ಹೊಸ ವೋಟರ್ ಐಡಿಗೆ ಹೆಸರು ಸೇರಿಸುವುದು ಹೇಗೆ, ಮತದಾರರ ಚೀಟಿಯಲ್ಲಿ ವಿಳಾಸ ಬದಲಾಯಿಸುವುದು ಹೇಗೆ ?
voter id card: ಮತದಾರರ ಪಟ್ಟಿಗೆ (ವೋಟರ್ ಐಡಿ ಲಿಸ್ಟ್ ) ನಿಮ್ಮ ಹೆಸರು ಸೇರಿಸಬೇಕಾ ಇಲ್ಲ, ವೋಟರ್ ಐಡಿಯಲ್ಲಿ ನಿಮ್ಮ ಹೆಸರು ಅಥವಾ ಯಾವುದಾದರೂ ನಿರ್ದಿಷ್ಟ ಬದಲಾವಣೆಗಳನ್ನು ಮಾಡಬೇಕೇ ಆಗಿದ್ದರೆ ತಪ್ಪದೇ ಈ ಸುದ್ದಿಯನ್ನು ಓದಿ. ಇದರಲ್ಲಿ ನಿಮ್ಮ ವೋಟರ್ ಐಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಹ ಇವೆ.
ಭಾರತದ ಚುನಾವಣಾ ಆಯೋಗದ ಸೂಚನೆಯಂತೆ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಇದೀಗ (01.01.2025) ಮತದಾರರ ಪಟ್ಟಿಗಳ ವಿಶೇಷ ಹಾಗೂ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ.

Special Brief Revision of Electoral Roll 2025: ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕಡೆ ಈ ಪ್ರಕ್ರಿಯೆ ನಡೆಯುತ್ತಿದೆ. ವಿಧಾನಸಭಾ ಕ್ಷೇತ್ರವರು ಮತದಾರರ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ https://ceo.karnataka.gov.in ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಅಲ್ಲದೇ ಇದು ಪಿಡಿಎಫ್ ರೂಪದಲ್ಲೂ ಸಿಗಲಿದೆ. ಮತದಾರರ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿದೆಯೇ ಇಲ್ಲವೇ ಎಂದು ಇಲ್ಲಿ ಪರಿಶೀಲನೆ ಮಾಡಬಹುದಾಗಿದೆ.
ಹೊಸ ವೋಟರ್ ಐಡಿ: 18 ವರ್ಷ ತುಂಬಿರುವವರು ಎಲ್ಲರೂ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ವೋಟರ್ ಐಡಿಗೆ ಹೆಸರು ಸೇರಿಸುವುದು ಹೇಗೆ, ವೋಟರ್ ಐಡಿ ಮಾಡಿಸಲು ಏನೆಲ್ಲ ಬೇಕು ಎನ್ನುವ ವಿವರ ಇಲ್ಲಿದೆ.
b) ಅರ್ಜಿಗಳನ್ನು ಸಲ್ಲಿಸುವ ವಿಧಾನ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ ಇಲ್ಲವೇ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ನೀವು ನಿರ್ದಿಷ್ಟ ನಮೂನೆ (ಮಾದರಿ)ಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.
ಮತದಾರರ ಗುರುತಿನ ಚೀಟಿ ಯಾವುದಕ್ಕೆ ಯಾವ ಅರ್ಜಿ ಸಲ್ಲಿಸಬೇಕು ?
i. ನಮೂನೆ 6: ಹೊಸ ಮತದಾರರ ಸೇರ್ಪಡೆಗೆ ಅರ್ಜಿ ನಮೂನೆ (ಮಾದರಿ)
ii ನಮೂನೆ 6A : ಸಾಗರೋತ್ತರ (ಎನ್‌ಆರ್‌ಐ) ಭಾರತೀಯ ಮತದಾರರಿಂದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ.
iii ನಮೂನೆ 7: ಈಗಾಗಲೇ ಇರುವ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು / ತೆಗೆಯಲು ಆಕ್ಷೇಪಣೆ ಸಲ್ಲಿಸುವುದಕ್ಕೆ ಅರ್ಜಿ
iv.ನಮೂನೆ 8: ವಾಸಸ್ಥಳವನ್ನು ಬದಲಾಯಿಸಲು / ಈಗಾಗಲೇ ಇರುವ ಮತದಾರರ ಪಟ್ಟಿಯಲ್ಲಿನ ನಿರ್ದಿಷ್ಟ ತಿದ್ದುಪಡಿ/ಇಪಿಐಸಿಯನ್ನು ಬದಲಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಈ ಅರ್ಜಿಯನ್ನು ಸಲ್ಲಿಸಬಹುದು.
ಈ ಎಲ್ಲಾ ಮಾದರಿಯ ಅರ್ಜಿಗಳನ್ನು ಮತದಾರರ ಸೇವಾ ಪೋರ್ಟಲ್ (https://voters.eci.gov.in/) ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆಗಲ್ಲ
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ, ನಿರ್ದಿಷ್ಟವಾಗಿ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಮತದಾರರ ಪಟ್ಟಿಗಳ (ವೋಟರ್ ಲಿಸ್ಟ್) ಸಂಕ್ಷಿಪ್ತ ಪರಿಷ್ಕರಣೆ (Revision) ಮಾಡುತ್ತಿಲ್ಲ. ಈ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಕ್ರಿಯೆ ಮುಗಿದ ನಂತರ ಆಯೋಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಅದಾದ ಮೇಲೆ ಈ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಪ್ರಾರಂಭವಾಗುತ್ತದೆ.
ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕದ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದೆ. ಇದರ ವೇಳಾಪಟ್ಟಿ ವಿವರ ಈ ರೀತಿ ಇದೆ.
ಮತದಾರರ ಕರಡುಪಟ್ಟಿ ಪ್ರಕಟ
ನೆನ್ನೆ (ಅಕ್ಟೋಬರ್ 29) ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ
ಅಕ್ಟೋಬರ್ 29ರಿಂದ ನವೆಂಬರ್ 28ರ ವರೆಗೆ ಮತದಾರರ ಪಟ್ಟಿಯಲ್ಲಿ ಯಾವುದಾದರೂ ಲೋಪವಿದ್ದರೆ ನೀವು ಆಕ್ಷೇಪಣೆ ಸಲ್ಲಿಸಬಹುದು.
ಡಿಸೆಂಬರ್ 24ಕ್ಕೆ ಹಕ್ಕುಗಳು ಹಾಗೂ ಆಕ್ಷೇಪಣೆಗಳ ಪರಿಶೀಲನೆ ನಡೆಯಲಿದೆ.
ಮುಂದಿನ ವರ್ಷ ಅಂದರೆ, 2025ನೇ ಸಾಲಿನ ಜನವರಿ 6ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಆಗಲಿದೆ.












Click it and Unblock the Notifications