ಕುಮಾರಸ್ವಾಮಿ ಮುಖ ನೋಡಲಾಗುತ್ತಿಲ್ಲ, ಬಿಜೆಪಿಯವರು ಯಾಕೆ ಹೀಗೆ: ದೇವೇಗೌಡ

ಬೆಂಗಳೂರು, ಜೂನ್ 26: ಪ್ರತೀ ಒಂದು ವಿಚಾರದಲ್ಲಿ ಈ ರೀತಿ ತೊಂದರೆ ಬಂದರೆ, ಕುಮಾರಸ್ವಾಮಿ ಸರಕಾರ ನಡೆಸುವುದಾದರೂ ಹೇಗೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ರಾಯಚೂರು ಹೋಗುವ ಮೊದಲೇ ಪ್ರತಿಭಟನೆ ನಡೆಸಿದರೆ ಸಮಸ್ಯೆಗೆ ಪರಿಹಾರ ಸಿಗಲು ಹೇಗೆ ಸಾಧ್ಯ? ಇದೆಲ್ಲಾ ಬಿಜೆಪಿಯವರ ಕುತಂತ್ರ ರಾಜಕಾರಣ, ಯಾವುದಾದರೂ ಒಂದು ವಿಚಾರವನ್ನು ಇಟ್ಟುಕೊಂಡು ಅವರು ಪ್ರತಿಭಟನೆ ನಡೆಸುತ್ತಿದ್ದಾರೆಂದು ದೇವೇಗೌಡ್ರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಮುಖ ನೋಡಲು ಸಾಧ್ಯವಾಗುತ್ತಿಲ್ಲ, ಜನರ ಸಮಸ್ಯೆಯನ್ನು ಹತ್ತಿರದಿಂದ ಆಲಿಸಲು ಅವರು ಗ್ರಾಮ ವಾಸ್ತವ್ಯಕ್ಕೆ ಹೋಗುತ್ತಿರುವುದು, ಪ್ರಚಾರಕ್ಕಾಗಿ ಅಲ್ಲ ಎಂದು ದೇವೇಗೌಡ್ರು ಹೇಳಿದ್ದಾರೆ.

I cannot see Chief Minister face, why BJP leaders are like this: Deve Gowda

ದೇಶದಲ್ಲೇ ಗ್ರಾಮ ವಾಸ್ತವ್ಯ ಎನ್ನುವುದು ವಿನೂತನ ಕಾರ್ಯಕ್ರಮ, ಇದನ್ನು ತಡೆಯಲು ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಅಸಾಹಯಕತೆಯಿಂದ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈಗ ನಡೆಯುತ್ತಿರುವ ಪ್ರತಿಭಟನೆ ಉದ್ದೇಶಪೂರ್ವಕವಾಗಿ ನಡೆಯುತ್ತಿರುವುದು ಎಂದು ದೇವೇಗೌಡ್ರು, ಬಿಜೆಪಿಯವರ ಮೇಲೆ ಕಿಡಿಕಾರಿದ್ದಾರೆ.

ಬಿಜೆಪಿ ಮುಖಂಡ ಸಿ ಟಿ ರವಿ, ಹೈಟೆಕ್ ಆಸ್ಪತ್ರೆಯ ವೈದ್ಯರಾ, ಮೊದಲು ಅವರ ನಾಯಕರಿಗೆ ಬುದ್ದಿ ಹೇಳುವ ಕೆಲಸವನ್ನು ಅವರು ಮಾಡಲಿ ಎಂದು ರವಿ ವಿರುದ್ದ ಗೌಡ್ರು ಗರಂ ಆಗಿದ್ದಾರೆ.

ಮುಖ್ಯಮಂತ್ರಿಯಾದವರು ತಾಳ್ಮೆ ಕಳೆದುಕೊಂಡರೆ ಹೇಗೆ, ಅವರ ಆರೋಗ್ಯದ ಕಥೆ ಏನಾಗಬೇಕು ಎಂದು ಸಿ ಟಿ ರವಿ, ರಾಯಚೂರು ಘಟನೆಯನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+