ನಾಳೆ ವಾಯುಭಾರ ಕುಸಿತ ಪಕ್ಕಾ: ಕರ್ನಾಟಕದಲ್ಲಿ ಜುಲೈ 21ರವರೆಗೆ ಅತ್ಯಧಿಕ ಮಳೆ: ಹವಾಮಾನ ತಜ್ಞ CS ಪಾಟೀಲ್

ಬೆಂಗಳೂರು, ಜುಲೈ 18: ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ಇನ್ನಿಲ್ಲದಂತೆ ಆರ್ಭಟ ಶುರುವಿಟ್ಟುಕೊಂಡಿದೆ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯಲ್ಲಿ ಈ ಮಳೆ ಇನ್ನೂ 05 ದಿನ ಮುಂದುವರಿಯಲಿದೆ. ಹಲವು ಜಿಲ್ಲೆಗಳಿಗೆ ಭರ್ಜರಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸ್ಟ್ರಫ್, ಸುಳಿಗಾಳಿಯ ವೈಪರಿತ್ಯವು ತೀವ್ರಗೊಂಡಿದೆ. ಇದರ ಜೊತೆಗೆ ಬಂಗಾಳಕೊಳ್ಳಿಯಲ್ಲಿನ ಸಮುದ್ರ ಮೇಲ್ಮೈ ಸುಳಿಗಾಳಿ ಪ್ರಭಾವ ಹೆಚ್ಚಾಗಿದ್ದು, ನಾಳೆ ಅಂದರೆ ಶುಕ್ರವಾರ (ಜುಲೈ 12) ವಾಯುಭಾರ ಕುಸಿತಗೊಳ್ಳುವುದು ಬಹುತೇಕ ಖಚಿತ ಎಂದು ಹವಾಮಾನ ಇಲಾಖೆ ಬೆಂಗಳೂರಿನ ವಿಜ್ಞಾನ ಡಾ.ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.

IMD Predicts Extremely Heavy Rain in These Districts Karnataka next 5 days air pressure drop soon

ಇಂದಿನಿಂದ ಮುಂದಿನ ಐದು ದಿನಗಳ ವರೆಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರಲಿದೆ. ಇಲ್ಲಿ ಸುಮಾರು 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಬರಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಲೆನಾಡಿನ ಒಂದೆರಡು ಜಿಲ್ಲೆಗಳಲ್ಲು ವ್ಯಾಪಕ ಮಳೆ ಮುಂದುವರಿಯಲಿದೆ.

ಈ ಸಲ ದಕ್ಷಿಣ ಒಳನಾಡಿಗಿಂತಲೂ ಉತ್ತರ ಒಳನಾಡಿನಲ್ಲಿ ಮುಂಗಾರು ಹೆಚ್ಚು ಚುರುಕಾಗಿರಲಿದೆ ಎಂದು ವರದಿ ತಿಳಿಸಿದೆ. ರೆಡ್ ಅಲರ್ಟ್, ಹಳದಿ ಮತ್ತು ಯೆಲ್ಲೋ ಅಲರ್ಟ್ ಯಾವೆಲ್ಲ ಜಿಲ್ಲೆಗಳಿಗೆ ಎಷ್ಟು ದಿನ? ಇರಲಿದೆ ಎಂಬ ಮಾಹಿತಿಗೆ ಮುಂದೆ ಓದಿ.

ರೆಡ್ ಅಲರ್ಟ್ ಪಡೆದ ಜಿಲ್ಲೆಗಳ ವಿವರ

ಕರಾವಳಿಯಲ್ಲಿ ಇಂದು ಮತ್ತು ನಾಳೆ ಶುಕ್ರವಾರ 2 ದಿನ ''ಉಡುಪಿ,ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳು ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ'' ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಕೊಡಲಾಗಿದೆ. ನಂತರದ ಮೂರು ದಿನ (ಜುಲೈ 22ರವರೆಗೆ) ಇದೇ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್ ನೀಡಲಾಗಿದೆ.

IMD Predicts Extremely Heavy Rain in These Districts Karnataka next 5 days air pressure drop soon

ಕರಾವಳಿಯಲ್ಲಿ ಹೈಅಲರ್ಟ್, ಮೀನುಗಾರರಿಗೆ ಎಚ್ಚರಿಕೆ

ಸಮುದ್ರಮಟ್ಟದಲ್ಲಿ ಹವಾಮಾನ ಬದಲಾವಣೆಗಳಿಂದ ಸೃಷ್ಟಿಯಾದ ವೈಪರಿತ್ಯಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಗಾಳಿಯ ವೇಗ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ನಿರಂತರ ಗಾಳಿಯ ವೇಗವು 40ರಿಂದ 50 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿದಂತೆ ಸೂಚನೆ ನೀಡಲಾಗಿದೆ.

ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳು

ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಲಕ್ಷಣಗಳು ಇವೆ. ಹೀಗಾಗಿ ಬೆಳಗಾವಿಗೆ ಇಂದಿನಿಂದ ಐದು ದಿನ, ಬೀದರ್‌ಗೆ ಜುಲೈ 20ರಿಂದ ಮೂರು ದಿನ ಹಾಗೂ ಹಾಸನಕ್ಕೆ ಮುಂದಿನ ನಾಲ್ಕು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಬೆಂಗಳೂರಿಗೆ ಹಗುರ ಮಳೆ ಸಾಧ್ಯತೆ

ಇದರೊಂದಿಗೆ ಬೆಂಗಳೂರು ನಗರಲ್ಲಿ ಮುಂದಿನ ನಾಲ್ಕು ದಿನ ಹಗುರ ಮಳೆ ನಿರೀಕ್ಷೆ ಇದೆ. ಉಳಿದಂತೆ ಒಂದಷ್ಟು ಒಳನಾಡಿನ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ, ಮಬ್ಬು ವಾತಾವರಣ ಕಂಡು ಬರಲಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಸೋನೆ ಮಳೆ, ಆಗಾಗ ಜೋರು ಮಳೆ ದಾಖಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+