ರಶ್ಮಿ ಮಹೇಶ್ ಹೆಚ್ಚುವರಿ ಹೊರೆ ಇಳಿಸಿದ ಸರ್ಕಾರ

ಬೆಂಗಳೂರು, ಅ.29: ಪ್ರಾದೇಶಿಕ ಆಯುಕ್ತೆ ಹಾಗೂ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆ ಮಹಾನಿರ್ದೇಶಕಿ ರಶ್ಮಿ ಮಹೇಶ್‌ ಅವರ ಮೇಲಿದ್ದ ಹೆಚ್ಚುವರಿ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರ ಇಳಿಸಿದೆ. ಪ್ರಾದೇಶಿಕ ಆಯುಕ್ತ ಸ್ಥಾನಕ್ಕೆ ಕುಂಜಪ್ಪ ಅವರ ತರಲಾಗಿದೆ.

ಖಡಕ್ ಐಎಎಸ್ ಅಧಿಕಾರಿಯೆಂದು ಹೆಸರು ಮಾಡಿರುವ ರಶ್ಮಿ ಮಹೇಶ್ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರಿ ಕೋಟಾಕ್ಕೆ ಮೆಡಿಕಲ್ ಸೀಟ್‍ಗಳನ್ನು ನೀಡದ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದಿದ್ದರು. ರಶ್ಮಿ ಮಹೇಶ್ ತಿರುಗಿ ಬಿದ್ದ ಕೂಡಲೇ ಸರ್ಕಾರ ಅವರಿಗೆ ಸುದೀರ್ಘ ರಜೆ ಮಂಜೂರು ಮಾಡಿತ್ತು. ಬಳಿಕ ಅವರನ್ನು ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು.[ರಶ್ಮಿ ಮಹೇಶ್ ಬಗ್ಗೆ ಓದಿ]

ATI DG Rashmi Relieved of Addl Charge

ಮೈಸೂರು ಆಡಳಿತ ತರಬೇತಿ ಕೇಂದ್ರದ ಉದ್ಯೋಗಿ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ನಡೆದ ಹಲ್ಲೆ ಪ್ರಕರಣ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ್ದ ರಶ್ಮಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಹಿರಿಯ ಅಧಿಕಾರಿ ಅಮಿತಾ ಪ್ರಸಾದ್ ಅವರ ಅವಧಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ಉಳಿದಂತೆ ಎಸ್.ಎಸ್.ಪಟ್ಟಣಶೆಟ್ಟಿ ಉಡುಪಿ ಜಿಲ್ಲಾಧಿಕಾರಿಯಾಗಿ ಎರಡು ತಿಂಗಳನ್ನು ಪೂರೈಸುವ ಮೊದಲೇವರ್ಗಾವಣೆಗೊಂಡಿದ್ದಾರೆ. ಇದರಿಂದ ಕಳೆದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಜಿಲ್ಲೆ ಮೂರನೇ ಡಿಸಿಯನ್ನು ಕಾಣುವಂತಾಗಿದೆ. ಹೊಸ ಜಿಲ್ಲಾಧಿಕಾರಿಯಾಗಿ ಡಾ.ಆರ್.ವಿಶಾಲ್ ನೇಮಕಗೊಂಡಿದ್ದಾರೆ.

ಎಸ್.ಎಸ್.ಪಟ್ಟಣಶೆಟ್ಟಿಯವರನ್ನು ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪಟ್ಟಣಶೆಟ್ಟಿ ಅವರ ಸ್ಥಾನಕ್ಕೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಯಾಗಿದ್ದ ಡಾ.ಆರ್.ವಿಶಾಲ್‌ರನ್ನು ನೇಮಿಸಲಾಗಿದೆ.

2004ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಡಾ.ಆರ್.ವಿಶಾಲ್, ಹುಬ್ಬಳ್ಳಿಯವರಾಗಿದ್ದು, ಅಲ್ಲಿನ ಕಿಮ್ಸ್‌ನಲ್ಲಿ ಎಂಬಿಬಿಎಸ್ ಪದವೀಧರರು. ಐಎಎಸ್‌ನಲ್ಲೂ ಅವರು ಅಗ್ರರ್ಯಾಂಕ್ ಗಳಿಸಿದ ಪ್ರತಿಭಾನ್ವಿತರು. ಡಾ.ವಿಶಾಲ್ ಈ ಮೊದಲು ಗುಲ್ಬರ್ಗದ ಜಿಲ್ಲಾಧಿಕಾರಿಯಾಗಿದ್ದರಲ್ಲದೇ ಹಣಕಾಸು ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+