ಉಪಚುನಾವಣೆ ಸ್ಪರ್ಧೆ: ಕಂಪ್ಲೀಟ್ ಉಲ್ಟಾ ಹೊಡೆದ ಎಂಟಿಬಿ ನಾಗರಾಜ್

Recommended Video

      ಕಂಪ್ಲೀಟ್ ಉಲ್ಟಾ ಹೊಡೆದ ಎಂಟಿಬಿ ನಾಗರಾಜ್ | MTB Nagaraj | Oneindia Kannada

      ಬೆಂಗಳೂರು, ಸೆ 11: "ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತೇನೆ" ಎಂದಿದ್ದ ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್, ಈಗ ಉಲ್ಟಾ ಹೊಡೆದಿದ್ದಾರೆ.

      ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಂಟಿಬಿ, "ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ವಿಚಾರದಲ್ಲಿ ಇನ್ನೂ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಚುನಾವಣೆಗೆ ಸ್ಪರ್ಧಿಸುವಂದತೂ ನಿಶ್ಚಿತ" ಎಂದು ಹೇಳಿದ್ದಾರೆ.

      "ನಾನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನ ಚುನಾವಣೆ ನಡೆದರೆ ಮಾತ್ರ ನನ್ನ ಮಗನನ್ನು ಕಣಕ್ಕಿಳಿಸಲಿದ್ದೇನೆ" ಎಂದು ನಾಗರಾಜ್ ಸ್ಪಷ್ಟ ಪಡಿಸಿದ್ದಾರೆ.

      I Will Contest From Hoskote By Election, Dissident MLA MTB Nagaraj Statement

      " ಕ್ಷೇತ್ರದ ಅಭಿವೃದ್ದಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲು, ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಲು ಹೋಗಿದ್ದೆ" ಎಂದಿರುವ ಎಂಟಿಬಿ, ನನ್ನ ಮುಂದಿನ ನಡೆ ನ್ಯಾಯಾಲಯದಿಂದ ತೀರ್ಪು ಬಂದ ಮೇಲೆ ಎಂದಿದ್ದಾರೆ.

      " ನಮ್ಮ ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದರಿಂದ, ಅದರ ತೀರ್ಪು ಬರುವ ತನಕ, ಯಾವುದೇ ತೀರ್ಮಾನ ತೆಗೆದುಕೊಳ್ಳಲು ಹೇಗೆ ಸಾಧ್ಯ" ಎಂದಿರುವ ಎಂಟಿಬಿ, " ಆದಷ್ಟು ಬೇಗ, ನಮ್ಮ ಅರ್ಜಿಯನ್ನು ಸುಪ್ರೀಂ ವಿಲೇವಾರಿ ಮಾಡಲಿದೆ ಎನ್ನುವ ವಿಶ್ವಾಸದಲ್ಲಿದ್ದೇವೆ" ಎಂದು ಹೇಳಿದ್ದಾರೆ.

      ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳುವ ಮೂಲಕ, ತಮ್ಮ ಹಿಂದಿನ ನಡೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೆಲವು ದಿನಗಳ ಹಿಂದೆ, ಎಂಟಿಬಿ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+