ಎಚ್ಡಿಕೆ ವಿರುದ್ಧ ಸಾಕ್ಷಿ ಒದಗಿಸಲು ಕಾಲಾವಕಾಶ ಕೇಳಿದ ಗಾಲಿ ರೆಡ್ಡಿ!
2006ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿ ಗಣಿಧಣಿಗಳಿಂದ 150 ಕೋಟಿ ರು ಲಂಚ ಪಡೆದಿದ್ದರು ಎಂಬ ಆರೋಪ ಮಾಡಿದ್ದ ಅಂದಿನ ಬಿಜೆಪಿ ಎಂಎಲ್ ಸಿ ಜನಾರ್ದನ ರೆಡ್ಡಿಗೆ ಇಂದು ಎಸ್ ಐಟಿ ಮುಂದೆ ಸಾಕ್ಷಿಯಾಗಿ ನಿಂತಿದ್ದಾರೆ.
ಬೆಂಗಳೂರು, ಮೇ 19: 2006ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿ ಗಣಿಧಣಿಗಳಿಂದ 150 ಕೋಟಿ ರು ಲಂಚ ಪಡೆದಿದ್ದರು ಎಂಬ ಆರೋಪ ಮಾಡಿದ್ದ ಅಂದಿನ ಬಿಜೆಪಿ ಎಂಎಲ್ ಸಿ ಜನಾರ್ದನ ರೆಡ್ಡಿಗೆ ಇಂದು ಎಸ್ ಐಟಿ ಮುಂದೆ ಸಾಕ್ಷಿಯಾಗಿ ನಿಂತರು.
ವಿಚಾರಣೆ ಬಳಿಕ ಮಾತನಾಡಿದ ಗಾಲಿ ರೆಡ್ಡಿ, ಎಸ್ ಐಟಿಗೆ ಸೂಕ್ತ ಸಾಕ್ಷಿ ಒದಗಿಸಿದ್ದೇನೆ. ಹೆಚ್ಚಿನ ಸಾಕ್ಷಿ ಒದಗಿಸಲು ಮೂತು ವಾರಗಳ ಕಾಲ ಕಾಲಾವಕಾಶ ಕೋರಿದ್ದೇನೆ. ಎಸ್ ಐಟಿ ಅಧಿಕಾರಗಳು ಇದಕ್ಕೆ ಒಪ್ಪಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯ ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ 2006ರಂದೇ ಯಾವುದೇ ಸಾಕ್ಷಿ ಒದಗಿಸದ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಏನು ಸಾಕ್ಷಿ ಒದಗಿಸುತ್ತಾರೆ ಎಂಬ ಕುತೂಹಲವಿದೆ.[ಎಚ್ಡಿಕೆ ಗಣಿ ಲಂಚ ಸಿಡಿ ಪ್ರಕರಣಕ್ಕೆ ಮತ್ತೆ ಜೀವ, ಗಾಲಿ ರೆಡ್ಡಿಗೆ ನೋಟಿಸ್]

ವಿಶೇಷ ತನಿಖಾ ದಳ(ಎಸ್‌ಐಟಿ) ಐಜಿಪಿ ಚರಣ್ ರೆಡ್ಡಿ ಮುಂದೆ ಹಾಜರಾಗಿರುವ ಜನಾರ್ದನರೆಡ್ಡಿ ಅವರು 150 ಕೋಟಿ ಗಣಿ ಕಪ್ಪ ಕೇಸಲ್ಲಿ ನನ್ನನ್ನು ಸಾಕ್ಷಿಯಾಗಿಸಿದ್ದಾರೆ. ಈ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿ ಸಾಕ್ಷಿ ನುಡಿಯಲಿದ್ದೇವೆ ಎಂದರು.ಆರೋಪವೇನು?: ಬಳ್ಳಾರಿ ಗಣಿ ಉದ್ಯಮಿಗಳಿಂದ ಮುಖ್ಯಮಂತ್ರಿ(2006ರಲ್ಲಿ ಎಂದು ಓದಿಕೊಳ್ಳಿ) ಕುಮಾರಸ್ವಾಮಿ, ಅರಣ್ಯ ಸಚಿವ ಸಿ ಚೆನ್ನಿಗಪ್ಪ ಹಾಗೂ ಗೃಹ ಸಚಿವ ಎಂ.ಪಿ ಪ್ರಕಾಶ್ ಅವರು 150 ಕೋಟಿ ರು ಲಂಚ ಪಡೆದಿದ್ದಾರೆ.
ಈ ಕುರಿತಂತೆ ನನ್ನ ಬಳಿ ಮಾತಕತೆ ನಡೆಸಿದ ವಿಡಿಯೋ ಸಿಡಿ ಲಭ್ಯವಿದೆ ಎಂದು ಎಂಎಲ್ಸಿ ಗಾಲಿ ರೆಡ್ಡಿ ಆರೋಪಿಸಿದ್ದರು. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ಸ್ಪಷ್ಟನೆ ಕೋರಿ, ಸಾಕ್ಷ್ಯ ಒದಗಿಸುವಂತೆ ಗಾಲಿ ರೆಡ್ಡಿಗೆ ನೋಟಿಸ್ ಜಾರಿ ಮಾಡಿತ್ತು. ಅದರೆ,ರೆಡ್ಡಿ ಬಳಿ ಸಿಡಿ ಇದೆಯಾ ಇದ್ರೂ ದಶಕಗಳ ಕಾಲ ಅದೇ ಸಿಡಿ ಉಳಿಸಿಕೊಂಡಿದ್ದಾರಾ? ಉತ್ತರ ನಿರೀಕ್ಷಿಸಿ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications