ನಾನು ಬಿಜೆಪಿ ಪರವೂ ಇಲ್ಲ ಕೇಸರಿ ಪರವೂ ಅಲ್ಲ, ಬೊಮ್ಮಾಯಿ ಪರ: ಕಿಚ್ಚ ಸುದೀಪ್
ಬೆಂಗಳೂರು, ಏಪ್ರಿಲ್ 5: ಬಿಜೆಪಿ ಸೇರುವ ವರದಿಗಳ ಬೆನ್ನಲ್ಲೇ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಚಿತ್ರನಟ ಕಿಚ್ಚ ಸುದೀಪ್ ಅವರು ಮಾತನಾಡಿದ್ದು, ನಾನು ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ನನಗೆ ಬೊಮ್ಮಾಯಿ ಅವರು ಮಾವ ಇದ್ದಾಗೆ ಅವರು ನನಗೆ ತುಂಬಾ ಬೇಕಾದವರು. ಹಾಗಾಗಿ ನನ್ನ ಬೆಂಬಲ ಇದ್ದೇ ಇದೆ. ಹಾಗಂತ ನಾನು ಯಾವುದೇ ಪಕ್ಷದವನು ಎಂದಲ್ಲ. ನನಗೆ ಚಿಕ್ಕ ವಯಸ್ಸಿನಿಂದಲೂ ಬೊಮ್ಮಾಯಿ ಮಾವ ಅವರನ್ನು ನೋಡಿಕೊಂಡು ಬಂದಿದ್ದಾನೆ. ಅವರು ನನ್ನ ಮಾಮ. ಅವರ ಪ್ರೀತಿಗೆ ನಾನು ಖುಣಿ ಅವರ ಪರ ನಾನು ಇದ್ದೇನೆ ಎಂದರು.

ನಾನು ಬೆಳೆದು ಬಂದ ಹಾದಿಗಳಲ್ಲಿ ಗಾಡ್ ಫಾದರ್ ಅವರು. ನನ್ನ ಜೊತೆ ಹಲವರು ನಿಂತು ಕಾಪಾಡಿದ್ದಾರೆ. ಅವರು ನಾಯಕತ್ವದಲ್ಲಿ ಈಗ ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ನನ್ನ ಬೆಂಬಲವನ್ನು ನೀಡಲು ಇಲ್ಲಿ ಬಂದಿದ್ದೇನೆ. ಈ ಮೂಲಕ ನನ್ನ ಸ್ಬೇಹಿತ ಪರ ನಾನು ನಿಲ್ಲುತ್ತೇನೆ. ನನ್ನ ತಂದೆ ನಾನು ನಂಬುತ್ತೇನೆ ಅದೇ ರೀತಿ ನಾನು ನನ್ನ ಬಸವರಾಜ ಬೊಮ್ಮಾಯಿ ಅವರನ್ನು ನಂಬುತ್ತೇನೆ ಎಂದರು.
ನಾನು ಬೆಳೆದು ಬಂದ ಹಾದಿಗಳಲ್ಲಿ ಗಾಡ್ ಫಾದರ್ ಅವರು. ನನ್ನ ಜೊತೆ ಹಲವರು ನಿಂತು ಕಾಪಾಡಿದ್ದಾರೆ. ಅವರು ನಾಯಕತ್ವದಲ್ಲಿ ಈಗ ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ನನ್ನ ಬೆಂಬಲವನ್ನು ನೀಡಲು ಇಲ್ಲಿ ಬಂದಿದ್ದೇನೆ. ಈ ಮೂಲಕ ನನ್ನ ಸ್ಬೇಹಿತ ಪರ ನಾನು ನಿಲ್ಲುತ್ತೇನೆ. ನನ್ನ ತಂದೆ ನಾನು ನಂಬುತ್ತೇನೆ ಅದೇ ರೀತಿ ನಾನು ನನ್ನ ಬಸವರಾಜ ಬೊಮ್ಮಾಯಿ ಅವರನ್ನು ನಂಬುತ್ತೇನೆ ಎಂದರು.
ನನಗೆ ಮಾನವೀಯತೆ ಇದೆ. ಮನುಷತ್ವ ಇದೆ. ನನಗೆ ಸಂಬಂಧಗಳ ಬಗ್ಗೆ ನನಗೆ ಹಣ ತೆಗೆದುಕೊಂಡು ಇಲ್ಲಿ ಬರುವ ಅಗತ್ಯವಿಲ್ಲ. ಹಣ ಮಾಡುವ ಹಾಗಿದ್ದರೆ ನಾನು ಚಿತ್ರರಂಗದಲ್ಲೆ ಮಾಡುವೆ. ನನ್ನ ಬೆಂಬಲ ಕೇಸರಿ ಶಾಲಿಗೂ ಇಲ್ಲ. ಬಿಜೆಪಿಗೂ ಇಲ್ಲ ಬಸವರಾಜ ಬೊಮ್ಮಾಯಿಗೆ ಮಾತ್ರ. ನಮ್ಮಲ್ಲಿ ಇಷ್ಟು ಪತ್ರಕರ್ತರು ಕ್ಯಾಮರಗಳು ಇದೆ ಅಂತ ಗೊತ್ತಾಗಿದ್ದೆ ಈಗ. ನಮ್ಮ ಪ್ರೆಸ್ ಮೀಟ್‌ಗೂ ತಾವು ಬರಬೇಕು ಎಂದರು.

ನಾನು ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಬರುವ ಪ್ರಶ್ನೇಯೇ ಇಲ್ಲ. ಇನ್ನು ಕೆಲವರು ನನು ಕೆಲವರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ವರದಿ ಕೇಳಿ ಬಂದಿವೆ. ಅದೆಲ್ಲಾ ಸುಳ್ಳು. ನಾನು ರಾಜಕೀಯ ಸೇರುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ರಾಜಕೀಯ ಸೇರುವ ಆಗಿದ್ದರೆ ಕದ್ದು ಮುಚ್ಚಿ ಸೇರಲ್ಲ ಎಲ್ಲರಿಗೂ ಹೇಳಿಯೇ ಬರುತ್ತೇನೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡ ಪೋಟೋ ಬಗ್ಗೆ ಸ್ಪಷ್ಟನೆ ಕೊಟ್ಟ ಸುದೀಪ್ ನಾನು ಎಲ್ಲರೊಂದಿಗೆ ಕಾಣಿಸಿಕೊಂಡಿದ್ದು ನಿಜ. ಆಗಂತ ಅವರ ಪಕ್ಷದವನು ಎಂದಲ್ಲ. ನಾನು ಬಿಜೆಪಿ ಪರ ಪ್ರಚಾರ ಮಾಡುವಿದಿಲ್ಲ. ಬದಲಾಗಿ ಬೊಮ್ಮಾಯಿ ಪರ ಮಾತ್ರವೇ ನಿಲ್ಲುವುದಾಗಿ ತಿಳಿಸಿದರು. ನನಗೇ ಬೊಮ್ಮಾಯಿ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸ ಇದೆ. ಹೀಗಾಗಿ ಅವರಿಗಷ್ಟೇ ನನ್ನ ಬೆಂಬಲ ಇದೆ. ಹೀಗಾಗಿ ಪಕ್ಷದ ಪರ ಅಂತಲ್ಲ. ನನ್ನ ವೈಯುಕ್ತಿಕವಾಗಿ ಬಸವರಾಜ ಬೊಮ್ಮಾಯಿ ಅವರ ಬೆಂಬಲ ಇದೆ ಎಂದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಇದು ನನ್ನ ಹಾಗೂ ಸುದೀಪ್ ಅವರ ಸಂಬಂಧ. ನಾನು ತಿಳಿಸಿದ ಕಡೆ ಅವರು ಪ್ರಚಾರ ಮಾಡುತ್ತಾರೆ. ಅವರು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಇದು ಪರ ಬೆಂಬಲವಷ್ಟೇ ಬಿಜೆಪಿ ಪರ ಅಲ್ಲ ಎಂದು ತಿಳಿಸಿದರು.
ಸುದೀಪ್ ಅವರ ನಿರ್ಣಯದ ಬಗ್ಗೆ ನಾನು ಬೆಂಬಲಿಸುತ್ತಿದ್ದೇನೆ. ಅವರ ಕ್ಯಾಂಪೇನ್ ಬಗ್ಗೆ ತೀರ್ಮಾನ ಮಾಡಿ ತಿಳಿಸುತ್ತೇನೆ. ಅವರ ಅಭಿಮಾನಿಗಳಿಗೆ ಯಾವುದೇ ಗೊಂದಲವಾಗದಂತೆ ಪ್ರಚಾರ ಮಾಡುತ್ತಾರೆ, ಸುದೀಪ್ ಅವರು ನನಗೆ ಬೆಂಬಲ ನೀಡುತ್ತಿರುವುದು. ನನಗೂ ಹಾಗೂ ಪಕ್ಷಕ್ಕೆ ಆನೆ ಬಲ ಬಂದಿದೆ. ಅವರ ಸಮಯ ಹಾಗೂ ಗೌರವ ಎರಡೂ ಮುಖ್ಯ ಇದು ಬಿಜೆಪಿಗೆ ದೊಡ್ಡ ಶಕ್ತಿ ಎಂದು ತಿಳಿಸಿದರು.












Click it and Unblock the Notifications