ಎಚ್ ಡಿಕೆ ವಿರುದ್ಧ ಸಾಕ್ಷ್ಯ ಮಂಗಳವಾರ ಸಲ್ಲಿಸಲಿದ್ದಾರೆ ಜನಾ ರೆಡ್ಡಿ

ವಿಜಯಪುರ, ಜೂನ್ 5 : ಮಾಜಿ ಸಚಿವ- ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಹಳೆ ಖದರ್ ಗೆ ಮರಳುತ್ತಿರುವಂತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಅವರಿಗೆ ವಿಪರೀತ ಅಹಂಕಾರ. ತಾವೇ ಎಲ್ಲ ರೀತಿಯೂ ಸರಿ ಎಂಬ ಮನೋಭಾವ ಇದೆ. ನನಗೆ ಅವರ ರೀತಿ ಅಹಂಕಾರ ಇಲ್ಲ ಎಂದಿದ್ದಾರೆ.

ಏಕೆ ಇಷ್ಟೆಲ್ಲ ಮಾತನಾಡಿದರೋ ಅಂದುಕೊಳ್ಳುತ್ತಿದ್ದೀರಾ? ಜಂತಕಲ್ಲು ಮೈನಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತಮ್ಮ ಬಳಿಯಿರುವ ಸಾಕ್ಷ್ಯ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಅದರ ಪ್ರಕಾರ, ಎಸ್ ಐಟಿಗೆ ಮಂಗಳವಾರ ಸಾಕ್ಷ್ಯ ನೀಡುತ್ತೇನೆ ಎಂದು ಹೇಳಿದ್ದಾರೆ.[ಎಚ್ಡಿಕೆ ವಿರುದ್ಧ ಸಾಕ್ಷಿ ಒದಗಿಸಲು ಕಾಲಾವಕಾಶ ಕೇಳಿದ ಗಾಲಿ ರೆಡ್ಡಿ!]

I will submit evidence to SIT according to Supreme Court direction: Janardhana Reddy

ಜಂತಕಲ್ಲು ಮೈನಿಂಗ್ ವಿಚಾರದಲ್ಲಿ ಕುಮಾರಸ್ವಾಮಿ ಅವರು ನಿಯಮ ಮೀರಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ ತಮ್ಮ ಬಳಿ ಇರುವ ಸಾಕ್ಷ್ಯವನ್ನು ಎಸ್ ಐಟಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೂಚಿಸಿತ್ತು.[ಮಗ ಕಿರೀಟಿಗಾಗಿ ಜನಾರ್ದನ ರೆಡ್ಡಿ ಸಿನಿಮಾ ನಿರ್ಮಾಣ!]

ಈ ಬಗ್ಗೆ ಪ್ರಶ್ನಿಸಿದಾಗ, ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+