ಆಸ್ತಿ ದಾಖಲೆ ನಕಲಿಯೋ, ಅಸಲಿಯೋ ನೋಡುವುದು ಹೇಗೆ, ಪ್ರಾಪರ್ಟಿ ಖರೀದಿ ಮಾಡುವಾಗ ಏನ್ಮಾಡ್ಬೇಕು ?

Property: ಆಸ್ತಿ, ಜಾಗ ಖರೀದಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ, ಆಸ್ತಿ ಖರೀದಿ ಮಾಡುವಾಗ ಹಾಗೂ ಮನೆ, ಜಾಗವನ್ನು ಖರೀದಿ ಮಾಡುವಾಗ ನೀವು ಕೆಲವೊಂದು ಪ್ರಮುಖ ದಾಖಲೆಗಳನ್ನು ಗಮನಿಸಲೇಬೇಕು. ಇದರಿಂದ ನೀವು ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಇಷ್ಟು ಮಾತ್ರವಲ್ಲ ಈಗಾಗಲೇ ನೀವು ಆಸ್ತಿ ಖರೀದಿ ಮಾಡಿದ್ದರೆ ಸಹ ಆ ದಾಖಲೆಗಳು ಒರಿಜಿನಲ್ಲೋ ಇಲ್ಲ, ಅದು ನಕಲಿಯೋ ಎಂದು ತಿಳಿದುಕೊಳ್ಳುವುದಕ್ಕೆ ಹಲವು ದಾಖಲೆಗಳನ್ನು ನೀವು ಗಮನಿಸಬೇಕಾಗುತ್ತದೆ. ಇದರಿಂದ ನೀವು ವೆಚ್ಚ ಮಾಡಿದ ಕೋಟ್ಯಾಂತರ ರೂಪಾಯಿ ಆದಾಯ ಸುರಕ್ಷಿತವಾಗಿರುತ್ತದೆ. ಯಾವೆಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎನ್ನುವ ವಿವರ ಇಲ್ಲಿದೆ.

ಮನೆ ಅಥವಾ ಜಾಗವನ್ನು ಖರೀದಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಇದಕ್ಕಾಗಿ ಜನ ತಮ್ಮ ಜೀವಮಾನವೆಲ್ಲ ಕೂಡಿಟ್ಟ ಹಣದಿಂದ ಜಾಗವನ್ನೋ ಅಥವಾ ಭೂಮಿಯನ್ನೋ ಖರೀದಿ ಮಾಡುತ್ತಾರೆ. ಆದರೆ, ಕೆಲವೊಂದು ಸಣ್ಣ ತಪ್ಪುಗಳಿಂದ ಆಸ್ತಿಯೂ ಸಿಗದೆ, ಕೂಡಿಟ್ಟ ಹಣವೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ನೀವು ಎಚ್ಚರಿಕೆ ವಹಿಸುವುದು ಉತ್ತಮ ಅದೇನು ಎನ್ನುವ ವಿವರ ಇಲ್ಲಿದೆ.

How to Check if Property Documents are Fake or Genuine

* ವಕೀಲರನ್ನು ನೇಮಕ ಮಾಡಿಕೊಳ್ಳಿ: ಯಾವುದೇ ಆಸ್ತಿ ಜಾಗ ಅಥವಾ ಮನೆ ಸೇರಿದಂತೆ ಯಾವುದೇ ಪ್ರಾಪರ್ಟಿಯನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ನೀವು ಕಡ್ಡಾಯವಾಗಿ ವಕೀಲರೊಬ್ಬರನ್ನು ನೇಮಕ ಮಾಡಿಕೊಳ್ಳಿ ಇದರಿಂದ ಮೋಸಗಳು ಆಗದಂತೆ ಎಚ್ಚರಿಕೆ ವಹಿಸಬಹದು. ಅದು ಮಾತ್ರವಲ್ಲ ಆಸ್ತಿ ಖರೀದಿ ಹಾಗೂ ಮಾರಾಟದ ನಿಖರ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ಇದು ಸಹಕಾರಿಯಾಗಿದೆ.

* ಕಾನೂನುಗಳನ್ನು ಪರಿಶೀಲನೆ ಮಾಡಿ: ಕಾಲ ಕಾಲಕ್ಕೆ ತಕ್ಕಂತೆ ಆಸ್ತಿಯ ಕಾನೂನುಗಳು ಬದಲಾಗುತ್ತಲ್ಲೇ ಇರುತ್ತವೆ. ಹೀಗಾಗಿ, ಆಸ್ತಿ ಖರೀದಿ ಮಾಡುವಾಗ ಯಾವ ಕಾನೂನು ಇದೆ ಎಂದು ನೋಡಿಕೊಳ್ಳಿ. ಇದೀಗ ರಾಜ್ಯ ಸರ್ಕಾರವು ಬಿ ಖಾತಾಗೆ ನಿರಾಳತೆ ನೀಡಿದೆ. ಆದರೆ ಶಾಶ್ವತ ಪರಿಹಾರವಲ್ಲ ಹೀಗಾಗಿ ಈ ರೀತಿಯ ವಿಷಯಗಳನ್ನು ಗಮನಿಸಿ. ಇನ್ನು 1990ಕ್ಕಿಂತ ಹಿಂದಿನ ನೋಂದಣಿ ಕಾನೂನು, ಹಳೆಯ ದಾಖಲೆಗಳ ಪ್ರಾಮಾಣಿಕತೆಯ ಬಗ್ಗೆ ಪರಿಶೀಲನೆ ಮಾಡಿ. ಕಾನೂನಿನ ನೋಟರಿಯ ಅನುಸಾರ ಹಳೆಯ ನಿಯಮಗಳ ಪ್ರಕಾರ ಆಸ್ತಿ ಹಕ್ಕನ್ನು ಸಹ ಪರಿಶೀಲನೆ ಮಾಡಬೇಕಾಗುತ್ತದೆ.

* ಕಾಪಿ ಡಾಕ್ಯೂಮೆಂಟ್ ಪರಿಶೀಲನೆ ಮಾಡಿ: ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಡಾಕ್ಯೂಮೆಂಟ್‌ನ ಮೇಲೆ ಏನೆಂದು ಬರೆಯಲಾಗಿದೆ ಎಂದು ಪರಿಶೀಲನೆ ಮಾಡಿ. ಡಾಕ್ಯುಮೆಂಟ್‌ನ ಮೇಲೆ Copy of Document ಎಂದು ಬರೆಯುವ ಮೂಲಕ ನಕಲಿ ದಾಖಲೆಗಳನ್ನು ಕೆಲವರು ತಯಾರಿಸುವುದು ಇದೆ. ಒಂದೊಮ್ಮೆ ಈ ರೀತಿ ಆದರೆ ಆಸ್ತಿಯ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ನೀವು ಎಫ್‌ಐಆರ್ ದಾಖಲಿಸುವುದಕ್ಕೂ ಅವಕಾಶ ಇದೆ.

* ರಿಜಿಸ್ಟರ್‌ ಕಚೇರಿ ಪರಿಶೀಲನೆ ಮಾಡಿ: ಇನ್ನು ಪ್ರತಿಯೊಂದು ಆಸ್ತಿಯು ನಿರ್ದಿಷ್ಟ ಸಬ್-ರಿಜಿಸ್ಟ್ರಾರ್‌ಗೆ ಒಳಪಡುತ್ತದೆ. ನೀವು ಖರೀದಿ ಮಾಡಬೇಕು ಎಂದು ಕೊಂಡಿರುವ ಆಸ್ತಿಯ ನೋಂದಣಿಯು ಯಾವ ವರ್ಷದಲ್ಲಿ ಆಗಿದೆ ಎನ್ನುವುದನ್ನು ನೋಡಿ. ಅಲ್ಲದೆ ಇನ್ನು ಯಾವ SRO ವ್ಯಾಪ್ತಿಗೆ ಸೇರುತ್ತದೆ ಎಂದು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

* ನಕಲಿ ಸ್ಟಾಂಪ್‌ ಮತ್ತು ಸೀಲ್ ನೋಡಿ: ಇನ್ನೊಂದು ಮುಖ್ಯ ಅಂಶವೆಂದರೆ ಆಸ್ತಿಗಳ ದಾಖಲೆಯಲ್ಲಿ ಮೆಟಲ್ ಸ್ಟಾಂಪ್ ಬಳಸಲಾಗುತ್ತದೆ. ಆದರೆ, ಕೆಲವರು ರಬ್ಬರ್ ಸ್ಟಾಂಪ್ ಬಳಸಿ ಮೋಸ ಮಾಡುವುದು ಇದೆ. ಹೀಗಾಗಿ ರಬ್ಬರ್ ಸ್ಟಾಂಪ್‌ ಹಾಕಿರುವ ಸಣ್ಣ ಸುಳಿವು ಇಲ್ಲ ಅನುಮಾನ ಬಂದರೂ ತಡ ಮಾಡದೆ ಪರಿಶೀಲನೆ ಮಾಡಿ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಆಗುವುದು ತಪ್ಪುತ್ತದೆ.

* ಭೂಮಿ ಸರ್ವೇ ದೋಷ ನೋಡಿ: ನಿಮಗೆ ಈ ವಿಷಯ ತಿಳಿದಿರಲೇಬೇಕು. ಸಾಮಾನ್ಯವಾಗಿ ಒಂದೇ ಸರ್ವೇ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ದಾಖಲೆಗಳ (ದಸ್ತವೇಜುಗಳಲ್ಲಿ) ಒಬ್ಬೊಬ್ಬರ ಹೆಸರು ತೋರಿಸಿದರೆ, ಇದರ ಹಿಂದೆ ವಂಚನೆ ಮಾಡಿರುವ ಸಾಧ್ಯತೆ ಇದೆ. ಈ ರೀತಿ ಇದ್ದರೆ ಸರ್ಕಾರದ ಭೂ ದಾಖಲೆಗಳ ತಪಾಸಣೆಯೊಂದಿಗೆ ಚೆಕ್‌ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+