ನಾನು ಕಾಂಗ್ರೆಸ್ ಗಂಜಿ ಗಿರಾಕಿಯೂ ಅಲ್ಲ, ವಿರೋಧಿಯೂ ಅಲ್ಲ: ದಿನೇಶ್ ಅಮೀನ್‌ಮಟ್ಟು
ಕರ್ನಾಕಟ ವಿಧಾನ ಪರಿಷತ್‌ನಲ್ಲಿ ಖಾಲಿಯಿ ಇರುವ ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಪತ್ರಕರ್ತ ಹಾಗೂ ಬರಹಗಾರ ದಿನೇಶ್ ಅಮಿನ್‌ಮಟ್ಟು ಅವರ ಹೆಸರನ್ನು ಕಾಂಗ್ರೆಸ್ ಶಿಫಾರಸ್ಸು ಮಾಡಲಿದೆ ಎನ್ನುವ ಚರ್ಚೆ ಶುರುವಾದ ಮೇಲೆ ಹಲವು ಬೆಳವಣಿಗೆಗಳು ನಡೆದಿದ್ದು. ಇದೀಗ ದಿನೇಶ್ ಅಮೀನ್‌ಮಟ್ಟು ಅವರು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ. ಈ ವಿಷಯವಾಗಿ ದಿನೇಶ್ ಅಮೀನ್‌ಮಟ್ಟು ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ವಿಧಾನಪರಿಷತ್‌ಗೆ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷ ನನ್ನ ಹೆಸರನ್ನು ಶಿಫಾರಸು ಮಾಡಿದ ನಂತರ ನನ್ನ ಚಾರಿತ್ರ್ಯಹನನದ ಪ್ರಯತ್ನ ಶುರುವಾಗಿದೆ. ಈ ಪ್ರಯತ್ನವನ್ನು ನೋಡಿದ. ಕೇಳಿದ ಅನೇಕರು ಇದರಲ್ಲಿ ಬಿಜೆಪಿಯ ಕೈವಾಡ ಇರಬಹುದೆಂದು ಆರೋಪಿಸತೊಡಗಿದ್ದಾರೆ. ನನಗೆ ಇಲ್ಲಿಯ ವರೆಗೆ ಬಂದಿರುವ ಮಾಹಿತಿ ಪ್ರಕಾರ ಈ ಆರೋಪಕ್ಕೆ ಆಧಾರ ಇಲ್ಲ.

ಆದರೆ ಇದರಲ್ಲಿ ನಮ್ಮ ಜೊತೆಯಲ್ಲಿಯೇ ಇದ್ದ ಪ್ರಗತಿಪರರ ಮುಖವಾಡದ ಕೆಲವರ ಕೈವಾಡ ಇದೆ ಎನ್ನುವುದಕ್ಕೆ ನನ್ನಲ್ಲಿ ಸಾಕ್ಷಿಗಳಿವೆ. ಎಲ್ಲ ಪಕ್ಷಗಳಿಗೆ ಅಲೆದಲೆದು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಮತ್ತು ತಾನೇ ಅಹಿಂದ ಎಂದು ಹೇಳಿಕೊಂಡು ತಿರುಗಾಡುತ್ತಿರುವ, ಇದರ ಆಧಾರದಲ್ಲಿಯೇ ತನ್ನನ್ನು ನಾಮನಿರ್ದೇಶನ ಮಾಡಿ ಎಂದು ಇಲ್ಲಿಂದ ದಿಲ್ಲಿ ವರೆಗೆ ಅಲೆದಾಡಿದ ''ನಾಥ(ತ) ನೊಬ್ಬ ಈ ಕುತ್ಸಿತ ಷಡ್ಯಂತ್ರದ ರೂವಾರಿ. (ಈ ಸುದ್ದಿ ಯಾರ ಪೋನಿನಿಂದ ಯಾರಿಗೆ ಹೋಗಿದೆ ಎನ್ನುವ ಬಗ್ಗೆ ನನ್ನಲ್ಲಿ ಸಾಕ್ಷ್ಯ ಇದೆ) ಇವರ ಜೊತೆ ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಕೆಲವು ಕಿಡಿಗೇಡಿಗಳು ಫೇಕ್ ನ್ಯೂಸ್ ಗಳನ್ನು ಹಂಚಿಕೊಂಡು ವಿಕೃತಾನಂದ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು ಬಿಜೆಪಿ ಮತ್ತು ಆರ್‌ಎಸ್ಎಸ್ ಜೊತೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಈ ವಿಷಯದಲ್ಲಿ ಆ ಬಳಗದ ಅನೇಕ ನಾಯಕರ ಜೊತೆ ಗುದ್ದಾಡಿದ್ದೇನೆ, ಈ ಗುದ್ದಾಟ ನನ್ನ ಉಸಿರು ಇರುವ ವರೆಗೆ ಮುಂದುವರಿಯುತ್ತದೆ. ಆದರೆ ಈ ಬಳಗದ ಯಾವ ನಾಯಕರೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದಾಗಲೂ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಆಗಲೂ ಈ ಪೈಲು-ಐಲು, ಇಲಿ-ಹೆಗ್ಗಣ, ನಾಥ-ದುರ್ನಾತಗಳೇ ನನ್ನ ಬಗ್ಗೆ ಆರ್‌ಟಿಐ ಹಾಕುತ್ತಿದ್ದದ್ದು, ಗಾಸಿಪ್ ಹರಡುತ್ತಿದ್ದದ್ದು.
ಕಳೆದ ಹನ್ನೆರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನನಗೆ ಒಡನಾಟವಿದೆ. ಇಲ್ಲಿಯ ವರೆಗೆ ನಾನು ವರ್ಗಾವಣೆಯ ಶಿಫಾರಸು ಇಲ್ಲವೇ, ಬಿಲ್ ಪಾಸ್ ಇಲ್ಲವೆ, ನನಗೆ ಹಣಕಾಸಿನ ಲಾಭ ಬರುವ ಇಲ್ಲವೇ, ಇತರರಿಗೆ ಹಣಕಾಸಿನ ಲಾಭ ಮಾಡಿಕೊಡುವ ಒಂದೇ ಒಂದು ಪತ್ರಕ್ಕೆ ಸಿದ್ದರಾಮಯ್ಯನವರ ಸಹಿ-ನೋಟ್ ಹಾಕಿಸಿಲ್ಲ. ಅಂತಹದ್ದೊಂದು ಪತ್ರವನ್ನು ಯಾರಾದರೂ ನನ್ನ ಮುಂದೆ ತಂದಿಟ್ಟರೆ ಅವರ ಪಾದಕ್ಕೆ ನನ್ನ ಕಡಿದ ತಲೆ ಇರುತ್ತದೆ.
ವಿಧಾನಪರಿಷತ್ ನಾಮನಿರ್ದೇಶನಕ್ಕೆ ನಾನು ಯಾಕೆ ಆಸಕ್ತಿ ತೋರಿಸಿದೆ, ಅನಂತರ ಏನೆಲ್ಲ ನಡೆಯಿತು ಎನ್ನುವುದನ್ನು ಮುಂದೆ ಬರೆಯುವೆ. ವಿಚಿತ್ರವೆಂದರೆ ನಿನ್ನೆ ಮೊನ್ನೆ ವರೆಗೆ ನನ್ನನ್ನು ''ಕಾಂಗ್ರೆಸ್ ಗಂಜಿ ಗಿರಾಕಿ'' ಎಂದು ಬಿಜೆಪಿಯವರು ಗೇಲಿ ಮಾಡುತ್ತಿದ್ದರು. ಈಗ ಕಾಂಗ್ರೆಸ್ ಕೆಲವು ಕಾರ್ಯಕರ್ತರು ನಾನು ''ಕಾಂಗ್ರೆಸ್ ವಿರೋಧಿ'' ಎಂದು ಆರೋಪಿಸುತ್ತಿದ್ದಾರೆ. (ನಾಮನಿರ್ದೇಶನಗೊಳ್ಳುವವರು ರಾಜಕೀಯ ಪಕ್ಷದ ಸದಸ್ಯರಾಗಿರಬಾರದು ಎಂಬ ನಿಯಮ ಇದೆ. ಇದಕ್ಕಾಗಿ ನನ್ನ ಕೆಲವು ಹಿತೈಷಿ ಕಾಂಗ್ರೆಸ್ ಕಾರ್ಯಕರ್ತರೇ ಈಗ ಹೇಳುತ್ತಿದ್ದಾರೆ ಎಂದು ನಾನು ಗೆಳೆಯರಲ್ಲಿ ತಮಾಷೆ ಮಾಡುತ್ತಿದ್ದೇನೆ)
ವಾಸ್ತವದಲ್ಲಿ ನಾನು ಕಾಂಗ್ರೆಸ್ ಗಂಜಿ ಗಿರಾಕಿಯೂ ಅಲ್ಲ, ವಿರೋಧಿಯೂ ಅಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ನನಗೆ ಸಹಮತ ಇದೆ, ಅದರ ಸೈದ್ದಾಂತಿಕ ಸಂಗಾತಿ ನಾನು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಬೆಂಬಲಿಸುವ ಅಗತ್ಯವಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಇದಕ್ಕೆ ರಾಹುಲ್ ಗಾಂಧಿಯವರಲ್ಲಿನ ಸೈದ್ದಾಂತಿಕ ಸ್ಪಷ್ಟತೆ ಮತ್ತು ಬದ್ದತೆ ಹುಟ್ಟಿಸಿರುವ ನಿರೀಕ್ಷೆ ಕೂಡಾ ಕಾರಣ. ಭಿನ್ನಾಭಿಪ್ರಾಯವಿದ್ದರೆ ಚರ್ಚೆ ಮಾಡೋಣ. ಸದ್ಯಕ್ಕೆ ಇಷ್ಟೇ ಹೇಳಲು ಸಾಧ್ಯ.
ನನ್ನ ವಿರುದ್ಧದ ಆರೋಪಗಳ ಬಗ್ಗೆ ಸನ್ಮಾನ್ಯ ರಾಜ್ಯಪಾಲರಿಂದ ಯಾವ ಪತ್ರವೂ ಬರದೆ ಇದ್ದರೂ ನಾನೇ ಸ್ವಯೀಚ್ಛೆಯಿಂದ ಅವರಿಗೆ ಸ್ಪಷ್ಟೀಕರಣವನ್ನು ಕಳಿಸಿದ್ದೇನೆ. ನನ್ನ ಸ್ಪಷ್ಟೀಕರಣಕ್ಕೆ ಆಧಾರವಾಗಿ ದಾಖಲೆ ಪತ್ರಗಳನ್ನೂ ಅವರಿಗೆ ಕಳಿಸಿದ್ದೇನೆ. ಸತ್ಯಮೇವ ಜಯತೆ ಎಂದು ಅವರು ಬರೆದುಕೊಂಡಿದ್ದಾರೆ.
-
Electric Vehicle Tax: ಎಲೆಕ್ಟ್ರಿಕ್ ಕಾರುಗಳ ಮೇಲೆ ಟ್ಯಾಕ್ಸ್ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ, ಸಿಎಂಗೆ ಪತ್ರ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Narendra Modi: ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ 18 ಅಂಶ: ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications