ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಸಿಸಿ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಎಂದ ರಾಹುಲ್ ಗಾಂಧಿ

By ಯಶಸ್ವಿನಿ ಎಂಕೆ
|
Google Oneindia Kannada News

ಸೂರು, ಮಾರ್ಚ್ 24: ನಾಲ್ಕನೇ ಬಾರಿಗೆ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು ನಂತರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಪಾಲ್ಗೊಂಡರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ವೇಳೆ, "ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ನಲ್ಲಿ 'ಸಿ' ಪ್ರಮಾಣ ಪತ್ರ ನೀಡಿದ ನಂತರ ನೀವು ನಮಗೆ ಏನು ಸೌಲಭ್ಯ ನೀಡುತ್ತೀರಿ?" ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಮುಂದಾದ ರಾಹುಲ್ ಗಾಂಧಿ ನನಗೆ, "ಎನ್‌ಸಿಸಿಯ ತರಬೇತಿ, ಪ್ರಮಾಣಪತ್ರಗಳ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಆದ್ದರಿಂದ ಈ ಪ್ರಶ್ನೆಗೆ ನನಗೆ ಉತ್ತರಿಸಲಾಗುತ್ತಿಲ್ಲ," ಎಂದು ಹೇಳಿದ ಘಟನೆಯೂ ನಡೆಯಿತು.

ಆದರೆ ನಿಮಗೆ ನಾನು ಉತ್ತಮ ಭವಿಷ್ಯ ಒದಗಿಸುವ, ಯಶಸ್ವೀ ಶಿಕ್ಷಣ ನೀಡುವ ಭರವಸೆ ನೀಡುತ್ತೇನೆ ಎಂದು ಹೇಳಿದರು. ಇದಿಷ್ಟೇ ಅಲ್ಲದೆ ಮಹಾರಾಣಿ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಆವರಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸೆಲ್ಫಿ ಸೇರಿದಂತೆ ಹಲವು ಸ್ವಾರಸ್ವಕರ ಘಟನೆಗಳು ನಡೆದವು.

In Pics: ಅರಮನೆ ನಗರಿ ಮೈಸೂರಲ್ಲಿ ರಾಹುಲ್ ಗಾಂಧಿ ಕಮಾಲ್

Array

ಕನ್ನಡದಲ್ಲಿ ಪ್ರಶ್ನೆ

ರಾಹುಲ್ ಗೆ ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಿದರು. "ಕರ್ನಾಟಕ ಸರ್ಕಾರದ ಯೋಜನೆಗಳನ್ನು ಸಮುದಾಯದ ಆಧಾರದಲ್ಲಿ ಯಾಕೆ ಜಾರಿಗೆ ತರುತ್ತೀರಿ. ಎಲ್ಲರೂ ಒಂದೇ ಅಲ್ಲವೆ?" ಎಂಬ ಪ್ರಶ್ನೆ ಕೇಳಿದರು. ಆಗ ರಾಹುಲ್ ಗಾಂಧಿಯವರಿಗೆ ಪ್ರಶ್ನೆ ಅರ್ಥವಾಗದ ಹಿನ್ನಲೆಯಲ್ಲಿ ಅಲ್ಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲು ಮುಂದೆ ಬಂದ ಘಟನೆ ನಡೆಯಿತು.

ಸಂವಾದದ ವೇಳೆ, ನಾನು ನಿಮ್ಮ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕೆಂದಿದ್ದೇನೆ. ತೆಗೆದುಕೊಳ್ಳಲಾ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿಕೊಂಡರು. ವಿದ್ಯಾರ್ಥಿನಿ ಮನವಿಗೆ 'ಎಸ್' ಎಂದು ಸ್ಪಂದಿಸಿದ ರಾಹುಲ್ ಗಾಂಧಿ ವಿದ್ಯಾರ್ಥಿನಿ ಜತೆ ಸೆಲ್ಫಿ ತೆಗೆಸಿಕೊಂಡರು. ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿ ಖುಷಿಪಟ್ಟರು.

ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

 ಅಪನಗದೀಕರಣದ ಬಗ್ಗೆ ಪ್ರಶ್ನೆ

ಅಪನಗದೀಕರಣದ ಬಗ್ಗೆ ಪ್ರಶ್ನೆ

"ನೋಟು ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಆಯುಷ್ಯಾ ಎನ್ನುವ ವಿದ್ಯಾರ್ಥಿನಿ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ರಾಹುಲ್, "ಅಪನಗದೀಕರಣ ಎನ್ನುವುದು ದೇಶದ ಆರ್ಥಿಕತೆಗೆ ಬಿದ್ದ ದೊಡ್ಡ ಹೊಡೆತ. ಯಾವೊಬ್ಬ ಆರ್ಥಿಕ ತಜ್ಞ ಕೂಡ ಇದನ್ನು ಒಪ್ಪುವುದಿಲ್ಲ. ಭಾರತದ ಅರ್ಥಿಕತೆಯ ಮೇಲೆ ಇಂತಹ ಒಂದು ಪ್ರಯೋಗವಾಗಬಾರದಾಗಿತ್ತು. ಚಿದಂಬರಂ, ಮನಮೋಹನ್ ಸಿಂಗ್ ರಂತಹ ಆರ್ಥಿಕ ತಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು," ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, "ಶೇಕಡಾ 90 ಕಪ್ಪು ಹಣ ಇರುವುದು ಸ್ವಿಸ್ ಬ್ಯಾಂಕ್, ರಿಯಲ್ ಎಸ್ಟೇಟ್ ಬಿಸಿನೆಸ್, ಗೋಲ್ಡ್ ಬಿಸಿನೆಸ್ ನಲ್ಲಿ. ಮೋದಿ ಬ್ಲಾಕ್ ಮನಿ ದೇಶಕ್ಕೆ ತರ್ತಿನಿ ಅಂತ ಅಧಿಕಾರಕ್ಕೆ ಬಂದರು. ಆದರೆ ಹಣ ತಂದರಾ?" ಎಂದು ಪ್ರಶ್ನಿಸಿದರು.

಻ಅಷ್ಟೇ ಅಲ್ಲದೇ, "ಭಾರತ ದೇಶವೊಂದರಲ್ಲಿ ಮಾತ್ರ ನಾವು ಬೇರೆ ಬೇರೆ ಆಲೋಚನೆಗಳನ್ನು ಕಾಣಬಹುದು. ನಾವು ಕಾಂಗ್ರೆಸಿಗರು. ದೇಶ ಒಂದೇ ಆದರೂ ಬೇರೆ ಬೇರೆ ಆಲೋಚನೆಗಳಿಗೆ ಬೆಲೆ ಕೊಡುತ್ತಿದ್ದೇವೆ," ಎಂದರು.

ಜಿಎಸ್ಟಿ ಎಷ್ಟರ ಮಟ್ಟಿಗೆ ಸರಿ ಇದೆ?

ಜಿಎಸ್ಟಿ ಎಷ್ಟರ ಮಟ್ಟಿಗೆ ಸರಿ ಇದೆ?

'ಜಿಎಸ್ಟಿ' ತೆರಿಗೆ ನೀತಿ ಎಷ್ಟರ ಮಟ್ಟಿಗೆ ಸರಿಯಿದೆ? ಎಂದು ವಿದ್ಯಾರ್ಥಿನಿಯೊಬ್ಬರು ಇದೇ ವೇಳೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಾಹುಲ್, "ಜಿಎಸ್ ಟಿ ಅನ್ನೋದು ಗಬ್ಬರ್ ಸಿಂಗ್ ಟ್ಯಾಕ್ಸ್. ರಾಜ್ಯ, ಕೇಂದ್ರ ಸರ್ಕಾರದ ಹೆಸರಿನಲ್ಲಿ ಪ್ರತ್ಯೇಕ ತೆರಿಗೆ ಹಾಕುತ್ತಿದ್ದಾರೆ. ಇದು ಸರಿಯಲ್ಲ. ನಾವು 2019ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಟ್ಯಾಕ್ಸ್ ಇರುತ್ತದೆ. ರಾಜ್ಯ, ಕೇಂದ್ರ ತೆರಿಗೆ ಅನ್ನುವುದು ಇರುವುದಿಲ್ಲ. ಒಂದೇ ದೇಶ ಒಂದೇ ತೆರಿಗೆ ನೀತಿಗೆ ಒತ್ತು ಕೊಡುತ್ತೇವೆ," ಎಂದು ತಿಳಿಸಿದರು.

ಅಪನಗದೀಕರಣ ಮತ್ತು ಜಿಎಸ್ಟಿ ದೇಶದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಭಾರೀ ಹೊಡೆತ ನೀಡಿದೆ ಎಂದು ವಿಶ್ಲೇಷಿಸಿದ ರಾಹುಲ್ ಗಾಂಧಿ, ಅಪನಗದೀಕರಣವನ್ನು ಜಾರಿಗೊಳಿಸಿದ ರೀತಿಯ ಬಗ್ಗೆ ನನಗೆ ಆಕ್ಷೇಪವಿದೆ. ಆರ್.ಬಿ.ಐ ಗವರ್ನರ್, ಮುಖ್ಯ ಆರ್ಥಿಕ ಸಲಹೆಗಾರರು, ಹಣಕಾಸು ಸಚಿವರು ಯಾರಿಗೂ ಇದು ಗೊತ್ತಿಲ್ಲ ಎಂದು ಕಿಡಿಕಾರಿದರು.

 ಉದ್ಯೋಗ ಸೃಷ್ಟಿ ಸಾಲುತ್ತಿಲ್ಲ

ಉದ್ಯೋಗ ಸೃಷ್ಟಿ ಸಾಲುತ್ತಿಲ್ಲ

ನೀರವ್ ಮೋದಿ ಬ್ಯಾಂಕಿಗೆ ಸೇರಿದ 22,000 ಕೋಟಿ ರೂಪಾಯಿ ಹಣ ಕೊಳ್ಳೆ ಹೊಡೆದರು. ನಿಮ್ಮಂತಹ ಯುವತಿಯರಿಗೆ 22,000 ಕೋಟಿ ಹಣವನ್ನು ನಾವು ನೀಡಿದ್ದರೆ ಎಷ್ಟು ಉದ್ಯಮ ಸ್ಥಾಪಿಸಲು ಸಾಧ್ಯವಿತ್ತು ಎಂಬುದನ್ನು ನೀವು ಆಲೋಚನೆ ಮಾಡಬಲ್ಲಿರಾ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಆರ್ಥಿಕವಾಗಿ ನಾವು ಉತ್ತಮವಾಗಿಯೇ ಅಭಿವೃದ್ಧಿ ಸಾಧಿಸುತ್ತಿದ್ದೇವೆ. ಆದರೆ ನಾವು ಉದ್ಯೋಗ ಸೃಷ್ಟಿಸುತ್ತಿಲ್ಲ. ಯಾರಿಗೆಲ್ಲಾ ಕೌಶಲ್ಯ ಇದೆಯೋ ಅವರಿಗೆ ಆರ್ಥಿಕ ಸಹಕಾರ ಮತ್ತು ಬೆಂಬಲ ಸಿಗುತ್ತಿಲ್ಲ. ಸಮಸ್ಯೆ ಏನೆಂದರೆ ದೊಡ್ಡ ಮೊತ್ತದ ಹಣ ಕೇವಲ 15-20 ಜನರಿಗೆ ಮಾತ್ರ ತಲುಪುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರನ್ನು 'ರಾಹುಲ್ ಗಾಂಧಿ ಸರ್' ಎಂದು ಸಂಬೋಧಿಸಿದರು.. ಈ ವೇಳೆ ಕಾಂಗ್ರೆಸ್ ಅಧ್ಯಕ್ಷರು 'ನನ್ನನ್ನು ರಾಹುಲ್ ಎಂದು ಕರೆಯಿರಿ ಸಾಕು' ಎಂದರು.

ಇನ್ನು ಪ್ರಶ್ನೆ ಕೇಳುವಾಗ ಭಯಗೊಂಡ ವಿದ್ಯಾರ್ಥಿನಿಗೆ, 'ಭಯಪಡಬೇಡಿ. ಪ್ರಶ್ನೆ ಕೇಳಿ' ಎಂದು ಧೈರ್ಯ ತುಂಬಿದರು.

English summary
'I don't know the details of NCC training and that type of stuff. So I won't be able to answer that question,' said Rahul Gandhi on being asked, 'What benefits will you give to NCC cadets after passing 'C' certificate examination?' by a students at Maharani's Arts College for Women in Mysuru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X