Ramchandra Rao: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್, ಎಸ್‌ಐಟಿ ತನಿಖೆಗೆ ಆಗ್ರಹ: ಸಿಎಂಗೆ ಪತ್ರ
ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಮಹಿಳೆಯ ಜೊತೆಗೆ ರಾಸಲೀಲೆಯಲ್ಲಿ ತೊಡಗಿದ್ದ ಡಿಜಿಪಿ ರಾಮಚಂದ್ರ ರಾವ್ ಅವರ ವಿಡಿಯೋ ವೈರಲ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆಯಸಲಾಗಿದೆ.
ತುಮಕೂರಿನಲ್ಲಿ ಮಾನವ ಹಕ್ಕುಗಳ ಆಯೋಗ ವತಿಯಿಂದ ರಾಮಚಂದ್ರ ರಾವ್ ಅವರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡುವಂತೆ ಆಗ್ರಹ ಕೇಳಿ ಬಂದಿದೆ. ಈ ಸಂಬಂಧ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ ಆಯೋಗವು ಕೋರಿದೆ. ಸದ್ಯ ಪ್ರಕರಣದ ತನಿಖೆಗೆ ಸಚಿವರು ಶಿಫಾರಸು ಮಾಡಿದ್ದಾರೆ. ಆದರೆ ಎಸ್‌ಐಟಿಯಿಂದಲೇ ತನಿಖೆ ನಡೆಸುವಂತೆ ಆಯೋಗವು ಮನವಿ ಮಾಡಿದೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ವಿಡಿಯೋ ವೈರಲ್ ಪ್ರಕರಣಕ್ಕೆ ಬೆಳಗಾವಿ ಲಿಂಕ್
ರಾಮಚಂದ್ರ ರಾವ್ ಅವರು ಬೆಳಗಾವಿಯಲ್ಲಿ ಐಜಿ ಆಗಿದ್ದಾಗ ಮಹಿಳೆಯರ ಜೊತೆ ಕಚೇರಿಯಲ್ಲೇ ಅನುಚಿತವಾಗಿ ವರ್ತಿಸಿದ್ದಾರೆ. ರಾಸಲೀಲೆಯಲ್ಲಿ ತೊಡಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋ ರೆಕಾರ್ಡ್ ಆಗಿ ಸುಮಾರು ಏಳೆಂಟು ವರ್ಷಗಳ ಕಳೆದಿವೆ ಎನ್ನಲಾಗಿದೆ. ಬೆಳಗಾವಿಗೂ ಈ ಪ್ರಕರಣಕ್ಕೆ ನಂಟಿದೆ. ಬೆಳಗಾವಿಯಲ್ಲಿ ಅಧಿಕಾರದಲ್ಲಿದ್ದಾಗ ಕಚೇರಿಯಲ್ಲಿ ಮಹಿಳೆಯರ ಜೊತೆಗೆ ಈ ಐಪಿಎಸ್ ಅಧಿಕಾರಿ ರಾವ್ ಅವರು ಅಶ್ಲೀಲವಾಗಿ ನಡೆದುಕೊಂಡಿದ್ದರು ಎಂಬುದು ಗೊತ್ತಾಗಿದೆ.
ಕಚೇರಿಯಲ್ಲಿ ಅನುಚಿತವಾಗಿ ವರ್ತಿಸಿದ ಮಹಿಳೆಯರ ಜೊತೆಗೆ ರಾಮಚಂದ್ರ ರಾವ್ ದೂರವಾಣಿಯಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ. ಅದರ ಆಡಿಯೋ ಕರೆಗಳ ಆನ್‌ಲೈನ್ ನಲ್ಲಿ ಹರಿದಾಡುತ್ತಿವೆ. ಇನ್ನೂ ರಾಸಲೀಲೆ ವಿಡಿಯೋ ಹೊರ ಬಂದ ಬಳಿಕ ಆ ಬಗ್ಗೆ ಸುದ್ದಿಗಾರರ ಮುಂದೆ ರಾಮಚಂದ್ರ ರಾವ್ ಗೊಂದಲ ಹೇಳಿಕೆ ನೀಡಿದ್ದರು. 'ಇದು ಹಳೇಯ ವಿಡಿಯೋ, ಇದು ಬೆಳಗಾವಿಯಲ್ಲಿದ್ದಾಗ ಏಳೆಂಟು ವರ್ಷದ ಹಿಂದಿನದ್ದು' ಎಂದು ಹೇಳಿ ನಂತರ ವರಸೆ ಬದಲಿಸಿದ್ದರು. ಇದರಲ್ಲಿ ನನ್ನ ಸಿಕ್ಕಿಸಿ ಹಾಕಲಾಗುತ್ತದೆ. ಇದೆಲ್ಲ ಪಿತೂರಿ ಎಂದು ಆರೋಪಗಳನ್ನು ನಿರಾಕರಿಸಿದ್ದರು.












Click it and Unblock the Notifications