Rain Alert: ರಾಜ್ಯದಲ್ಲಿ ಮುಂದಿನ 48 ಗಂಟೆಗೆ ಭಾರೀ ಮಳೆ: ನಂತರ ಮಳೆಯಾರ್ಭಟ ಇಳಿಕೆ

ಬೆಂಗಳೂರು, ಜುಲೈ 21: ಕರ್ನಾಟಕ ರಾಜ್ಯದಲ್ಲಿ ಹಲವು ದಿನಗಳಿಂದ ಅಬ್ಬರಿಸಿದ್ದ ಮಳೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ, ಮಳೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೌದು, ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ ಅಬ್ಬರಿಸಲಿದೆ. ಕರಾವಳಿ ರೆಡ್ ಅಲರ್ಟ್‌ನಿಂದ ಆರೆಂಜ್ ಅಲರ್ಟ್‌ಗೆ ಮರಳಿವೆ. ಮಳೆನಾಡಿನ ಜಿಲ್ಲೆಗಳಿಗೂ ಮಳೆ ಕೊಂಚ ಕಡಿಮೆ ಆಗುವ ನಿರೀಕ್ಷೆ ಇವೆ.

IMD Prediction Lihgt- Heavy Rain Next 48 Hours in These Districts of Karnataka Forecast

ಮುಂದಿನ 48 ಗಂಟೆ ಭಾರೀ ಮಳೆ ಸಂಭವ

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ವ್ಯಾಪಕ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇಲ್ಲೆಲ್ಲೆ ಮಳೆ 11-20 ಸೆಂಟಿ ಮೀಟರ್ ವರೆಗೆ ಮಳೆ ಬರಬಹುದು ಎನ್ನಲಾಗಿದೆ.

ಉಳಿದಂತೆ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಹಾಸನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಅಲ್ಲಲ್ಲಿ ಬಿಟ್ಟು ಬಿಡದೇ ಧಾರಾಕಾರ ಮಳೆ ಆಗಲಿದೆ. ಒಂದೆರೆಡು ಕಡೆಗಳಲ್ಲಿ ಸಾಮಾನ್ಯ ಮಳೆ ಆಗಲಿದ್ದು, ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.

ಜುಲೈ 23ರಿಂದ ಕೆಲವೆಡೆ ಮಳೆ ಇಳಿಕೆ?

ನಂತರ ಜುಲೈ 23ರಿಂದ ವಾಯುಭಾರ ಕುಸಿತದ ತೀವ್ರತೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಬಹುದು. ಮಳೆನಾಡಿಗೆ ಆ ಹೊತ್ತಿಗೆ ಮಳೆ ಆರ್ಭಟ ಇಳಿಕೆ ಆಗುವ ಲಕ್ಷಣಗಳು ಇವೆ.

IMD Prediction Lihgt- Heavy Rain Next 48 Hours in These Districts of Karnataka Forecast

ಇನ್ನೂ ಅರಬ್ಬಿ ಸಮುದ್ರದಲ್ಲಿನ ವೈಪರಿತ್ಯದಿಂದಾಗಿ ಮುಂದಿನ ನಾಲ್ಕೈದು ದಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಬಾಗಲಕೋಟೆ, ವಿಜಯಪುರ ಭಾಗಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಇಡಿ ದಿನ ಮೋಡ ಕವಿದ ವಾತಾವರಣಕಂಡು ಬರಲಿದೆ. ಕೆಲವೆಡೆ ಆಗಾಗ ಜಿಟಿ ಜಿಟಿ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.

ಮಹಿಳೆಯರು, ಮಕ್ಕಳು, ವಯೋವೃದ್ಧರು ಚಳಿ ಹೆಚ್ಚಿರುವ ಕಾರಣ ಆರೋಗ್ಯದ ಕಡೆಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಈ ಜಿಲ್ಲೆಗಳಿಗೆ ಮಳೆಯೇ ಇಲ್ಲ

ಉಳಿದಂತೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಕಡೆಗಳಲ್ಲಿ ಮಳೆಯ ವಾತಾವರಣ ಇಲ್ಲ. ಆಗಾಗ ಮಬ್ಬು ವಾತಾವರಣ ಕಂಡು ಬರುತ್ತದೆ. ಬಿಟ್ಟರೆ ಜೋರು ಮಳೆ ನಿರೀಕ್ಷೆ, ಮುನ್ಸೂಚನೆ ಇಲ್ಲದಾಗಿದೆ.

ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಇದೇ ರೀತಿ ಸೋನೆ ಮಳೆ ಇಲ್ಲವೇ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಆಗಾಗ ಬಿಸಲಿನ ದರ್ಶನವು ಆಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಜೋರು ಮಳೆಯ ಮುನ್ಸೂಚನೆ ಸದ್ಯಕ್ಕೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+