ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಬಳಸುವುದು ಹೇಗೆ?
ಬೆಂಗಳೂರು, ಫೆಬ್ರವರಿ 18: ಇನ್ನುಮುಂದೆ ನರೇಗಾ ಜಾಬ್ ಕಾರ್ಡ್, ನರೇಗಾ ಕೆಲಸದ ಬೇಡಿಕೆ, ಕುಡಿಯುವ ನೀರಿನ ಸಂಪರ್ಕ, ನಿಮ್ಮೂರಿನ ಬೀದಿ ದೀಪ, ಚರಂಡಿ, ನೈರ್ಮಲ್ಯ ವ್ಯವಸ್ಥೆ ಹೀಗೆ ಯಾವುದೇ ಸಮಸ್ಯೆಗೂ ಜನತೆ ತಮ್ಮ ಮೊಬೈಲ್ ಮೂಲಕವೇ ಪರಿಹಾರ ಪಡೆಯಬಹುದಾಗಿದೆ. ಜನರ ಸಮಯ ಉಳಿಸಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಜನರಿಗೆ ಸೇವೆಗಳನ್ನು ಸಾಕಾಲದಲ್ಲಿ ಒದಗಿಸಲು ರಾಜ್ಯ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ.
ಬಾಪೂಜಿ ಸೇವಾ ಕೇಂದ್ರದ ಅಪ್ಲಿಕೇಶನ್ ಇದೀಗ ಅಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿದ್ದು, ಜನರು ವಿವಿಧ ಇಲಾಖೆಗಳ ಸುಮಾರು 81 ಸರ್ಕಾರಿ ಸೇವೆಗಳು ನಮ್ಮ ಈ ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಖುಷಿ ಹಂಚಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿವರಣೆ ನೀಡಿರುವ ಸಚಿವರು, ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುವುದೇಕೆ ಎನ್ನುವ ಗಾದೆಯಂತೆ ಈಗ 'ಅಂಗೈಯ್ಯಲ್ಲಿ ಅವಕಾಶ ಇಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಯುವುದೇಕೆ ಎಂಬ ಮಾತು ಗ್ರಾಮೀಣ ಜನರ ಮುಂದಿದೆ.
ಸರ್ಕಾರದ ಸೇವೆಗಳು ತಂತ್ರಜ್ಞಾನವನ್ನು ಅವಲಂಭಿಸಿದರೆ ಪ್ರಯೋಜನಗಳು ಹಲವಾರು. ತಂತ್ರಜ್ಞಾನದ ಅವಲಂಬನೆಯಿಂದ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದು, ಸಮಯದ ಉಳಿತಾಯವಾಗಲಿದೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ, ಸೇವೆಗಳನ್ನು ಸಾಕಾಲದಲ್ಲಿ ಒದಗಿಸಬಹುದು.
ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮೀಣ ಜನತೆಗೆ ತಂತ್ರಜ್ಞಾನದ ಸಾಕ್ಷರರನ್ನಾಗಿಸುವ ಜೊತೆ ಜೊತೆಗೆ ಜನರ ಅಂಗೈನಲ್ಲೇ ಸೇವೆಗಳನ್ನು ಒದಗಿಸಲು ಕ್ರಮ ವಹಿಸಿದೆ. ಬಾಪೂಜಿ ಸೇವಾ ಕೇಂದ್ರದ ಅಪ್ಲಿಕೇಶನ್ ಇದೀಗ ಅಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿದೆ. ವಿವಿಧ ಇಲಾಖೆಗಳ ಸುಮಾರು 81 ಸರ್ಕಾರಿ ಸೇವೆಗಳು ನಮ್ಮ ಈ ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ.
ಗ್ರಾಮೀಣ ಜನತೆಗೆ ಅಗತ್ಯವಿರುವ ಸರ್ಕಾರದ ದಾಖಲೆಗಳು, ಸೌಕರ್ಯಗಳು, ವಿವಿಧ ಸೇವೆಗಳನ್ನು ಪಡೆಯಲು ಇದೀಗ ಸರ್ಕಾರಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಜನನ/ಮರಣ ನೋಂದಣಿ, ಜಾತಿ/ಆದಾಯ ಪ್ರಮಾಣ ಪತ್ರಗಳು, ಬೆಳೆ/ನಿವಾಸಿ ದೃಢೀಕರಣ ಪತ್ರಗಳು, ವಿವಿಧ ಪಿಂಚಣಿ ಯೋಜನೆಗಳಿಗೆ ಇದರಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.
ನರೇಗಾ ಜಾಬ್ ಕಾರ್ಡ್, ನರೇಗಾ ಕೆಲಸದ ಬೇಡಿಕೆ, ಕುಡಿಯುವ ನೀರಿನ ಸಂಪರ್ಕ, ನಿಮ್ಮೂರಿನ ಬೀದಿ ದೀಪ, ಚರಂಡಿ, ನೈರ್ಮಲ್ಯ ವ್ಯವಸ್ಥೆ ಹೀಗೆ ಯಾವುದೇ ಸಮಸ್ಯೆಗೂ ಜನತೆ ತಮ್ಮ ಮೊಬೈಲ್ ಮೂಲಕವೇ ಪರಿಹಾರ ಪಡೆಯಬಹುದಾಗಿದೆ. ತಂತ್ರಜ್ಞಾನದ ಮೂಲಕ ಗ್ರಾಮೀಣ ಜನತೆಯ ಬದುಕನ್ನು ಇನ್ನಷ್ಟು ಉನ್ನತಿಯೆಡೆಗೆ ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಈಗ ಜನರ ಅಂಗೈಯಲ್ಲಿ ಇರುವುದು ಭವಿಷ್ಯದ ರೇಖೆಗಳಲ್ಲ, ಭವಿಷ್ಯದ ಅವಕಾಶಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಬಳಸುವುದು ಹೇಗೆ?
*ನಿಮ್ಮ ಅಂಡ್ರಾಯ್ಡ್ ಮೊಬೈಲ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ bhapuji seva kendra ಎಂದು ಸರ್ಚ್ ಮಾಡಿ ಮತ್ತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
*ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿ ಲಾಗಿನ್ ಆಗಿ ಮತ್ತು ಬಾಪೂಜಿ ಸೇವಾ ಕೇಂದ್ರದ ಸೇವೆಯನ್ನು ಪಡೆಯಿರಿ.












Click it and Unblock the Notifications