Karnataka Rains: ಚಂಡಮಾರುತ ಎಫೆಕ್ಟ್: ರಾಜ್ಯದ 07 ಜಿಲ್ಲೆಗಳಿಗೆ ಮೂರು ದಿನ ಭಾರೀ ಮಳೆ ಎಚ್ಚರಿಕೆ
ಬೆಂಗಳೂರು, ಸೆಪ್ಟಂಬರ್ 07: ಹವಾಮಾನದಲ್ಲಿ ಬದಲಾಗುತ್ತಿರುವ ನಿರಂತರ ಬದಲಾವಣೆ, ಸೃಷ್ಟಿಯಾಗಿರುವ ವೈಪರಿತ್ಯಗಳ ಪ್ರಭಾವದಿಂದಾಗಿ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾದಲ್ಲಿ ಪ್ರವಾಹದ ಸೃಷ್ಟಿಯಾಗಿದೆ. ತಮಿಳುನಾಡು ರಾಜ್ಯ ಉತ್ತಮ ಮಳೆ ಆಗುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ಬಿರುಗಾಳಿ ಸಹಿತ 13 ಸೆಂಟಿ ಮೀಟರ್‌ವರೆಗೂ ಭಾರೀ ಮಳೆ ಆಗಲಿದೆ ಎಂದು IMD ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಆಸ್ನಾ' (Cyclone Asna) ಚಂಡಮಾರುತ ಪ್ರಭಾವವು ಕರ್ನಾಟಕದ ಮೇಲೂ ಬೀರುತ್ತಿದೆ. ಸದ್ಯ ಸಮುದ್ರದ ಮೇಲ್ಮೈನಿಂಧ ಚಂಡಮಾರುತದ ಪರಿಚಲನೆಯು 7.6 ರವರೆಗೆ ವಿಸ್ತರಿಸಿದೆ. ಮೂಲ ಸ್ಥಳದಿಂದ ಚಂಡಮಾರುತವು ನೈಋತ್ಯಕ್ಕೆ ವಾಲುತ್ತದೆ. ನಂತರ ನಿಧಾನವಾಗಿ ಉತ್ತರಾಭಿಮುಖವಾಗಿ ಚಲಿಸಲಿದೆ.

ಮುಂದೆ ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಗಂಗಾನದಿಯ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಬಾಂಗ್ಲಾದೇಶದ ಕರಾವಳಿಯ ಪಕ್ಕದ ಪ್ರದೇಶಗಳತ್ತ ಸಾಗುವ ಈ ಚೆಂಡಮಾರುತವು ಸೆಪ್ಟೆಂಬರ್ 09ರಂದು ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ನಂತರ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ, ಜಾರ್ಖಂಡ್ ಸೇರಿ ಇನ್ನಿತರ ಪ್ರದೇಶಗಳಲ್ಲಿ ತನ್ನ ಪ್ರಭಾವ ಬೀರುವ ನಿರೀಕ್ಷೆ ಇದೆ.
ಕರ್ನಾಟಕದ ಮೇಲೆ ಏನಿದೆ ಪ್ರಭಾವ
ಚಂಡಮಾರುತ, ಸ್ಟ್ರಫ್ ಪ್ರಭಾವದಿಂದಾಗಿ ಕರ್ನಾಟಕದ 07 ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಲಕ್ಷಣ ಇದೆ. ಈ ಪೈಕಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯಲಿದೆ.

ಮುಂದಿನ ಮೂರು ದಿನಗಳಲ್ಲಿ ದಿನ ಬಿಟ್ಟು ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಹೀಗಾಗಿ ಭಾರಿ ಮಳೆ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಈ ಜಿಲ್ಲೆಗಳ ಹೊರತಾಗಿ ಉಳಿದ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತ ಆ ಭಾಗದಲ್ಲಿ ಯಾವುದೇ ಗಂಭೀರ ಸ್ವರೂಪದ ಮಳೆಯ, ಹವಾಮಾನ ಬದಲಾವಣೆಯ ಲಕ್ಷಣಗಳು ಇಲ್ಲ ಎನ್ನಲಾಗಿದೆ.
ಶುಕ್ರವಾರ ಬಿದ್ದ ಮಳೆ ಪ್ರಯಾಣ? ಎಲ್ಲೆಲ್ಲಿ?
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಅದರ ವಿವರ ನೋಡುವುದಾದರೆ, ಉತ್ತರ ಕನ್ನಡದಲ್ಲಿ 89ಮಿ.ಮೀ, ಉಡುಪಿಯಲ್ಲಿ 86ಮಿ.ಮೀ, ಶಿವಮೊಗ್ಗ 65 ಮಿ.ಮೀ, ದಕ್ಷಿಣ ಕನ್ನಡ 59ಮಿ.ಮೀ, ಬೀದರ್ 53ಮಿ.ಮೀ, ಚಿಕ್ಕಮಗಳೂರು 53ಮಿ.ಮೀ, ಹಾಸನ 32ಮಿ.ಮೀ, ಬಳ್ಳಾರಿ 32 ಮಿ.ಮೀ, ಬಾಗಲಕೋಟೆ 31ಮಿ.ಮೀ, ವಿಜಯಪುರ 24ಮಿ.ಮೀ, ಬೆಳಗಾವಿ 23ಮಿ.ಮೀ, ರಾಯಚೂರು 21ಮಿ.ಮೀ ಮತ್ತು ಕೊಡಗಿನಲ್ಲಿ 19ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications