ನನ್ನ ಮನೆ ಮೇಲೆ ಕಲ್ಲುತೂರಾಟ ಮನಸ್ಸಿಗೆ ನೋವಾಗಿದೆ; ಯಾರ ಮೇಲೂ ಆರೋಪ ಮಾಡಲ್ಲ: ಬಿಎಸ್ ವೈ

ಬೆಂಗಳೂರು, ಮಾರ್ಚ್‌ 27: ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಶಿಕಾರಿಪುರದ ನಿವಾಸಕ್ಕೆ ಕಲ್ಲು ತೂರಾಟ ಮಾಡಿದ ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಶಿಕಾರಿಪುರದ ನಿವಾಸಕ್ಕೆ ಕಲ್ಲು ತೂರಾಟ ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಯಾರ ಬಗ್ಗೆಯೂ ಆರೋಪ ಮಾಡಲ್ಲ. ಯಾರದೇ ಕೈವಾಡ ‌ಇಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

I Am Hurt By The Attack On My House Says BS Yediyurappa

ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಬಂಜಾರ ಸಮಾಜದ ಬಂಧುಗಳು ನಮ್ಮ ಜೊತೆ ಇದ್ದಾರೆ. ತಪ್ಪು ಗ್ರಹಿಕೆಯಿಂದ‌ನ ಈ‌ ಘಟನೆ ಆಗಿದೆ. ಯಾರ ವಿರುದ್ಧ ಕ್ರಮ ಬೇಡ ಹಾಗೂ ಯಾವ ಬಂಧನ ಮಾಡಬಾರದು ಎಂದು ಸೂಚಿಸಿದ್ದೇನೆ ಎಂದರು‌‌.

ಬಂಜಾರ ಸಮುದಾಯದವರು ನಮ್ಮ‌ ಜೊತೆ ಇದ್ದಾರೆ. ತಾಂಡ ಅಭಿವೃದ್ಧಿ ಮಾಡಿದ್ದೇನೆ, ತಪ್ಪು ಗ್ರಹಿಕೆಯಿಂದ ಘಟನೆಯಾಗಿದೆ. ಯಾರ ಮೇಲೂ ಕ್ರಮ ತೆಗೆದುಕೊಳ್ಳದೆ, ಶಾಂತಿ ರೀತಿಯಿಂದ ಬಗೆಹರಿಸಬೇಕು. ಬಂಧನ ಮಾಡಬಾರದು ಅಂತಾ ಹೇಳಿದ್ದೇನೆ. ಈ ಕುರಿತು ಹಿರಿಯ ಮುಖಂಡರನ್ನ ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.

ಈ ಗೊಂದಲಕ್ಕೆ ಕಾರಣ ಏನು ಅಂತಾ ಸಮಾಲೋಚನೆ ಮಾಡುತ್ತೇನೆ. ಬಂಜಾರ ಸಮಯದಾಯದವರು ಜೊತೆ ಚರ್ಚೆ ಮಾಡುವುದಕ್ಕೆ ನಾನು ವಿಜಯೇಂದ್ರ ಸಿದ್ದರಿದ್ದೆವೆ. ಕಾನೂನು ಕೈಗೆತ್ತಿಕೊಳ್ಳಬಾರದು, ತಪ್ಪುಗ್ರಹಿಕೆ ಒಳಗಾಗಿ‌ ದುಡುಕೋದು ಬೇಡ. ಸಮುದಾಯಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು.

I Am Hurt By The Attack On My House Says BS Yediyurappa

ನಾಲ್ಕು ಬಾರಿ ಮುಖ್ಯಮಂತ್ರಿ ಆದಾಗ ಅವರ ಸಮುದಾಯಕ್ಕೆ ಸ್ಪಂದನೆ ಮಾಡಿದ್ದೇನೆ. ನಾನೇ ಹೋಗಿ ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡುತ್ತೇನೆ, ನಾಳೆ ನಾಡಿದ್ದು ಹೋಗಿ ಬೇಟಿ ಮಾಡುತ್ತೇನೆ.
ಬಂಜಾರ ಸಮುದಾಯದ ಮುಖಂಡರು ಸಿಎಂ ಜೊತೆ ಚರ್ಚೆ ಮಾಡಲಿ ಅವಕಾಶ ಇದೆ.

ಶಿಕಾರಿಪುರ ಶಾಂತಿಯುತವಾಗಿರುವ ತಾಲ್ಲೂಕು. ಏಕಾಏಕಿ ಮನೆ ಮೇಲೆ ಕಲ್ಲು ತೂರಾಟ ಆದಾಗ ಮನಸ್ಸಿಗೆ ನೋವಾಗುತ್ತೆ, ಇಗ ಶಾಂತಿಯುತ ವಾತಾವರಣದ ಇದೆ. ಯಾವುದೇ ಕುಮ್ಮಕ್ಕಿಲ್ಲ ಪ್ರತ್ಯಕ್ಷವಾಗಿ ಹೋಗಿ ಮಾತನಾಡುತ್ತೇನೆ. ನಾರಾಯಣ್ ಸ್ವಾಮಿಗೂ ಹೇಳ್ತಿನಿ ಯಾರ ಕೈವಾಡ ಇದೆ ಅಂತಾ ಸುಮ್ಮನೆ ಹೇಳುವುದು ಬೇಡ ಅಂತ, ನಾನು ಯಾರ ಮೇಲೂ ಆರೋಪ ಮಾಡಲ್ಲ, ಅಲ್ಲಿ ಹೋಗಿ ಮಾತಾಡುತ್ತೇನೆ ಎಂದು ತಿಳಿಸಿದರು.

ಬಂಜಾರ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ:ಬಸವರಾಜ ಬೊಮ್ಮಾಯಿ‌

ಬಂಜಾರ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆಯಿದೆ. ನಾವು ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ಮೇಲೆ ಕಾಂಗ್ರೆಸ್ ನವರಿಗೆ ತಡೆದುಕೊಳ್ಳಲಾಗದೇ, ಈ ರೀತಿಯ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬಂಜಾರ ಸಮುದಾಯದ ಮೀಸಲಾತಿಯನ್ನು ಸದಾಶಿವ ಆಯೋಗ ಶಿಪಾರಸ್ಸಿನ ಅನ್ವಯದಲ್ಲಿ ಮಾಡಿಲ್ಲ. ನಮ್ಮ ಸಚಿವ ಸಂಪುಟದ ಮೂಲಕ ಮಾಡಿದ್ದೇವೆ. ಅವರಿಗೆ ಎಸ್.ಸಿ ಯಿಂದ ತೆಗೆಯುತ್ತಾರೆ ಎಂಬ ಆತಂಕ ಇತ್ತು. ನಾನೇ ಆದೇಶವನ್ನು ಮಾಡಿ ಬೋವಿ, ಲಂಬಾಣಿ ಎಲ್ಲ ಸಮುದಾಯಗಳು ಎಸ್.ಸಿ ಯಲ್ಲಿಯೇ ಇರುತ್ತವೆ ಎಂದು ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. 3% ರಿಂದ 4.5% ಕೊಟ್ಟಿದ್ದೇವೆ. ಅವರ ಬೇಡಿಕೆಯಂತೆಯೇ ಸಮುದಾಯದ ರಕ್ಷಣೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಸುಮಾರು ಎರಡು ಲಕ್ಷ ಜನರಿಗೆ ಹಕ್ಕುಪತ್ರ ಕೊಡುತ್ತಿದ್ದೇವೆ. ಯಡಿಯೂರಪ್ಪನವರು ತಾಂಡಾ ಅಭಿವೃದ್ಧಿ ನಿಗಮ ಮಾಡಿ, ಮೂಲಭೂತ ಸೌಕರ್ಯ ಕೊಟ್ಟವರು. ಹೀಗಾಗಿ ಯಾವುದೇ ಹಿಂಸೆಗೆ ಅವಕಾಶ ಬೇಡ. ಏನೇ ಇದ್ದರೂ ಕುಳಿತು ಚರ್ಚೆ ಬೇಡ ಮಾಡೋಣ. ಬಂಜಾರ ಸಮುದಾಯವನ್ನು ಮೊದಲಿನಿಂದಲೂ ಬಿಜೆಪಿ ಸರ್ಕಾರ ರಕ್ಷಣೆ ಮಾಡಿಕೊಂಡು ಬಂದಿದೆ. ಮುಂದೆಯೂ ಕೂಡ ಅವರ ರಕ್ಷಣೆ ಮಾಡುತ್ತೇವೆ. ಈ ತರಹದ ತಪ್ಪು ದಾರಿಗೆ ಎಳೆಯುವ ಅವಕಾಶ ಮಾಡಿಕೊಡಬಾರದು. ಕಾಂಗ್ರೆಸ್ ಮಾಡುತ್ತಿರುವ ಕುಖೃತ್ಯವನ್ನು ನಾನು ಖಂಡಿಸುತ್ತೇನೆ ಎಂದರು.

ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಹಿಂಸೆ, ಕ್ಷೋಭೆ ಉಂಟು ಮಾಡುವುದು ಅತ್ಯಂತ ಖಂಡನೀಯ. ಒಂದು ರಾಷ್ಟ್ರೀಯ ಪಕ್ಷ ಮಾಡಿರುವಂತಹದ್ದು ಸಣ್ಣ ಕೆಲಸ. ಜನರ ಮಧ್ಯೆ ಜಗಳ ಹಚ್ಚುವ ಶಕುನಿ ಕಾಂಗ್ರೆಸ್ ಪಕ್ಷ ಎಂದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+