ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲು ಮಾರ್ಗಸೂಚಿ
ಬೆಂಗಳೂರು, ಜೂನ್ 02: 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದಿದ್ದು, ಮಕ್ಕಳು ಆಗಮಿಸುತ್ತಿದ್ದಾರೆ. ಶಾಲೆಗಳಲ್ಲಿ 'ಕ್ಷೀರಭಾಗ್ಯ ಯೋಜನೆ' ಆರಂಭಿಸುವ ಕುರಿತು ಶಾಲೆಗಳಿಗೆ, ಮುಖ್ಯ ಶಿಕ್ಷಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.
'ಕ್ಷೀರಭಾಗ್ಯ ಯೋಜನೆ'ಯಡಿ ಮಕ್ಕಳಿಗೆ ಶಾಲೆಯಲ್ಲಿ ಹಾಲು ನೀಡಲಾಗುತ್ತದೆ. 2024-25ನೇ ಸಾಲಿಗೆ ಅಗತ್ಯವಿರುವ ಹಾಲಿನ ಪುಡಿ ಆಯಾ ತಿಂಗಳ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಸಮಾಲೋಚಿಸಿ ಶಾಲಾವಾರು ಹಾಗೂ ತಾಲ್ಲೂಕುವಾರು ಬೇಡಿಕೆಯನ್ನು ಸಿದ್ಧಪಡಿಸಿ ಸಂಬಂಧಿಸಿದ ಜಿಲ್ಲೆಗಳಿಗೆ ಹಾಲಿನ ಪುಡಿ ಸರಬರಾಜುಗೊಳಿಸುವ ಹಾಲು ಒಕ್ಕೂಟ ಘಟಕಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಬೇಡಿಕೆಗೆ ಅನುಗುಣವಾಗಿ ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಸ್ವೀಕರಿಸಿ ದಾಸ್ತಾನುಗೊಳಿಸಿ ಸುರಕ್ಷಿತವಾಗಿ ನಿರ್ವಹಿಸುವುದು. ಶಾಲಾ ಪ್ರಾರಂಭದ ದಿನದಂದೇ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ (ಸಕ್ಕರೆ ಯುಕ್ತ) ಬಿಸಿ ಹಾಲನ್ನು ವಿತರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದೆ.
ಹಾಲಿನ ಪುಡಿ ಸಂಗ್ರಹ: ಪ್ರತಿ ವಿದ್ಯಾರ್ಥಿಗೆ (ವಾರದಲ್ಲಿ 5 ದಿನಗಳು ) ಪ್ರತಿ ದಿನ 150 ಮಿ. ಲೀ. ಬಿಸಿಹಾಲನ್ನು 18.00 ಗ್ರಾಂ ಹಾಲಿನ ಪುಡಿಯಿಂದ ತಯಾರಿಸಿ 10.00 ಗ್ರಾಂ ಸಕ್ಕರೆ ಬೆರಸಿ ಚೆನ್ನಾಗಿ ಕಾಯಿಸಿ ನಿಖರವಾದ ಪ್ರಮಾಣದಲ್ಲಿ (ಅಳತೆ ಲೋಟ ಬಳಸಿ) ವಿತರಿಸುವ ಕ್ರಮವನ್ನು ನಿರ್ವಹಿಸುವಂತೆ ಸೂಚಿಸಿದೆ.
ಶಾಲೆಯಲ್ಲಿ ಹಾಜರಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಾಲಿನ ಪುಡಿ ಪಮಾಣವನ್ನು ಬಳಸಿ ಬಿಸಿಹಾಲು ತಯಾರಿಸುವುದು ಹಾಗೂ ಈ ಬಗ್ಗೆ ದೈನಂದಿನ ಹಾಲಿನ ಪುಡಿ ಬಳಕೆಯ ಲಕ್ಕ ವಹಿ ನಿರ್ವಹಿಸುವುದು. ಹಾಲಿನ ಪುಡಿಯನ್ನು ಅಗತ್ಯ ಪ್ರಮಾಣದಲ್ಲಿ ಬಳಸದೇ ದಾಸ್ತಾನು ಇಡುವುದು ಹಾಗೂ ಅಪವ್ಯಯ ಮಾಡುತ್ತಿರುವುದು ಕಂಡುಬಂದಲ್ಲಿ ಶಾಲಾ ಮುಖ್ಯ ಶಿಕ್ಷಕರನ್ನು ಹಾಗೂ ಅಡುಗೆಯವನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಶ್ರೀ ಸತ್ಯ ಸಾಯಿ ಶೂರ್ ಅನ್ನಪೂರ್ಣ ಹೆಲ್ತ್ ಮಿಕ್ಸ್ ಪೌಡರ್ ಬೇಡಿಕೆ ಬಗ್ಗೆ 2024-2025ನೇ ಸಾಲಿನಿಂದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು/ ಜಿಲ್ಲೆ, ಈ ಸಂಸ್ಥೆಯವರು ಉಚಿತವಾಗಿ ಪೂರಕ ಪೌಷ್ಠಿಕ ಆಹಾರವಾಗಿ ಸಾಯಿ ಶೂರ್ ರಾಗಿ ಹಲ್ತ್ ಪೌಡರ್ ಅನ್ನು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1 ರಿಂದ 10 ನೇ ತರಗತಿಯ ಎಲ್ಲಾ ಶಾಲಾ ಮಕ್ಕಳಿಗೆ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಹಾಲಿನ ಜೊತೆಯಲ್ಲಿ ವಾರದಲ್ಲಿ 3 ದಿನಗಳು ಪ್ರತಿ ಮಗುವಿಗೆ 5 ಗ್ರಾಂ ನಂತೆ ಬೆರೆಸಿ ವಿತರಿಸಲು ಮುಂದೆ ಬಂದಿದ್ದಾರೆ.
ಇವರ ಸಹಯೋಗ ಮತ್ತು ಸಹಕಾರದಿಂದ ಕೆಎಂಎಫ್ ನವರು ಸಾಯಿ ಶೂರ್ ರಾಗಿ ಹೆಲ್ತ್ ಪೌಡರ್ ಅನ್ನು ಜಿಲ್ಲಾವಾರು ಬೇಡಿಕೆಯಂತೆ ಶಾಲೆಗಳಿಗೆ ಮುದ್ದೇನಹಳ್ಳಿ ಉತ್ಪಾದಕಾ ಘಟಕದಿಂದ ಸರಬರಾಜುಗೊಳಿಸುವ ಸಾಗಾಣಿಕೆಗಾಗಿ ಒಪ್ಪಿದ್ದು ಅದರಂತೆ ಕ್ರಮವಹಿಸುವುದು. ಸಾಗಾಣಿಕಾ ವೆಚ್ಚವನ್ನು ಕ್ಷೀರಭಾಗ್ಯ ಯೋಜನೆಯಡಿ ಕೆಎಂಎಫ್ ಸಂಸ್ಥೆಗೆ ಭರಿಸುವ ಕ್ರಮವನ್ನು ಜಿಲ್ಲಾಪಂಚಾಯತ್‌ಗಳಿಂದ ನಿರ್ವಹಿಸುವಂತೆ ಸರ್ಕಾರವು ಆದೇಶಿಸಿದ್ದು, ಇದರಂತೆ ಕ್ರಮ ಕೈಗೊಳ್ಳಬೇಕು.
ಮೊಟ್ಟೆ, ಬಾಳೆಹಣ್ಣು/ ಶೇಂಗಾ ಚಿಕ್ಕಿ ವಿತರಣೆ: 2024-25ನೇ ಸಾಲಿನಲ್ಲಿ ಜೂನ್ 2024 ರಿಂದ ಮಾರ್ಚ್ 2025 ವರೆಗಿನ ಶಾಲಾ ಅವಧಿಯಲ್ಲಿ ಒಟ್ಟು ವಾರ್ಷಿಕ 80 ದಿನಗಳಿಗೆ ರಾಜ್ಯದ ಎಲ್ಲಾ 35 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು, ವಾರದಲ್ಲಿ 2 ದಿನಗಳಂತೆ, ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ರೂ. 6 ಘಟಕ ವೆಚ್ಚದಲ್ಲಿ ವಿತರಿಸಬೇಕು.
2024-25ನೇ ಸಾಲಿನಲ್ಲಿ ಜೂನ್-2024 ರಿಂದ ಎಪ್ರಿಲ್ 2025 ವರೆಗಿನ ಶಾಲಾ ಅವಧಿಯಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆ. ಈ 8 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಶೇಕಡ 60:40 ಅನುಪಾತದಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ 50 ದಿನಗಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದೆ.
ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಾರದಲ್ಲಿ 2 ದಿನಗಳಂತೆ, ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ರೂ.6 ರ ಘಟಕ ವೆಚ್ಚದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ವೆಚ್ಚ ಭರಿಸಿ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದೆ.
ಈ ಕಾರ್ಯಕ್ರಮದಡಿ 50 ದಿನಗಳ ವಿತರಣೆಗೆ ಕೇಂದ್ರದ ಅನುದಾನ ವೆಚ್ಚ ವಾಗಲಿದ್ದು ಉಳಿದ 30 ದಿನಗಳ ಅವಧಿಗೆ ರಾಜ್ಯ ಸರ್ಕಾರದ ಅನುದಾನವನ್ನು ಬಳಸಿಕೊಂಡು 1-8 ನೇ ತರಗತಿ ವಿದ್ಯಾರ್ಥಿಗಳಿಗೆ ಒಟ್ಟು ವಾರ್ಷಿಕ 80 ದಿನಗಳಿಗೆ ಹಾಗೂ ಈ 8 ಜಿಲ್ಲೆಗಳಲ್ಲಿ 9-10 ನೇ ತರಗತಿಗೆ ಒಟ್ಟು 80 ದಿನಗಳಿಗೆ ರಾಜ್ಯ ಅನುದಾನದಲ್ಲಿ ವೆಚ್ಚ ಭರಿಸುವ ಕ್ರಮ ವಹಿಸುವುದು.
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications