Get Updates
Get notified of breaking news, exclusive insights, and must-see stories!

KSRTC: ಕರ್ನಾಟಕ ಕೇರಳದ ವಿರುದ್ಧ ಕೆಎಆರ್‌ಟಿಸಿ ಯುದ್ಧ ಗೆದ್ದಿದ್ದೇಗೆ?

ಕರ್ನಾಟಕ ಮತ್ತು ಕೇರಳ ನಡುವೆ ಇದ್ದ ಕೆಎಸ್‌ಆರ್‌ಟಿಸಿ ವಿವಾದ ಕೊನೆಯಾಗಿದೆ. ಮದ್ರಾಸ್ ಹೈಕೋರ್ಟ್ ಕರ್ನಾಟಕದ ಪರವಾಗಿ ತೀರ್ಪು ನೀಡುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 'ಕೆಎಸ್‌ಆರ್‌ಟಿಸಿ' ಬಳಸಲು ಒಪ್ಪಿಗೆ ನೀಡಿದೆ. ಈ ಮೂಲಕ ಉಭಯ ರಾಜ್ಯಗಳ ದೀರ್ಘಕಾಲದ ವಿವಾದವೊಂದು ಬಗೆಹರಿದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆಎಸ್‌ಆರ್‌ಟಿಸಿ (KSRTC) ಎಂಬ ಸಂಕ್ಷೇಪಣವನ್ನು ಒಳಗೊಂಡಂತೆ ತನ್ನ ಟ್ರೇಡ್‌ಮಾರ್ಕ್‌ಗಳ ಕಾನೂನು ಮಾಲೀಕತ್ವವನ್ನು ಪಡೆದುಕೊಂಡಿದೆ. ಕರ್ನಾಟಕ ಮತ್ತು ಕೇರಳ ಎಸ್‌ಆರ್‌ಟಿಸಿಗಳೆರಡೂ ಹಲವು ದಶಕಗಳಿಂದ ಕೆಎಸ್‌ಆರ್‌ಟಿಸಿ ಎಂಬ ಸಂಕ್ಷೇಪಣವನ್ನು ಬಳಸುತ್ತಿವೆ.

How Karnataka Secured Legal Ownership of the KSRTC Abbreviation

ಕರ್ನಾಟಕ ಕೆಎಸ್‌ಆರ್‌ಟಿಸಿ ಎಂದು ಬಳಸುವುದಕ್ಕೆ ಕೇರಳ ಆಕ್ಷೇಪ ವ್ಯಕ್ತಪಡಿಸಿತ್ತು, ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ತಮಗೆ ಮಾತ್ರ ಕೆಎಸ್‌ಆರ್‌ಟಿಸಿ ಎಂದು ಬಳಸಲು ಅನುಮತಿ ಇದೆ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಹೇಳಿಕೆ ನೀಡಿದ ಬಳಿಕ ವಿವಾದ ಶುರುವಾಗಿತ್ತು.

ಕೆಎಸ್‌ಆರ್‌ಟಿಸಿ ಮೊದಲು ಪಡೆದವರು ಯಾರು?

1948 ರಲ್ಲಿ ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ (MGRTD), ಕರ್ನಾಟಕದಲ್ಲಿ ಪ್ರಾರಂಭವಾಯಿತು, 1973 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಾಗಿ ಬದಲಾಯಿಸಲಾಯಿತು. ತಿರುವಾಂಕೂರ್ ರಾಜ್ಯ ಸಾರಿಗೆ ಇಲಾಖೆಯನ್ನು 1965ರ ಏಪ್ರಿಲ್ 1ರಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವಾಗಿ ಮರುಸ್ಥಾಪಿಸಲಾಯಿತು.

ಕೇರಳವು ಮೊದಲು ಕೆಎಸ್‌ಆರ್‌ಟಿಸಿ ಎಂಬ ಸಂಕ್ಷಿಪ್ತ ರೂಪವನ್ನು ಬಳಸಲು ಪ್ರಾರಂಭಿಸಿದರೂ, ಕರ್ನಾಟಕವೇ ಮೊದಲು ಅದನ್ನು ನೋಂದಾಯಿಸಿತು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಕರ್ನಾಟಕ ರಸ್ತೆ ಸಾರಿಗೆ ನಿಗಮ 1.11.1973 ರ ಬಳಕೆದಾರರ ದಿನಾಂಕದೊಂದಿಗೆ ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಪಡೆದುಕೊಂಡಿದೆ. 'ಕೆಎಸ್‌ಆರ್‌ಟಿಸಿ' ಲೋಗೋ ಮತ್ತು 'ಗಂಡಭೇರುಂಡ ಲಾಂಛನ' ಬಳಕೆಗಾಗಿ ಕಾಪಿ ರೈಟ್ಸ್‌ನ ರಿಜಿಸ್ಟ್ರಾರ್‌ನಿಂದ ಹಕ್ಕುಸ್ವಾಮ್ಯವನ್ನು ಸಹ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕೇರಳ ಆರ್‌ಟಿಸಿ ಕೂಡ 2019 ರಲ್ಲಿ ನೋಂದಣಿಯನ್ನು ಪೂರ್ವ ಬಳಕೆಯನ್ನು ಪಡೆದುಕೊಂಡಿದೆ.

2014 ರಲ್ಲಿ, ಕರ್ನಾಟಕ ಎಸ್‌ಆರ್‌ಟಿಸಿಯು ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಅನ್ನು ಚೆನ್ನೈನಲ್ಲಿರುವ ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲು ಅರ್ಜಿಯನ್ನು ಸಲ್ಲಿಸಿತು. ನೋಂದಣಿ ಯಶಸ್ವಿಯಾದ ಬಳಿಕ ಟ್ರೇಡ್‌ಮಾರ್ಕ್ ಬಳಕೆ ಆಕ್ಷೇಪಿಸಿ ಕೇರಳ ಆರ್‌ಟಿಸಿಗೆ ನೋಟಿಸ್ ನೀಡಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ, ಕೇರಳ ಆರ್‌ಟಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್‌ನ ಮಧ್ಯಸ್ಥಿಕೆಯನ್ನು ಕೋರಿತು ಮತ್ತು "ಮೊದಲ ಬಳಕೆದಾರ" ನಿಯಮಕ್ಕೆ ಸಂಬಂಧಿಸಿದ ಟ್ರೇಡ್ ಮಾರ್ಕ್ ಆಕ್ಟ್‌ನ ಸೆಕ್ಷನ್ 34 ಅನ್ನು ಅನ್ವಯಿಸುವ ಮೂಲಕ ಕೇರಳ ವಿಜಯಶಾಲಿಯಾಯಿತು.

ಮಾಲೀಕನ ಬಳಕೆ ಅಥವಾ ನೋಂದಣಿ ದಿನಾಂಕದ ಮೊದಲು ಎರಡನೆಯವರು ಬಳಕೆಯನ್ನು ಪ್ರಾರಂಭಿಸಿದರೆ ಟ್ರೇಡ್‌ಮಾರ್ಕ್ ಮಾಲೀಕರು ಒಂದೇ ರೀತಿಯ ಅಥವಾ ಅಂತಹುದೇ ಮಾರ್ಕ್ ಅನ್ನು ಬಳಸುವುದನ್ನು ಮತ್ತೊಂದು ಪಕ್ಷವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಈ ವಿಭಾಗವು ಷರತ್ತು ವಿಧಿಸುತ್ತದೆ. 1965 ರಲ್ಲಿ ಕೇರಳ ಆರ್ ಟಿಸಿ ಪ್ರಾರಂಭವಾಗಿ, ಅದು ಆ ಟ್ರೇಡ್‌ಮಾರ್ಕ್ ಅನ್ನು ಬಳಸುವ ಹಕ್ಕನ್ನು ಸ್ಥಾಪಿಸಿತು.

ಕೇರಳ ಆರ್‌ಟಿಸಿ ಹಳೆಯ ಬಸ್‌ಗಳು, ಬಸ್ ಡಿಪೋಗಳು ಮತ್ತು ಸ್ಟ್ಯಾಂಡ್‌ಗಳು, ಲಿಖಿತ ದಾಖಲೆಗಳು, ವರದಿಗಳು ಮತ್ತು ಹಳೆಯ ಮಲಯಾಳಂ ಚಲನಚಿತ್ರಗಳ ದೃಶ್ಯಗಳನ್ನು ಚಿತ್ರಿಸುವ ಛಾಯಾಚಿತ್ರಗಳ ರೂಪದಲ್ಲಿ ಸಾಕ್ಷಿಗಳನ್ನಾಗಿ ನೀಡಿತ್ತು.

ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?

ಇತ್ತೀಚೆಗೆ ಬಿಡುಗಡೆಯಾದ ಕರ್ನಾಟಕ ಎಸ್‌ಆರ್‌ಟಿಸಿ, ಕೇರಳ ಎಸ್‌ಆರ್‌ಟಿಸಿ ಸಂಕ್ಷೇಪಣದ "ವಿಶೇಷ" ಬಳಕೆಗಾಗಿ ಕೇರಳ ಎಸ್‌ಆರ್‌ಟಿಸಿಯ ಹಕ್ಕನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯಲ್ಲಿ (IPAB) 'ಕೆಎಸ್‌ಆರ್‌ಟಿಸಿ' ಬಳಕೆಗಾಗಿ ನಕಲು ಹಕ್ಕುಗಳ ರಿಜಿಸ್ಟ್ರಾರ್‌ನಿಂದ ಹಕ್ಕುಸ್ವಾಮ್ಯವನ್ನು ಪಡೆಯಲು ಕರ್ನಾಟಕಕ್ಕೆ ಸವಾಲು ಹಾಕಿತ್ತು.

ಇದಕ್ಕೆ ಉತ್ತರವಾಗಿ, ಕರ್ನಾಟಕ ಎಸ್‌ಆರ್‌ಟಿಸಿಯು 42 ವರ್ಷಗಳಿಂದ ಕರ್ನಾಟಕ ಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ಬಳಕೆಯ ಬಗ್ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ತಿಳಿದಿದೆ ಮತ್ತು ಆದ್ದರಿಂದ, ನಂತರದ ಟ್ರೇಡ್ ಮಾರ್ಕ್‌ನ ನೋಂದಣಿಯ ಘೋಷಣೆಗೆ ಅರ್ಜಿ ಸಲ್ಲಿಸಲು ಅವರು ಅರ್ಹರಲ್ಲ ವಾದಿಸಿತ್ತು.

ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ ನಂತರ ಐಪಿಎಬಿ ಮುಂದೆ ಬಾಕಿಯಿದ್ದ ವಿಷಯಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.

ಈ ವಿಷಯವನ್ನು ಡಿಸೆಂಬರ್ 12 ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಕೇರಳ ಎಸ್‌ಆರ್‌ಟಿಸಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕರ್ನಾಟಕ ಎಸ್‌ಆರ್‌ಟಿಸಿಗೆ ಭವಿಷ್ಯದಲ್ಲಿ 'ಕೆಎಸ್‌ಆರ್‌ಟಿಸಿ' ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿಲ್ಲ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಇಡೀ ದೇಶದಲ್ಲೇ ಅತ್ಯುತ್ತ ಸರ್ಕಾರಿ ಸಾರಿಗೆ ಸಂಸ್ಥೆ ಎನ್ನುವ ಖ್ಯಾತಿ ಹೊಂದಿದೆ. ಬಸ್‌ಗಳ ಗುಣಮಟ್ಟ, ಸೇವೆ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಉತ್ತಮವಾಗಿದೆ. ಬೆಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಕಚೇರಿ ಹೊಂದಿದ್ದು, 82 ಡಿಪೋಗಳು, ಎರಡು ಪ್ರಾದೇಶಿಕ ಕಾರ್ಯಾಗಾರಗಳು, ಒಂದು ಕೇಂದ್ರೀಯ ತರಬೇತಿ ಸಂಸ್ಥೆ, ನಾಲ್ಕು ಪ್ರಾದೇಶಿಕ ತರಬೇತಿ ಸಂಸ್ಥೆಗಳು, ಒಂದು ಪ್ರಿಂಟಿಂಗ್ ಪ್ರೆಸ್ ಮತ್ತು ಒಂದು ಆಸ್ಪತ್ರೆಯನ್ನು ಹೊಂದಿದೆ.

ಸುಮಾರು 34,904 ಉದ್ಯೋಗಿಗಳನ್ನು ಹೊಂದಿದ್ದು, ಇದು 8113 ವಾಹನಗಳನ್ನು ಹೊಂದಿದೆ. ಪ್ರತಿದಿನ ಸರಾಸರಿ 23.23 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮೂಲಕ ₹961.12 ಲಕ್ಷ ಸಂಚಾರ ಆದಾಯವನ್ನು ಗಳಿಸುತ್ತದೆ.

KSRTC secures legal ownership of its trademarks, including the abbreviation, ending a decades-long dispute with Kerala. Karnataka and Kerala SRTCs can now use 'KSRTC' without legal constraints.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+