• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಾಸ ಮಾನಸ ಸರೋವರ ಯಾತ್ರೆ; ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 05; ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ಸರ್ಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತದೆ. ಆಸಕ್ತರು, ಅರ್ಹರು ಡಿಸೆಂಬರ್ 31ರ ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಸರ್ಕಾರದ ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. 2022-23ನೇ ಸಾಲಿನಲ್ಲಿ ರಾಜ್ಯದಿಂದ ಪ್ರಥಮ ಬಾರಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ. 30,000 ಸಹಾಯಧನವನ್ನು ನೀಡಲಾಗುತ್ತದೆ.

ಬಳ್ಳಾರಿಯಲ್ಲಿ ಧಾರಾಕಾರ ಮಳೆ: ಜೀವಕಳೆ ಪಡೆದ 'ಮಾನಸ ಸರೋವರ'ಬಳ್ಳಾರಿಯಲ್ಲಿ ಧಾರಾಕಾರ ಮಳೆ: ಜೀವಕಳೆ ಪಡೆದ 'ಮಾನಸ ಸರೋವರ'

ಆಸಕ್ತರು ಡಿಸೆಂಬರ್ 1 ರಿಂದ 31/12/2022ರ ಸಂಜೆ 4 ಗಂಟೆಯೊಳಗೆ ಆನ್‌ಲೈನ್, ಖುದ್ದಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ಅನುದಾನ ಲಭ್ಯತೆಗೆ ಅನುಗುಣವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅನುದಾನವನ್ನು ವಿತರಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

 ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ

ಷರತ್ತುಗಳು; ಅರ್ಜಿಗಳನ್ನು ಸಲ್ಲಿಕೆ ಮಾಡುವ ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು. ಯಾತ್ರಾರ್ಥಿಯು ಆನ್‌ಲೈನ್ ಮತ್ತು ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದು.

ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಯಾತ್ರಾರ್ಥಿಗಳಿಗೆ ಲಿಂಕ್

http://karnemaka.kar.nic.in/yatrabenefit1/

ಟಿಕೆಟ್‌ಗೆ ಅರ್ಜಿ ಹಾಕ್ತೇನೆ, 2 ಲಕ್ಷ ಯಾಕೆ ಕೊಡಬೇಕು: ಎಸ್‌ಎಸ್‌ ಮಲ್ಲಿಕಾರ್ಜುನಟಿಕೆಟ್‌ಗೆ ಅರ್ಜಿ ಹಾಕ್ತೇನೆ, 2 ಲಕ್ಷ ಯಾಕೆ ಕೊಡಬೇಕು: ಎಸ್‌ಎಸ್‌ ಮಲ್ಲಿಕಾರ್ಜುನ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಯಾತ್ರಾರ್ಥಿಯು ಅಪ್‌ಲೋಡ್ ಮಾಡಿರುವ ದಾಖಲೆಗಳ ಪ್ರತಿಗಳನ್ನು ಖುದ್ದಾಗಿ ಅಥವಾ ಪೋಸ್ಟ್ ಮೂಲಕ ಕಛೇರಿಗೆ ಸಲ್ಲಿಸಬೇಕು.

ದಾಖಲೆಗಳು; ಯಾತ್ರಾರ್ಥಿಗಳು ಅರ್ಜಿಯೊಂದಿಗೆ ಒಂದು ಭಾವಚಿತ್ರ (ಪಾಸ್‌ಪೋರ್ಟ್ ಅಳತೆ), ಆಧಾರ್ ಗುರುತಿನ ಚೀಟಿ,

How To Apply For Kailasa Manasa Sarovara Yatra Subsidy

ಚುನಾವಣಾ ಗುರುತಿನ ಚೀಟಿ, ರದ್ದುಪಡಿಸಿದ ಚೆಕ್ ಹಾಳೆ, ಪಾಸ್ ಪುಸ್ತಕದ ಮೊದಲ ಪುಟದ ನಖಲು ಪ್ರತಿ, ರೂ. 20/-ಗಳ ಛಾಪಾ ಕಾಗದದಲ್ಲಿ ಸ್ವ-ದೃಢೀಕರಣ ಸದರಿ ಯಾತ್ರೆಯನ್ನು ಕೇಂದ್ರ ಸರ್ಕಾರದ
ಮಾರ್ಗವಾಗಿ ತೆರಳಿದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ದೃಢೀಕರಣವನ್ನು ನೀಡತಕ್ಕದ್ದು.

ಯಾತ್ರೆಯನ್ನು ನೇಪಾಳ / ಟಿಬೆಟ್ ಮಾರ್ಗವಾಗಿ ತೆರಳಿದ್ದಲ್ಲಿ ಲಾಹ್ಸ, ಚೈನಾ ಸರ್ಕಾರದ ವತಿಯಿಂದ ನೀಡಲಾದ (C.I.P.S.C) ಪ್ರತಿಯನ್ನು ಒದಗಿಸತಕ್ಕದ್ದು, ಗ್ರೂಪ್ ವೀಸಾ, ಪಾಸ್‌ಪೋರ್ಟ್‌ನ ಮೊದಲ ಹಾಗೂ ಕೊನೆಯ ಪ್ರತಿ ಮತ್ತು ಸೀಲ್ ಇರುವಂತಹ ಪ್ರತಿಯ ಕಲರ್ ಜೆರಾಕ್ಸ್ ನೀಡಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, 4ನೇ ಮಹಡಿ, ಮಿಂಟೋ ಶ್ರೀ ಆಂಜನೇಯ ಭವನ, ಆಲೂರು ವೆಂಕಟರಾವ್‌ ರಸ್ತೆ, ಚಾಮರಾಜಪೇಟೆ, ಬೆಂಗಳೂರು -18 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

English summary
Applications invited for the Kailasa Manasa Sarovara yatra subsidy. December 31 last date to submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X