ಸರಕಾರದ ಬಳಿಯೇ ಬಾಕಿ ಉಳಿದಿದೆ ಎಂದು ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್‌ನವರಾಗಿದ್ದರೆ ಇಷ್ಟೊತ್ತಿಗೆ ದಾಳಿ ನಡೆಯುತ್ತಿತ್ತು

ಕಾಂಗ್ರೆಸ್‌ನವರಾಗಿದ್ದರೆ ಇಷ್ಟೊತ್ತಿಗೆ ದಾಳಿ ನಡೆಯುತ್ತಿತ್ತು

ಇಂತಹ ಹೇಳಿಕೆ ಕೊಟ್ಟಾಗ ಐಟಿ, ಸಿಬಿಐ ನಿದ್ರೆ ಮಾಡುತ್ತಿದೆಯೇ? ಕಾಂಗ್ರೆಸ್ ನಾಯಕರು ಈ ಹೇಳಿಕೆ ಕೊಟ್ಟಿದ್ದಾರೆ ಇಷ್ಟು ಹೊತ್ತಿಗೆ ದಾಳಿ ಆಗುತ್ತಿರಲಿಲ್ಲವೇ. 500 ಕೋಟಿ ಕೊಡದಿದ್ದರೂ 50 ಕೋಟಿ ಕೊಟ್ಟು ಆಪರೇಶನ್ ಕಮಲ ಮಾಡಿಲ್ಲವೇ? ಯಡಿಯೂರಪ್ಪ ಹಾಗೂ ದಿವಂಗತ ಅನಂತ್ ಕುಮಾರ್ ಅವರು ಮಾಧ್ಯಮದ ಮುಂದೆ ಕಪ್ಪ ಕೊಡುವ ಬಗ್ಗೆ ಮಾತನಾಡಿದ್ದರು. ಯತ್ನಾಳ್ ಅವರು ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ಮಗ ವಿಜಯೇಂದ್ರ ಭ್ರಷ್ಟಾಚಾರದ ಪರಮಾವಧಿ ಎಂದು ಯತ್ನಾಳ್ ಹೇಳಿದ್ದು, ಪಿಎಸ್ಐ ಹಗರಣದಲ್ಲಿ ಅವರೂ ಭಾಗಿ ಎಂದಿದ್ದಾರೆ. ಇಂತಹ ಸಮಯದಲ್ಲಿ ಸಿಬಿಐ, ಇಡಿ ಇಲಾಖೆ ಎಲ್ಲಿ ಹೋಗುತ್ತವೆ. ಇವು ಕೇವಲ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಮಾತ್ರವೇ ಎಂದು ಪ್ರಶ್ನಿಸಿದರು.

ಸಿಎಂ ಕೇಶವ ಕೃಪದಿಂದ ಬರುವ ಆದೇಶ ಪಾಲನೆ

ಸಿಎಂ ಕೇಶವ ಕೃಪದಿಂದ ಬರುವ ಆದೇಶ ಪಾಲನೆ

ಸರಕಾರದ ಉಡಾಫೆ ನಡೆ ಬಗ್ಗೆ ಕೇಳಿದಾಗ, ' ಮುಖ್ಯಮಂತ್ರಿಗಳು ಯಾವಾಗ ಸರಕಾರದ ನಿಯಂತ್ರಣ ಹೊಂದಿರುತ್ತಾರೋ ಆಗ ಸ್ಪಂದಿಸಬಹುದು. ಈ ಸರಕಾರ ಬೊಮ್ಮಾಯಿ ಅವರ ನಿಯಂತ್ರಣದಲ್ಲಿ ಇಲ್ಲ. ಕೇಶವ ಕೃಪದಿಂದ ಬರುವ ಆದೇಶ ಪಾಲನೆ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಅವರು ಕ್ರಮ ಕೈಗೊಳ್ಳದೇ ಇರಲು ಸಾಧ್ಯವೇ? ಅವರು ಕೋಮು ಗಲಭೆ ಆದಾಗಲೂ ಸುಮ್ಮನೆ ಕೂತಿದ್ದರು. ಬೆಂಗಳೂರಿನಲ್ಲಿ ಮಳೆ ಅವಾಂತರ, ಅತಿವೃಷ್ಟಿಯಿಂದ ಊರಿಗೆ ಊರೇ ಮುಳುಗಿದಾಗ ವರದಿ ನೀಡಿ ಎಂದು ಜಿಲ್ಲಾ ಸಚಿವರಿಗೆ ಹೇಳಿದರೆ ಒಬ್ಬರೂ ಹೋಗಲಿಲ್ಲ. ಕಡೆಗೆ ಇವರೇ ಹೋದರು. ಈಗ ಇಷ್ಟೆಲ್ಲಾ ಆದರೂ ಸುಮ್ಮನೆ ಇದ್ದಾರೆ. ಇವರು ಸರಕಾರದ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ? ಅವರಿಗೆ ಸರಕಾರ, ಸಚಿವ ಸಂಪುಟದ ಮೇಲೆ ನಿಯಂತ್ರಣ ಇಲ್ಲ. ಅವರು ಆರ್‌ಎಸ್‌ಎಸ್‌ ಕೈಗೊಂಬೆಯಾಗಿದ್ದಾರೆ ಎಂದು ಲೇವಡಿ ಮಾಡಿದರು.

English summary
KPCC communication cell chairman Priyank Kharge slams the Karnataka government over the Pregnant and her twin babies' death in Tumkur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X