Holiday: ರಾಜ್ಯದಲ್ಲಿ ರಜೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ
Holiday: ರಾಜ್ಯದಲ್ಲಿ ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಕ್ತಾಯವಾಗಿದ್ದು, ರಜೆಯನ್ನು ಸಹ ನೀಡಲಾಗಿದೆ. ಈ ನಡುವೆಯೇ ಪದವಿ ಕಾಲೇಜಿನ ರಜೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದನ್ನು ಪ್ರಾಂಶುಪಾಲರು ಗಮನಿಲೇಬೇಕು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ರಜೆಯನ್ನು ಸಹ ಘೋಷಣೆ ಮಾಡಲಾಗಿದೆ. ಈ ನಡುವೆಯೇ ಶಿಕ್ಷಣ ಇಲಾಖೆ ರಜೆ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರಿ, ಅನುದಾನಿತ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರದ ಹೆಸರಿನಲ್ಲಿ ಪಡೆಯುತ್ತಿದ್ದ ಅನ್ಯ ಕಾರ್ಯ ನಿಮಿತ್ತದ ರಜೆಯನ್ನು ಒಂದು ಸೆಮಿಸ್ಟರ್‌ನಲ್ಲಿ ನಾಲ್ಕು ರಜೆಗೆ ಮಿತಿಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ರಜೆಯನ್ನು ಮೊದಲು ಆಯಾ ಕಾಲೇಜಿನ ಪ್ರಾಂಶುಪಾಲರು ಮಂಜೂರು ಮಾಡುತ್ತಿದ್ದರು. ಆದರೆ, ಇದೀಗ ಬದಲಾವಣೆ ಮಾಡಲಾಗಿದ್ದು, ಹೊಸ ಆದೇಶದ ಪ್ರಕಾರ ಈ ಜವಾಬ್ದಾರಿಯನ್ನು ಪ್ರಾಂಶುಪಾಲರಿಂದ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ರಜೆ ತೆಗೆದುಕೊಳ್ಳಬೇಕು ಅಂದ್ರೆ ಯಾವುದೇ ನಿಯಮಗಳು ಇರಲಿಲ್ಲ. ಯಾವಾಗ ಬೇಕಾದರೂ ರಜೆ ತೆಗೆದುಕೊಳ್ಳಬಹುದಾಗಿತ್ತು. ಪ್ರಾಂಶುಪಾಲರ ಮಟ್ಟದಲ್ಲೇ ರಜೆ ನಿರ್ಧಾರ ಆಗುತ್ತಿತ್ತು. ಆದ್ದರಿಂದ ಹೆಚ್ಚು ರಜೆ ತೆಗೆದುಕೊಳ್ಳಲಾಗಿತ್ತು. ಇದರಿಂದ ತರಗತಿಗಳಿಗೆ ತುಂಬಾ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆ ಹಳೆಯ ಪದ್ಧತಿಯನ್ನು ಬದಲಾಯಿಸಿ ಈ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಮೊದಲು 1-9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಕ್ತಾಯ ಆಗಿದ್ದು, ಬೇಸಿಗೆ ರಜೆಯನ್ನು ಸಹ ನೀಡಲಾಗಿದೆ. ಬೇಸಿಗೆ ರಜೆಗೂ ಮುನ್ನ ವಿವಿಧ ಕಾರಣಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಈ ವರ್ಷದ ಆರಂಭದಿಂದಲೂ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ರಜೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಸಿಕ್ಕಂತಾಗಿದೆ.
ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ: ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯ ಆಗುತ್ತಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ದತೆಗಾಗಿ 2025ರ ಮೇ 29ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆಯೇ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ, ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ನಿರ್ಧಾರ ಕಥಗೊಳ್ಳಲಾಗಿದೆ. ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. ಇದನ್ನು ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಪಾಲನೆ ಮಾಡಲು ತಿಳಿಸಿದೆ.
* 1 ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಫಲಿತಾಂಶವನ್ನು ಶೇಕಡ 100 ಅಂಕಗಳಿಗೆ ಕ್ರೋಢೀಕರಿಸಿ ನಿಯಮಾನುಸಾರ ಗ್ರೇಡ್ ದಾಖಲಿಸಿ SATSನಲ್ಲಿ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ 07-04-2025ರೊಳಗೆ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ 08-04-2025ರೊಳಗೆ ಇಂದೀಕರಿಸತಕ್ಕದ್ದು.
* 5, 8 ಮತ್ತು 9ನೇ ತರಗತಿಯ SA-2 ಮೌಲ್ಯಾಂಕನ ಸೇರಿದಂತೆ ಉಳಿದ 1ರಿಂದ 9 ನೇ ತರಗತಿಗಳ ಫಲಿತಾಂಶವನ್ನು ನಿಯಮಾನುಸಾರ ವಿಶ್ಲೇಷಿಸಿ, ನಿಗದಿಪಡಿಸಿದಂತೆ ದಿನಾಂಕ 8.04.2025ರಂದು ಪ್ರಾಥಮಿಕ ಶಾಲಾ ಹಂತದಲ್ಲಿ ಹಾಗೂ ದಿನಾಂಕ 09.04.2025ರಂದು ಪ್ರೌಢಶಾಲಾ ಹಂತದಲ್ಲಿ ಎರಡನೇ ಸಮುದಾಯ ದತ್ತ ಶಾಲೆ/ಪೋಷಕರ ಸಭೆ ಕರೆದು ಪ್ರಕಟಣೆ ಮಾಡುವುದು.
* ದಿನಾಂಕ 14-04-2025ರಂದು ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಆಚರಿಸಬೇಕು.
* ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್ 2025ರ ಮೊದಲನೇ ವಾರದಲ್ಲಿ ಅನುಮೋದನೆ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಹೊಂದುವುದು.
* 2025-26ನೇ ಸಾಲಿಗೆ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ 2 ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸಂಬಂಧಿಸಿದ ತಾಲ್ಲೂಕುಗಳಿಗೆ ಸರಬರಾಜು ಆದ ತಕ್ಷಣ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸುವ ಕುರಿತು ಕ್ರಮವಹಿಸುವುದು.
* ದಿನಾಂಕ 11-04-2025ರಿಂದ 28-05-2025ರ ವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದೆ. ಇದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಹಾಗೂ ಬರಪೀಡಿತ ತಾಲ್ಲೂಕುಗಳಲ್ಲಿ ರಜಾ ಅವಧಿಯಲ್ಲಿ ಮಕ್ಕಳಿಗೆ ಬಿಸಿ ಊಟ ನೀಡುವ ಕುರಿತು ಸಂಬಂಧಿಸಿದ ನಿರ್ದೇಶನಾಲಯದಿಂದ ನೀಡುವ ಸೂಚನೆಗಳಂತೆ ಕ್ರಮವಹಿಸುವುದು. ಒಂದು ವೇಳೆ ಈ ಅವಧಿಯಲ್ಲಿ ಅಧಿಕೃತ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಕೆ ಮಾಡಿಕೊಳ್ಳುವ ಸಂಬಂಧಿಸಿದ ಪ್ರಾಧಿಕಾರ ಕೋರಿದ್ದಲ್ಲಿ ಸಹಕರಿಸಲು ಸೂಚಿಸಿದೆ.












Click it and Unblock the Notifications