ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾಯ್ತಾ ಸಂಕಷ್ಟ: ʼಬಿಜೆಪಿಯಿಂದ ನಾನೇ ಮುಂದಿನ ಮುಖ್ಯಮಂತ್ರಿʼ

ರಾಮದುರ್ಗ, ಸೆಪ್ಟೆಂಬರ್‌ 30: ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವಮರು ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ನಡುವೆ ಕಾಂಗ್ರೆಸ್‌ ಪಾಳಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದು, ಈ ನಡುವೆ ಬಿಜೆಪಿಯಿಂದ ಮುಂದಿನ ಸಿಎಂ ನಾನೇ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

ಶನಿವಾರ ಸಂಜೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ 60 ನೇ ಹಿಂದು ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆಯ ಬೆಂಬಲ ನೋಡಿದ್ರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ ಆಗ್ತೇನೆ. ರಾಜ್ಯದಲ್ಲಿ ಹಿಂದುಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಅವಧಿಯಲ್ಲಿ ಮೇಲು-ಕೀಳು ಎನ್ನುವುದು ಇರೋದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

I am the next Chief Minister from BJP Says MLA Basanagouda Patil Yatnal

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯಲ್ಲ. ಸಂಗೊಳ್ಳಿ ರಾಯಣ್ಣಗೆ ನಮ್ಮವರೆ ಮೋಸ ಮಾಡಿದ್ದು ಇಂದು ನನಗೂ ನನ್ನ ಜೋಡಿ ಇದ್ದವರೆ ಬೆನ್ನಾಗ ಚೂರಿ ಹಾಕುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದ ಅವರು, ರಾಜ್ಯದ ಪೊಲೀಸರನ್ನು ಫ್ರೀಯಾಗಿ ಬಿಟ್ಟರೆ ರಾಜ್ಯದಲ್ಲಿ ಯಾವುದೇ ಗಲಾಟೆ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ದೇಶದಲ್ಲಿ ಜಾತಿ ವ್ಯವಸ್ಥೆ ಇರೋವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದಲಿತರಾದ ಅಂಬೇಡ್ಕರ್‌ ಬರೆದಿರುವ ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡಿದ್ದು, ವಾಲ್ಮೀಕಿ ಬರೆದ ರಾಮಯಾಣ, ವೇದವ್ಯಾಸ ಬರೆದ ಮಹಾಭಾರತವನ್ನು ಬ್ರಾಹ್ಮಣರು ಏನೂ ಮಾಡಿಲ್ಲ, ಅವರ ಬಗ್ಗೆ ಟೀಕೆ ಬೇಡ. ದೇವರೆಲ್ಲ ದಲಿತರಲ್ಲಿದ್ದು, ಜಾತಿ ಮಾಡುತ್ತ ಹೋದರೆ ಭವಿಷ್ಯವಿಲ್ಲ, ಎಲ್ಲರೂ ಒಂದಾಗಿ ಬದುಕಿ ಬಾಳುವ ಅವಶ್ಯಕತೆ ಇದೆ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+