ʼನಮ್ಮ ಕೈಗೆ ಅಧಿಕಾರ ಕೊಡಿ; ನಾನು ಸಿಎಂ ಆದ್ರೆ ಮಾಡುವ ಕೆಲಸವೇ ಅದುʼ
ಬೆಳಗಾವಿ, ಸೆಪ್ಟೆಂಬರ್ 28: ನಾನು ಮುಖ್ಯಮಂತ್ರಿ ಆದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ನೀಡುತ್ತೇನೆ. ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಬೈಲಹೊಂಗಲದಲ್ಲಿ ನಡೆದ ಗಣೇಶ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕೈಗೆ ಅಧಿಕಾರ ಕೊಡಿ, ಅಲ್ಲಿ ಯೋಗಿ, ಇಲ್ಲಿ ನಾವು ಇರುತ್ತೇವೆ. ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದೇ ಒಂದು ಕಲ್ಲು ಬಿದ್ದರೂ ಸೀದಾ ಜನ್ನತ್. ಹಿಂದೂವೋಂಕೆ ಸಾಥ್, ಹಿಂದೂವೋಂಕೆ ವಿಕಾಸ್, ದೇಶ ದ್ರೋಹಿಯೋಂಕೋ ಲಾಥ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸಿದ್ದರಾಮಯ್ಯ ತಲೆಗೆ ಪೇಟ ಇಟ್ಟರೆ ಕಿತ್ತು ಹಾಕುತ್ತಿದ್ದರು. ಸಿದ್ದರಾಮಯ್ಯನವರೆ ಈಗ ಯಾಕೆ ಚಾಮುಂಡಿ ದರ್ಶನಕ್ಕೆ ಹೋಗುತ್ತೀರಿ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಪಡೆಯುತ್ತಾರೆ, ಆದರೆ ಮುಸ್ಲಿಮರ ಪರ ಕೆಲಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ಎಸ್ಟಿ, ಎಸ್ಸಿ ಸಮುದಾಯದ ಹಣ ನುಂಗಿದ್ದೀರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿ ನೀರು ಕುಡಿದ್ರಿ. ಹಾಲುಮತದ ಸಮುದಾಯಕ್ಕೆ ಈವರೆಗೂ ಏನೂ ಮಾಡಿಲ್ಲ. ಆದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ. ಯಾರ ಅಪ್ಪನ ಮನೆಯಿಂದ ಹಣ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ನಾವು ಗ್ಯಾರಂಟಿ ಅಂದ ತಕ್ಷಣವೇ ವೋಟ್ ಹಾಕುತ್ತೇವೆ. ಎರಡು ಸಾವಿರ ಕೊಡುತ್ತಾರೆ ಅಂದ್ರೆ ವೋಟ್ ಹಾಕುತ್ತೇವೆ. ಹೀಗೆ ಮಾಡಿದರೆ ಹಿಂದೂಗಳೇ ಉಳಿಯುವುದಿಲ್ಲ. ಹಿಂದೂಗಳು ಎರಡು ಸಾವಿರಕ್ಕೆ ಹೋಗುತ್ತೀರಾ. ಲಕ್ಷ್ಮೀ ಅಕ್ಕಾ ನಿಮಗೆ ಎರಡು ಸಾವಿರದಲ್ಲೇ ಬರ್ಬಾದ್ ಮಾಡಿದರು. ಆದಷ್ಟು ಜಲ್ದಿ ನಿಮಗೆ ಚಾಂದಬೇಬಿ ಮಾಡ್ತಾಳೆ ಎಂದು ಸಚಿವೆ ಹೆಬ್ಬಾಳ್ಕರ್ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.












Click it and Unblock the Notifications