HSRP Number Plate: ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರಿಗೆ ಭರ್ಜರಿ ಬಂಪರ್ ಸುದ್ದಿ!

ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನ ಸಂಖ್ಯೆಯು 2 ಕೋಟಿಗಿಂತ ಹೆಚ್ಚಾಗಿದೆ. ಹೀಗಿದ್ದರೂ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡ ಫೆಬ್ರವರಿ 17ರ ಗಡುವು ನೀಡಿತ್ತು. ಆದರೆ ಕೊನೇ ಕ್ಷಣದಲ್ಲಿ 3 ತಿಂಗಳು ಡೆಡ್‌ಲೈನ್ ಮುಂದೂಡಿದ್ದ ರಾಜ್ಯ ಸರ್ಕಾರ ಅಂದ್ರೆ ಸಿದ್ದರಾಮಯ್ಯ ಅವರ ಸರ್ಕಾರ, ಇದೀಗ ಕೊನೆಯ ದಿನಾಂಕ ಪ್ರಕಟಿಸಿದೆ.

ಹೌದು, 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಹೀಗೆ ಹಲವು ಬಾರಿ ಗಡುವು ವಿಸ್ತರಿಸಿದರೂ ಈವರೆಗೆ ಕೇವಲ 12 ಲಕ್ಷ ವಾಹನಕ್ಕೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಲಾಗಿತ್ತು. ಬಾಕಿ 1.88 ಕೋಟಿ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಹೊಸ ಸವಾಲು ಎದುರಾಗಿತ್ತು. ಈ ಹಿನ್ನೆಲೆ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಜನ ಮುಗಿಬಿದ್ದ ಸಮಯಕ್ಕೇ, ವೆಬ್‌ಸೈಟ್ ಕೂಡ ಕ್ರಾಷ್ ಆಗಿತ್ತು. ಇದೇ ಕಾರಣಕ್ಕೆ ಈಗ ಮತ್ತೆ 3 ತಿಂಗಳು ಡೆಡ್‌ಲೈನ್ ಅನ್ನು ವಿಸ್ತರಣೆ ಮಾಡಿದೆ ಸಿದ್ದರಾಮಯ್ಯ ಅವರ ಸರ್ಕಾರ. ಹಾಗಾದರೆ ಕೊನೆಯ ದಿನಾಂಕ ಎಂದು? ಈ ಮಾಹಿತಿ ತಿಳಿಯಲು ನೀವು ಮುಂದೆ ಓದಬೇಕಿದೆ!

HSRP Number Plate Installation Deadline Extended Till May 31st Of 2024

ನಂಬರ್ ಅಳವಡಿಕೆಗೆ ಮೇ 3...

ವಾಹನ ಸವಾರರಿಗೆ ಒಂದಲ್ಲ ಒಂದು ಟೆನ್ಷನ್ ಎದುರಾಗುತ್ತಿದ್ದು, ಮೊದಲಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಫೆಬ್ರವರಿ 17 ರ ಡೆಡ್‌ಲೈನ್ ನೀಡಿದ್ದು ಭಾರಿ ಗೊಂದಲವನ್ನ ಸೃಷ್ಟಿ ಮಾಡಿತ್ತು. ಈಗ ಮತ್ತೆ 3 ತಿಂಗಳು ಮುಂದಕ್ಕೆ ಹೋಗಿದೆ ಆ ಡೆಡ್‌ಲೈನ್. ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ, ಮೇ 31ರ ಗಡುವನ್ನೂ ನೀಡಿದೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಸಾರಿಗೆ ಇಲಾಖೆ. ಈ ಮೂಲಕ 2024ರ ಒಳಗಾಗಿ ಬಾಕಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಂದ್ರೆ ಅತಿ ಸುರಕ್ಷಿತ ನಂಬರ್ ಪ್ಲೇಟ್ ಅಳವಡಿಕೆಯ ಮಾಡಬೇಕಿದೆ.

ವೆಬ್‌ಸೈಟ್ ವಿಳಾಸ ಇಲ್ಲಿದೆ ನೋಡಿ

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ವಾಹನ ಸವಾರರು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವ www.siam.in ಮೂಲಕ ಮಾತ್ರ ನೋಂದಣಿ ಮಾಡಿಕೊಳ್ಳಲು ಸಾರಿಗೆ ಇಲಾಖೆ ಸೂಚನೆ ನೀಡಿದೆ. ನಂಬರ್ ಪ್ಲೇಟ್ ಅಳವಡಿಕೆ ವೇಳೆ ಸರ್ಕಾರ ಸೂಚಿಸಿದ ವೆಬ್‌ಗೆ ಭೇಟಿ ನೀಡಬೇಕಾಗಿದೆ. ಇದರ ಜೊತೆಗೆ ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು.

ಆದಷ್ಟು ಬೇಗ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ

ಒಟ್ನಲ್ಲಿ ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ, ಇದೀಗ ಮತ್ತೆ 3 ತಿಂಗಳ ಸಮಯ ಸಿಕ್ಕಿದೆ. ಹೀಗಾಗಿ ಆದಷ್ಟು ಬೇಗ ನಿಮ್ಮ ಗಾಡಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಿ. ಈ ಮೂಲಕ ಸರ್ಕಾರಿ ಆದೇಶ ಪಾಲನೆ ಮಾಡಿ, ಇಲ್ಲವಾದರೆ ಮತ್ತೆ ಗಡುವು ಮುಗಿದ ನಂತರ ಭಾರಿ ಪ್ರಮಾಣದ ದಂಡ ಕಟ್ಟಬೇಕಾಗಿ ಬರುತ್ತೆ. ಈ ಕಾರಣ, ಅಲರ್ಟ್ ಆಗಿ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಹಾಕಿಸಿಕೊಂಡು ಸುರಕ್ಷಿತವಾಗಿ ವಾಹನಗಳನ್ನ ಚಾಲನೆ ಮಾಡಿ.

ವಂಚಕರ ಬಗ್ಗೆ ಎಚ್ಚರ.. ಎಚ್ಚರ..

ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ಕಾಲ್ ಮಾಡಿ, ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದು. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅವರಿಗೆ ಯಾವುದೇ ಮಾಹಿತಿ ಕೊಡಬೇಡಿ. ಹಾಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ. ಹೀಗೆಲ್ಲಾ ನೀವು ಅಲರ್ಟ್ ಆಗಿದ್ದರೆ ಮಾತ್ರ ನಿಮಗೆ ಸುರಕ್ಷತೆ ಇರಲಿದೆ, ಇಲ್ಲವಾದರೆ ನಿಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗೆ ಅಲರ್ಟ್ ಆಗಿ ನಿಮ್ಮ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳಿ, ಅಗತ್ಯ ಇದ್ದರೆ ಅಥವಾ ನಿಮ್ಮನ್ನು ಯಾರಾದರೂ ವಂಚನೆ ಮಾಡಿರುವುದು ಬೆಳಕಿಗೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ.

HSRP Number Plate Installation Deadline Extended Till May 31st Of 2024

ಎಚ್‌ಎಸ್‌ಆರ್‌ಪಿ ನಿಯಮದ, ಮೊದಲ ಬಾರಿ ಉಲ್ಲಂಘನೆಗಾಗಿ 1 ಸಾವಿರ ರೂಪಾಯಿ ದಂಡ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ ಕೂಡ, 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಆಗಿತ್ತು. ಈ ಕಾರಣಕ್ಕೆ ಮತ್ತೊಮ್ಮೆ ಗಡುವು ಮುಗಿಯುವ ತನಕ ಕಾಯದೆ, ನಿಮ್ಮ ನಿಮ್ಮ ವಾಹಕ್ಕೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಿ. ಹಾಗೇ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಯಿಂದ ನಿಮ್ಮ ವಾಹನಕ್ಕೆ ಕೂಡ ಹೆಚ್ಚಿನ ಭದ್ರತೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+