Rain Alert: ಕೆಲವೇ ಕ್ಷಣಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಐಎಂಡಿ
ರಾಜ್ಯಕ್ಕೆ ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕೆಲವು ದಿನಗಳಿಂದ ಬಿಡುವು ಪಡೆದುಕೊಂಡಿರುವ ಮಳೆ, ಮತ್ತೆ ಅಬ್ಬರಿಸಲು ಸಜ್ಜಾಗಿದೆ.
ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಚದುರಿದಂತೆ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಬೆಂಗಳೂರು ಮುನ್ಸೂಚನೆ ನೀಡಿದೆ.

ಬಲವಾದ ಗಾಳಿಯೊಂದಿಗೆ ಮಳೆ
ದೇಶದ ದಕ್ಷಿಣ ಪ್ರರ್ಯಾಯ ಪ್ರಸ್ಥಭೂಮಿ ಭಾಗವಾದ ಅಕ್ಷಾಂಶ 8° ಉತ್ತರಕ್ಕೆ ವಿರುದ್ಧ ದಿಕ್ಕಿನಿಂದ ಪ್ರಬಲವಾದ ಗಾಳಿ ಬೀಸುತ್ತಿದ್ದು ಹಾಗೂ ದಕ್ಷಿಣ ಕೇರಳದ ಆಗ್ನೇಯ ಆರೇಬಿಯನ್ ಸಮುದ್ರದ ಉಷ್ಣವಲಯದಲ್ಲಿ ಚಂಡಮಾರುತ ಪರಿಚಲನೆಯು ಗೋಚರವಾಗಿದ್ದು, ಕೇರಳದ ಪಶ್ಚಿಮಕ್ಕೆ ಕರಾವಳಿಯುದ್ದಕ್ಕೂ ಬೀಸುತ್ತಿರುವ ಪ್ರಬಲ ಮಾರುತಗಳ ಪರಿಣಾಮ, ಮುಂದಿನ 7 ದಿನಗಳಲ್ಲಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ಕೆಲವೆಡೆ ವ್ಯಾಪಕವಾಗಿ ಬಿರುಗಾಳಿ ಸಹಿತ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ. ಜೂನ್ 1 ರಿಂದ 3ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದೆ. ಹಾಗೂ ಮೇ 31 ರಿಂದ ಜೂನ್ 3ರವರೆಗೆ ರಾಜ್ಯದಾದ್ಯಂತ ಪ್ರಬಲ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಬೆಂಗಳೂರಿಗೆ ಮಳೆ
ಕಳೆದ ಕೆಲವು ದಿನಗಳಿಂದ ಬೆಂಗಳೂರಿಗೆ ಮಳೆ ಬಿಡುವು ಕೊಟ್ಟಿದ್ದು, ಮತ್ತೆ ಅಬ್ಬರಿಸುವ ಮುನ್ಸೂಚನೆ ಕೊಟ್ಟಿದೆ. ಶುಕ್ರವಾರದಿಂದ ಮತ್ತೆ ವ್ಯಾಪಕ ಮಳೆ ಆರಂಭವಾಗಲಿದ್ದು, ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications