"ಈ ವಿಷಯ ಕೇಳಿದ್ರೆ ಬಿಜೆಪಿಯವರು ಓಡೋಡಿ ಬರ್ತಾರೆ ಬಿಡ್ರಿ"

ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣ ಇದೀಗ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿದೆ. ಕರ್ನಾಟಕದಲ್ಲಿ ಈ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಭಾವಿ ಸಚಿವ ಬಿಜೆಪಿ ಸರಿಯಾಗಿಯೇ ಟಾಂಗ್‌ ಕೊಟ್ಟಿದ್ದಾರೆ. ಬಿಜೆಪಿಗೆ ಮುಟ್ಟಿನೋಡಿಕೊಳ್ಳುವಂತಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಹಳೇಯ ಹುಬ್ಬಳ್ಳಿಯಲ್ಲಿ ಎರಡು ಮೂರು ವರ್ಷಗಳ ಹಿಂದೆ, ಬಿಜೆಪಿಯ ಆಡಳಿತ ಅವಧಿಯಲ್ಲಿ ಕೋಮುಗಲಭೆ ಸಂಭವಿಸಿತ್ತು. ಆ ಕೇಸ್‌ನಲ್ಲಿ ಹಲವರು ಮೇಲಿನ ಪ್ರಕರಣವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈಬಿಟ್ಟಿದೆ. ಇದೀಗ ಈ ವಿಚಾತ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ತನ್ನ ಓಲೈಕೆಯ ರಾಜಕಾರಣ ಬಿಡಬೇಕು ಎಂದು ಬಿಜೆಪಿ ಹೇಳಿದೆ. ಆದರೆ, ಮುಸ್ಲಿಮರನ್ನು ಕಂಡರೆ ಸಾಕು ಇವರಿಗೆ ಆಗಲ್ಲ ಎಂದು ಕಾಂಗ್ರೆಸ್‌ನ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

If the BJP hears this they will run away

ರಾಜ್ಯ ಸರ್ಕಾರ ಪ್ರಕರಣ ಹಿಂಪಡೆದಿರುವ ಬಗ್ಗೆ ಮಾತನಾಡಿರುವ ಸಚಿವ ಸಂತೋಷ್‌ ಲಾಡ್‌ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಮಾತ್ರವಲ್ಲ. ಇದರೊಂದಿಗೆ ನಾವು 42 ಕೇಸ್‌ಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಪ್ರಮುಖವಾಗಿ ಹಳೇ ಹುಬ್ಬಳ್ಳಿ ಕೇಸ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಕ್ಯಾಬಿನೆಟ್‌ನಲ್ಲಿ ಉಪಸಮಿತಿ ಮಾಡಿ, ವರದಿ ಕೊಟ್ಟಿದೆ. ಆ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ಬಿಜೆಪಿಗೆ ಸರಿಯಾಗಿಯೇ ಕ್ಲಾಸ್‌ ತಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋರ್ಟ್‌ ಏನ್ ಹೇಳುತ್ತೆ ಎಂಬುದು ವಾದ. ಬಿಜೆಪಿಯವರು ಬಿಲ್ಕೀಸ್ ಬಾನು ಕೇಸ್‌ನಲ್ಲಿ ಎರಡು ವರ್ಷ ಮುಂಚೆನೇ ಅಪರಾಧಿಗಳನ್ನು ಹೊರಗೆ ಬಿಟ್ಟರು. ಯಾವ ಆಧಾರದ ಮೇಲೆ ಹೊರಗೆ ಬಿಟ್ರಂತೆ. ಶಿಕ್ಷೆ ಮುಗಿಯದೆ ಗುಜರಾತ್ ಸರ್ಕಾರ ಅವರನ್ನು ಬಿಟ್ಟಿ ಕಳ್ಸಿತ್ತು ಎಂದಿದ್ದಾರೆ.

ಬಾಬಾ ರಾಮ್ ರಹೀಮ್ 15 ಬಾರಿ ಪೇರೋಲ್‌ನಲ್ಲಿ ಹೊರ ಬರ್ತಾರೆ. ಇದರ ಅರ್ಥ ಏನು, ಇವ್ರು ಮಾಡೋದು ತುಷ್ಟೀಕರಣ ರಾಜಕಾರಣ ಅಲ್ಲವಾ. ಸಹಜವಾಗಿ ಈ ರೀತಿ ಬಿಡುಗಡೆಯಾಗುವುದು ಇದೆ. ಮುಸ್ಲಿಮರು ಅಂತ ಅಂದಕೂಡಲೇ ಬಿಜೆಪಿಯವರು ಬರ್ತಾರೆ. ಬಿಜೆಪಿ ಆರೋಪಕ್ಕೆ ನಾವು ಉತ್ತರ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಇಂತಹ ಎಷ್ಟೋ ಘಟನೆಗಳು ಆಗಿವೆ. ಬಿಜೆಪಿಯವರಿಗೆ ಈ ಬಗ್ಗೆ ಕೇಳಬೇಕು ಅಲ್ಲವೇ. ಕ್ಯಾಬಿನೆಟ್ ನಿರ್ಧಾರಕ್ಕೆ ನಾನು ನಿಂತಿದ್ದೇನೆ. ಇನ್ನೂ 42 ಕೇಸ್ ವಾಪಾಸ್ ಪಡೆದಿದ್ದೇವೆ. ಅದರಲ್ಲಿ ಪೊಲೀಸ್ ಮೇಲೆ ಹಲ್ಲೆ ಆಗಿಲ್ವಾ, ಬಿಡೋಕೆ ಕಾರಣ ನೂರು ಇರುತ್ತೆ ಕೇಳಿ ಎಂದಿದ್ದಾರೆ. ಈ ಮೂಲಕ ಕೇಸ್‌ ಹಿಂಪಡೆದಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ವಿನಯ್ ಕುಲಕರ್ಣಿ ಕೇಸ್ ಸಿಬಿಐಗೆ ನೀಡುವಂತೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನಾತ್ಮಕವಾಗಿ ಅವರೇನು ಒತ್ತಾಯ ಮಾಡುತ್ತಾರೆ, ಮಾಡಲಿ. ಸರ್ಕಾರ ನಿರ್ಧಾರ ತಗೆದುಕೊಳ್ಳುತ್ತೆ. ಅದರ ಬಗ್ಗೆ ನಾನೇನು ಮಾತನಾಡೋಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+