• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಬಾಣಿ ಸಮುದಾಯದವರಿಗೆ ಪಡಿತರ ಅಂಗಡಿ ಪರವಾನಗಿ

|

ಬೆಂಗಳೂರು, ಆ. 28: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಬೇಡಿಕೆ ಹಿಂದಿನಿಂದಲೂ ಇದೆ. ಆದರೆ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಸಮುದಾಯದ ನಾಯಕ, ಮಾಯಕೊಂಡ ಕ್ಷೇತ್ರದ ಮಾಜಿ ಶಾಸಕ ಶಿವಮೂರ್ತಿ ನಾಯಕ್ ಅವರು ವಿಧಾನಸಭೆಯಲ್ಲಿ ತಾಂಡಾಗಳು, ಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ಕೊಡುವಂತೆ ಖಾಸಗಿ ವಿಧೇಯಕ ಮಂಡನೆ ಮಾಡಲು ಮುಂದಾಗಿದ್ದರು. ಆದರೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ಕೊಟ್ಟ ಬಳಿಕ ಹಿಂದೆ ಸರಿದಿದ್ದರು. ಅದಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ ತಾಂಡಾಗಳಿಗೆ ಇನ್ನೂ ಕಂದಾಯ ಗ್ರಾಮದ ಮಾನ್ಯತೆ ಸಿಕ್ಕಿಲ್ಲ.

   Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   'ಒನ್ ನೇಷನ್, ಒನ್ ರೇಶನ್ ಕಾರ್ಡ್‌' ಜಾರಿ ಬಗ್ಗೆ ಘೋಷಣೆ

   ಈ ಮಧ್ಯೆ 100ಕ್ಕೂ ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ 3 ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 3300 ತಾಂಡಗಳಿದ್ದು, ಲಂಬಾಣಿ ಸಮುದಾಯವು ತಾಂಡಗಳಲ್ಲಿರುವುದರಿಂದ ಪಡಿತರವನ್ನು ಪಡೆಯಲು ಒಂದು ದಿನ ಕೆಲಸವನ್ನು ಬಿಟ್ಟು ಬರಬೇಕಾಗುತ್ತದೆ.

   ಕಂದಾಯ ಗ್ರಾಮಗಳಾಗಿ ಪರಿವರ್ತನೆ

   ಕಂದಾಯ ಗ್ರಾಮಗಳಾಗಿ ಪರಿವರ್ತನೆ

   ಹೀಗಾಗಿ 100 ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಿ, ಲಂಬಾಣಿ ಸಮುದಾಯದವರಿಗೆ ಪರವಾಗಿಗೆ ನೀಡಲಾಗುವುದು. ವಿದ್ಯುತ್ ಸಂಪರ್ಕ ಹೊಂದಿಲ್ಲ ತಾಂಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಅರ್ಹ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸಹಾ ಕ್ರಮಕೈಗೊಳ್ಳಲಾಗುವುದು ಎಂದರು.

   ಈ ಕುರಿತು ಪ್ರಸ್ತಾವನೆಗಳನ್ನು ಸಿದ್ದಪಡಿಸಿ ಶೀಘ್ರವಾಗಿ ಸಲ್ಲಿಸುವಂತೆ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

   ವಲಸೆ ಕಾರ್ಮಿಕರು

   ವಲಸೆ ಕಾರ್ಮಿಕರು

   ಕೋವಿಡ್ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಗೆ ವಲಸೆ ಹೋದವರು ಮರಳಿ ಅವರ ತಾಂಡಗಳಿಗೆ ಬಂದಿರುವುದರಿಂದ ಅವರಿಗೆ ಕೂಡಲೇ ಜೀವನ ನಿರ್ವಹಣೆಗೆ ಕೆಲಸ ದೊರಕಬೇಕಿದೆ. ಈ ಹಿನ್ನೆಲೆಯಲ್ಲಿ ತಾಂಡ ಅಭಿವೃದ್ದಿ ನಿಗಮವು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು. ಶೋಷಿತರ, ಬಡವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಲಂಬಾಣಿ ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು. ಪ್ರತಿಷ್ಠಾನದ ಎಲ್ಲಾ ಸದಸ್ಯರು, ಅಧಿಕಾರಿಗಳು ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದರು.

   ಪಡಿತರ ಚೀಟಿ ವಾಪಸ್; ಯಡಿಯೂರಪ್ಪಗೆ ಎಚ್ಚರಿಕೆ ಕೊಟ್ಟ ಡಿಕೆಶಿ!

   ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿ

   ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿ

   ಸಂತ ಸೇವಾಲಾಲ್ ಅವರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಮಹಾಮಠದ ಸಂತಸೇವಾಲಾಲ್ ಕಾರ್ಯಕ್ಷೇತ್ರ ಮತ್ತು ಬೋದನ ಸ್ಥಳಗಳ ಅಭಿವೃದ್ಧಿ, ನಿರ್ವಹಣೆ, ಯಾತ್ರಾತ್ರಿಗಳಿಗೆ ಮತ್ತು ಪ್ರವಾಸಿಗರಿಗೆ ಯಾತ್ರಿನಿವಾಸ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ದಿ, ಮಹಾಮಠಕ್ಕೆ ಹೊಂದಿಕೊಂಡಿರುವ ಅರಣ್ಯವನ್ನು ಪರಿಸರ ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಡಿಸಿಎಂ ಗೋವಿಂದ್ ಕಾರಜೋಳ್ ತಿಳಿಸಿದರು.

   ವ್ಯಸನಮುಕ್ತ ಕೇಂದ್ರ ಸ್ಥಾಪನೆ

   ವ್ಯಸನಮುಕ್ತ ಕೇಂದ್ರ ಸ್ಥಾಪನೆ

   ಮಧ್ಯವ್ಯಸನಿಗಿಗಳಿಗೆ ಮಧ್ಯಪಾನ ಮುಕ್ತಗೊಳಿಸಲು 1 ಕೋಟಿ ವೆಚ್ಚದಲ್ಲಿ ಮಧ್ಯವರ್ಜನ ಕೇಂದ್ರ (ಡಿಅಡಿಕ್ಷನ್ ಸೆಂಟರ್) ಕಟ್ಟಗಳನ್ನು ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಲ್ಲಿ ಪೂರ್ಣಗೊಳಿಸಿ, ಸದ್ಬಳಕೆಯಾಗುವಂತೆ ಕ್ರಮಕೈಗೊಳ್ಳುವಂತೆ ಡಿಸಿಎಂ ಕಾರಜೋಳ ಅವರು ಸೂಚಿಸಿದರು.

   ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ತಾಂಡ ಅಭಿವೃದ್ಧಿ ನಿಮಗ ಹಾಗೂ ಪ್ರತಿಷ್ಠಾನದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ್ ಸುರಪುರ್, ಪ್ರತಿಷ್ಠಾನದ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   English summary
   DCM Govinda M Karajola said that all the Tandas with 100 ration cards would be set up fair price shops. Know more about DCM Karjol's statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X