ಹುಬ್ಬಳ್ಳಿ : ರಸ್ತೆ ಅಪಘಾತ, ಐವರ ದುರ್ಮರಣ

ಹುಬ್ಬಳ್ಳಿ, ನವೆಂಬರ್, 03: ನಗರದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಟೆಂಪೋ ಮತ್ತು ಲಾರಿ ನಡುವೆ ನವೆಂಬರ್ 02ರ ಸೋಮವಾರದಂದು ರಾತ್ರಿ 9.30ರ ಹೊತ್ತಿಗೆ ನಡೆದ ರಸ್ತೆ ಅಫಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ.

ರಾಯನಾಳ ಗ್ರಾಮದ ಬ್ರಿಜ್ ರಸ್ತೆ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಾಲಕರು ಮತ್ತು ಟೆಂಫೋ ಚಾಲಕ ಸೇರಿ ಒಟ್ಟು 5 ಜನ ಮೃತಪಟ್ಟಿದ್ದು ಸುಮಾರು 28 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.[ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯಕ್ಕೆ ಅಡ್ಡಿಯೇ ಇಲ್ಲ!]

Hubballi: 5 people death in accident on Monday

ಅಪಘಾತ ನಡೆದಿರುವುದು ಎಲ್ಲಿ?

ಕುಂದಗೋಳ ತಾಲೂಕು ಮಂಡಿಗನಾಳ ಗ್ರಾಮಸ್ಥರೊಬ್ಬರ ಪುತ್ರಿಯ ವಿವಾಹದ ಮಾತುಕತೆಗಾಗಿ ಬೆಳಗಾವಿ ಜಿಲ್ಲಾ ನೀರಲಿ ಗ್ರಾಮಕ್ಕೆ ಟೆಂಪೋದಲ್ಲಿ ಸುಮಾರು 35 ಜನರು ಸೋಮವಾರ ಬೆಳಗ್ಗೆ ಹೋಗಿದ್ದರು.

ಊರಿಂದ ಮರಳಿ ಬರುವಾಗ ಲಾರಿ ಮತ್ತು ಟೆಂಫೋ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಲ್ಲಿರುವ ರಾಯನಾಳ ಗ್ರಾಮದ ಬ್ರಿಜ್ ಬಳಿ ಈ ದುರ್ಘಟನೆ ಸಂಭವಿಸಿದೆ. ಟೆಂಪೋ ಹೆದ್ದಾರಿಯಿಂದ ಬ್ರಿಜ್ ಕೆಳಗೆ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.[ಬೆಂಗಳೂರು : ಬಿಎಂಟಿಸಿ ಬಸ್ಸಿಗೆ ಕಾಲೇಜು ವಿದ್ಯಾರ್ಥಿನಿ ಬಲಿ]

ಮೃತಪಟ್ಟವರನ್ನು ಧಾರವಾಡ ಜಿಲ್ಲಾ ಕುಂದಗೋಳ ತಾಲೂಕು ಮಂಡಿಗನಾಳದ ಭರಮಗೌಡ ಎಸ್.ಪಾಟೀಲ (65), ಕುಬಿಬಾಳದ ಗದಿಗೆಪ್ಪ ಅಶೋಕ ಹದ್ಲಿ (9) ಹುಬ್ಬಳ್ಳಿ ವಿಜಯನಗರ ನಿವಾಸಿ ಸಾವಿತ್ರಿ ಯೋಗೇಶ್ ಅಪ್ಪಣ್ಣವರ (30), ಚೇತನ (3), ಶಿಗ್ಗಾವಿ ತಾಲೂಕಿನ ಹುಲಗೂರು ಗ್ರಾಮದ ಟೆಂಪೋ ಚಾಲಕ ಪುಟ್ಟಪ್ಪ ಕುರುಬರ ( 45) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+