HSRP Awareness: ನಂಬರ್ ಪ್ಲೇಟ್ ಅಳವಡಿಕೆಗಾಗಿ ಜನರ ಬಳಿ ಸಾರಿಗೆ ಇಲಾಖೆ, ಏನಿದು ಪ್ಲಾನ್?
ಬೆಂಗಳೂರು, ಡಿಸೆಂಬರ್ 12: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (HSRP) ಅಳವಡಿಸಲು ಸೂಚಿಸುವ ಜೊತೆಗೆ ಅಂತಿಮ ದಿನಾಂಕವನ್ನು ಫೆಬ್ರುವರಿ 17ರವರೆಗೆ ವಿಸ್ತರಣೆ ಮಾಡಿದೆ. ಇದರೊಂದಿಗೆ ವಾಹನ ನಂಬರ್ ಪ್ಲೇಟ್ ಅಳವಡಿಕೆ ಕುರಿತು ಜಾಗೃತಿ ಮೂಡಿಸಲು ಇಲಾಖೆ ಮುಂದಾಗಿದೆ.
2019ರ ಏಪ್ರಿಲ್ ತಿಂಗಳ ಮೊದಲು ಹೊಂದಿರುವ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕೆಂದು ಕಡ್ಡಾಯ ಮಾಡಿದೆ. ಅದರ ಗಡುವನ್ನು ನವೆಂಬರ್ 17 ಇದಕ್ಕೆ ಅಂತಿಮ ದಿನಾಂಕವಾಗಿದೆ. ಆದರೆ 2 ಕೋಟಿಯಲ್ಲಿ ಕೇವಲ 3 ಲಕ್ಷ ವಾಹನಗಳು ನೋಂದಣಿ ಆಗಿವೆ. ಈ ಸಂಬಂಧ ಗುಡವು ವಿಸ್ತರಣೆ ಮಾಡಿದೆ. ಇದೀಗ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ.

2019ರ ಏಪ್ರಿಲ್‌ಗಿಂತ ಮೊದಲು ನೋಂದಣಿಯಾಗಿದ್ದ ಎಲ್ಲ 2 ಕೋಟಿ ವಾಹನಗಳು ವಿಸ್ತೃತ ಗಡುವಿನ ಮುನ್ನವೇ ಸಾಲಿಗೆ ಸೇರಲಿವೆ ಎಂದು ರಾಜ್ಯ ಸಾರಿಗೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ನಿವಾಸಿಗಳಲ್ಲಿ ಎಚ್‌ಎಸ್‌ಆರ್‌ಪಿ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಅವರು ಸಜ್ಜಾಗುತ್ತಿದ್ದಾರೆ ಎಂದು TNIE ವರದಿ ಮಾಡಿದೆ.
HSRP ನಂಬರ್ ಪ್ಲೇಟ್ ಪ್ರಯೋಜನಕಾರಿ
ಹಳೆಯ ಎಲ್ಲ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಈ ನಂಬರ್ ಪ್ಲೇಟ್‌ಗಳನ್ನು ಸುಲಭವಾಗಿ ತೆಗೆಯುವ ಮೂಲಕ ವಾಹನಗಳ ದುರುಪಯೋಗ ತಡೆಯಬಹುದಾಗಿದೆ.
ಅಪರಾಧ ಚಟುವಟಿಕೆಗಳಿಗೆ ವಾಹನಗಳ ಬಳಕೆ, ಒಂದು ವೇಳೆ ಅಪರಾಧ ನಡೆದರೆ, ವಾಹನ ಕಳ್ಳತನ ನಡೆದರೆ ಪತ್ತೆಗೆ ಈ ನಂಬರ್ ಪ್ಲೇಟ್ ಹೆಚ್ಚು ಸಹಕಾರಿಯಾಗಿದೆ. ಒಂದು ಬಾರಿ ಈ ನಂಬರ್ ಪ್ಲೇಟ್ ಅಳವಡಿಸಿದ ನಂತರ ಮತ್ತೆ ತೆಗೆಯುವುದಿಲ್ಲ.

ಈ ಹಳೇಯ ವಾಹನಗಳಿಗೆ ಸೂಚನೆ ಕಡ್ಡಾಯ
ಈ ಮೊದಲೇ ತಿಳಿಸಿದಂತೆ ನಿರ್ದಿಷ್ಟವಾಗಿ ಗುರುತಿಸಲಾದ ಹಳೆಯ ವಾಹನಗಳು (ಏಪ್ರಿಲ್ 2019 ರ ಮೊದಲು) ಕಡ್ಡಾಯವಾಗಿ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 17 ಗಡುವು ನೀಡಿತ್ತು. ಇತ್ತೀಚೆಗೆ ಕೊನೆ ದಿನಾಂಕ ವಿಸ್ತರಣೆ ಮಾಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆಗೆ ಮುಂದಾಗಬೆಕು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ ದಕ್ಷಿಣ) ಮಲ್ಲಿಕಾರ್ಜುನ ಸಿ ತಿಳಿಸಿದ್ದಾರೆ.
ಮೂಲ ಸಲಕರಣೆ ತಯಾರಕರು (ಒಇಎಂ) ಅಧಿಕಾರ ಹೊಂದಿರುವ ಎಚ್‌ಎಸ್‌ಆರ್‌ಪಿ ತಯಾರಕರಿಗೆ ಮಾತ್ರ ಅನುಮತಿ ನೀಡಿದ್ದರ ವಿರುದ್ಧ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಇದನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ ಎಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದರು.
ಸರ್ಕಾರದಿಂದ ಒಪ್ಪಿಗೆ ಪಡೆಯಲಿರುವ ಜಾಗೃತಿ
ಈ ನಂಬರ್ ಪ್ಲೇಟ್ ಅಳವಡಿಕೆ ಕುರಿತು ವ್ಯಾಪಕ ಪ್ರಚಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಇಲಾಖೆ ಒಪ್ಪಿಗೆ ಪಡೆದುಕೊಳ್ಳಲಿದೆ. ನಂತರ ಈ ಕುರಿತು ಜಾಗೃತಿ ಮೂಡಿಸಲಿದೆ. ರಾಜ್ಯದಾದ್ಯಂತ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಎಚ್‌ಎಸ್‌ಆರ್‌ಪಿಯ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಸರ್ಕಾರದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರೇರೇಪಿಸಲಾಗುವುದು. ಅದಕ್ಕಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಲ್ಲಿಕಾರ್ಜುನ ಅವರು ತಿಳಿಸಿದರು.
ಸರ್ಕಾರದ ಸೂಚನೆಯಿಂದ ಕಳೆದ ನವೆಂಬರ್ 17 ರವರೆಗೆ 3 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications