Karnataka Rain: ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ
ರಾಜ್ಯದಲ್ಲಿ ಜನರಿಗೆ ಫೆಬ್ರವರಿ ತಿಂಗಳಿನಲ್ಲೇ ಬೇಸಿಗೆ ಬಿಸಿಲಿನ ಅನುಭವವಾಗುತ್ತಿದೆ. ಕಳೆದ ಎರಡು ವಾರಗಳಿಂದ ಚಳಿಗಾಲ ಮುಗಿದು ಬೇಸಿಗೆ ಕಾಲ ಶುರುವಾದಂತೆ ಭಾಸವಾಗುತ್ತಿದೆ. ಹೀಗೆ ರಾಜ್ಯದ ಹಲವೆಡೆ ಹವಮಾನ ಬದಲಾಗುತ್ತಿದ್ದು, ಕೆಲವೆಡೆ ಮಳೆ, ಚಳಿ, ಒಣಹವೆ ಮುಂದುವರೆದಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಬೀಳಲಿದೆ ಎಂದು ತಿಳಿಯೋಣ.
ಹವಾಮಾನ ಇಲಾಖೆಯ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 16,17,18ರಂದು ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಹಗುರ ಮಳೆಯಾಗಲಿದೆ.

ರಾಯಚೂರು, ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ಹಾವೇರಿ, ಕಲಬುರಗಿ, ಕೊಪ್ಪಳ, ಬೀದರ್, ಧಾರವಾಡ, ಗದಗ, ಬೆಂಗಳೂರು ನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ ಮತ್ತು ವಿಜಯನಗರ ಸೇರಿದಂತೆ ಹಲವೆಡೆ ಶೀತಗಾಳಿ ಇರಲಿದೆ. ಹಾಗಾದರೆ ದೇಶದ ಹಲವೆಡೆ ಹವಾಮಾನ ಹೇಗಿರಲಿದೆ ಎಂದು ತಿಳಿಯೋಣ.
ದೆಹಲಿ ಹವಾಮಾನ ವರದಿ
ದೆಹಲಿ, ನೋಯ್ಡಾ ಮತ್ತು ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಮುಂದಿನ ಕೆಲ ದಿನ ಗೋಚರತೆ ಬಹುತೇಕ ಶೂನ್ಯವಾಗಿ ಇರಲಿದೆ. ಇದು ವಾಹನ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಹಿಮಾಚಲ ಪ್ರದೇಶ, ಉತ್ತರಖಂಡ್, ಉತ್ತರಪ್ರದೇಶನ ಹಲವೆಡೆ ದಿನವಿಡೀ ಹಗುರ ಮಳೆ ಮತ್ತು ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 10°C ಮತ್ತು ಗರಿಷ್ಠ ತಾಪಮಾನ 19°C ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಚಳಿ ಕೂಡ ಮುಂದುವರೆಯುವ ಸಾಧ್ಯತೆ ಇದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಮಂಗಳವಾರ 275 ರಷ್ಟಿದ್ದು, ಇದು ಕಳಪೆ ವರ್ಗಕ್ಕೆ ಸೇರಿದೆ. ನಗರದ 18 ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿಯೇ ಉಳಿದಿದೆ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಮಂಜು ಹೆಚ್ಚಾಗಲಿದ್ದು ವಾಹನ ಸಂಚಾರ, ವಿಮಾನ, ರೈಲು ಸೇವೆಗಳಲ್ಲಿ ತಡವಾಗುವ ಸಾಧ್ಯತೆ ಇದೆ.
ಉತ್ತರ ಪ್ರದೇಶ ಹವಾಮಾನ ಪರಿಸ್ಥಿತಿ
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ದಟ್ಟವಾದ ಮಂಜಿನ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಗುರ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜನವರಿ 16 ರವರೆಗೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ಮಂಜಿನಿಂದ ಕೂಡಿರುತ್ತದೆ. ಹೀಗಾಗಿ ಉತ್ತರಪ್ರದೇಶ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರಿಗೆ ಹವಾಮಾನ ಬದಲಾವಣೆಯ ಬಗ್ಗೆ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ.
ಇನ್ನೂ ಹಿಮಾಚಲ ಪ್ರದೇಶ, ಉತ್ತರಖಂಡ್ ಶೀತ ಅಲೆ ಮುಮದುವರೆಯಲಿದ್ದು ವಾತಾವರಣ ತಂಪಾಗಿರಲಿದೆ. ರಾಜಸ್ಥಾನ, ಗುಜರಾತ್ ಈ ಭಾಗಗಳಲ್ಲಿ ಒಣಹವೆ ಮುಂದುವರೆಯಲಿದೆ.












Click it and Unblock the Notifications