• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಯಡಿಯೂರಪ್ಪ (ಆದರೆ) ಮುಂದಿರುವ 5 ಪ್ರಮುಖ ಸವಾಲುಗಳು

|

ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ವಿಶ್ವಾಸ ಮತ ಸಾಬೀತು ಮಾಡಲಾಗದೆ ಪತನ ಕಂಡಿದೆ. ಇನ್ನೇನಿದ್ದರೂ ಬಿಜೆಪಿ ಸರಕಾರ ರಚಿಸಬಹುದು ಹಾಗೂ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆ. ಹೀಗಿರುವಾಗಲೇ ಶುಕ್ರವಾರ ಸಂಜೆ ವೇಳೆಗೆ ಪ್ರಮಾಣವಚನಕ್ಕೆ ಸಮಯ ಗೊತ್ತುಮಾಡಿಕೊಂಡಿದ್ದಾರೆ ಬಿ. ಎಸ್. ಯಡಿಯೂರಪ್ಪ.

ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದ ಬಿಎಸ್‌ವೈ ಕರ್ನಾಟಕ 26ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ಅವಿಗೆ ಎದುರಾಗುವ ಸವಾಲುಗಳೇನು? ಇಲ್ಲಿದೆ ಒಂದು ವಿಶ್ಲೇಷಣೆ.

ರಚನೆಯಲ್ಲೇ ಸವಾಲು:

ನೂರಾ ಐದು ಪ್ಲಸ್ ಇಬ್ಬರು ಪಕ್ಷೇತರರು ಸೇರಿ ಬಿಜೆಪಿಗೆ ನೂರಾ ಏಳು ಶಾಸಕರ ಬಲವಿದೆ. ಇನ್ನು ಕಾಂಗ್ರೆಸ್- ಜೆಡಿಎಸ್ ನ ತೊರೆದಿರುವವರ ಪೈಕಿ ಎಷ್ಟು ಮಂದಿ ಬಿಜೆಪಿಗೆ ಸೇರುತ್ತಾರೋ ಗೊತ್ತಿಲ್ಲ. ಹಾಗೊಂದು ವೇಳೆ ಸೇರಿದರೆ ಸಂಪುಟ ರಚನೆ ಹಾಗೂ ನಿಗಮ- ಮಂಡಳಿಗಳ ನೇಮಕದಿಂದಲೇ ಸವಾಲು ಶುರು ಆಗುತ್ತದೆ.

ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?

ಎಷ್ಟು ಮಂದಿಯನ್ನು ಉಪ ಮುಖ್ಯಮಂತ್ರಿ ಮಾಡ್ತೀರಿ? ಯಾರ್ಯಾರಿಗೆ ಪ್ರಮುಖ ಖಾತೆಗಳು? ಬೆಂಗಳೂರು ಉಸ್ತುವಾರಿ ಯಾರ ಹೆಗಲಿಗೆ ಏರುತ್ತದೆ? ಕಾಂಗ್ರೆಸ್- ಜೆಡಿಎಸ್ ಸರಕಾರ ಬೀಳಲು ಕಾರಣರಾದ ಅತೃಪ್ತ ಶಾಸಕರಿಗೆ ಬಿಜೆಪಿಯಿಂದ ಏನು ದೊರೆಯಬಹುದು ಎಂಬ ಪ್ರಶ್ನೆಗಳು ಶುರು ಆಗುತ್ತವೆ. ಸರಿ, ಇವೆಲ್ಲವನ್ನೂ ದಾಟಿ ಆಡಳಿತದ ವಿಚಾರಕ್ಕೆ ಬಿಜೆಪಿ ತಲುಪಿದರೆ ಮತ್ತೂ ಸವಾಲುಗಳೇ.

1 ಲಕ್ಷ ರುಪಾಯಿ ತನಕದ ರೈತರ ಬೆಳೆ ಸಾಲ ಮನ್ನಾ

1 ಲಕ್ಷ ರುಪಾಯಿ ತನಕದ ರೈತರ ಬೆಳೆ ಸಾಲ ಮನ್ನಾ

ಸದ್ಯಕ್ಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ? ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿಯು 1.5 ಲಕ್ಷ ಕೋಟಿ ರುಪಾಯಿಯನ್ನು ನೀರಾವರಿಗೆ ಮುಂದಿನ ಐದು ವರ್ಷದಲ್ಲಿ ಮೀಸಲು ಇಡುವುದಾಗಿ ಹೇಳಿತ್ತು. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಾಗೂ ಕೋ ಆಪರೇಟಿವ್ ಗಳಲ್ಲಿ ತೆಗೆದುಕೊಂಡಿರುವ 1 ಲಕ್ಷ ರುಪಾಯಿ ತನಕದ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು.

"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"

25,000 ರುಪಾಯಿ ಹಾಗೂ 3 ಗ್ರಾಮ್ ಚಿನ್ನ

25,000 ರುಪಾಯಿ ಹಾಗೂ 3 ಗ್ರಾಮ್ ಚಿನ್ನ

ಗೋ ಸೇವಾ ಆಯೋಗದ ಸ್ಥಾಪನೆ ಹಾಗೂ ಬಡತನ ರೇಖೆಗಿಂತ ಕೆಳಗೆ ಇರುವವರಿಗೆ (ಬಿಪಿಎಲ್) ಮದುವೆ ವೇಳೆ 25,000 ರುಪಾಯಿ ಹಾಗೂ 3 ಗ್ರಾಮ್ ಚಿನ್ನ ಮತ್ತು ಅನ್ನಪೂರ್ಣಾ ಕ್ಯಾಂಟೀನ್ ಆರಂಭದ ಭರವಸೆ ನೀಡಿದೆ. ಇದರ ಜತೆಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಲಾಗಿದೆ.

ರಾಜಕೀಯದ ಪಗಡೆಯಾಟದಲ್ಲಿ ಬಿಎಸ್ ವೈ ಗೆದ್ದಿದ್ದು ಯಾಕೆ?ರಾಜಕೀಯದ ಪಗಡೆಯಾಟದಲ್ಲಿ ಬಿಎಸ್ ವೈ ಗೆದ್ದಿದ್ದು ಯಾಕೆ?

ಪ್ರತಿ ಕಾಲೇಜು ವಿದ್ಯಾರ್ಥಿಗೆ ಲ್ಯಾಪ್ ಟಾಪ್

ಪ್ರತಿ ಕಾಲೇಜು ವಿದ್ಯಾರ್ಥಿಗೆ ಲ್ಯಾಪ್ ಟಾಪ್

ಇನ್ನು ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ ಲ್ಯಾಪ್ ಟಾಪ್, ಇಪ್ಪತ್ತು ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ ಹತ್ತು ಸಾವಿರ ಆರ್ಥಿಕ ನೆರವು, ರೈತರಿಗೆ ಬೆಳೆಯ ಒಂದೂವರೆ ಪಟ್ಟು ಆದಾಯ, ಕೃಷಿ ಪಂಪ್ ಸೆಟ್ ಗೆ ದಿನದ ಹತ್ತು ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ, ರೈತರ ಮಕ್ಕಳಿಗೆ ನೂರು ಕೋಟಿ ಮೊತ್ತದಲ್ಲಿ ರೈತ ಬಂಧು ವಿದ್ಯಾರ್ಥಿ ವೇತನ ಹಾಗೂ ಪ್ರತಿ ವರ್ಷ ಸಾವಿರ ರೈತರಿಗೆ ಇಸ್ರೇಲ್, ಚೀನಾ ಭೇಟಿಗೆ ವ್ಯವಸ್ಥೆ ಮಾಡುವುದಾಗಿ ಹೇಳಲಾಗಿದೆ.

ಎಲ್ಲಿಂದ ಸಂಪನ್ಮೂಲ ಕ್ರೋಡೀಕರಣ ಆಗುತ್ತದೆ?

ಎಲ್ಲಿಂದ ಸಂಪನ್ಮೂಲ ಕ್ರೋಡೀಕರಣ ಆಗುತ್ತದೆ?

ಈಗಾಗಲೇ ಕುಮಾರಸ್ವಾಮಿ ಸರಕಾರ ಜಾರಿಗೆ ತಂದಿರುವ ಬಡವರ ಬಂಧು ಯೋಜನೆ, ಸಿದ್ದರಾಮಯ್ಯ ಆರಂಭಿಸಿರುವ ಇಂದಿರಾ ಕ್ಯಾಂಟೀನ್, ಅನ್ನ ಭಾಗ್ಯ ಸೇರಿದಂತೆ ಸರಕಾರಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಾದಂಥವು ಇವೆ. ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು, ಪ್ರಣಾಳಿಕೆಯಲ್ಲಿ ನೀಡಿದಂತೆ ಮಾತು ಉಳಿಸಿಕೊಳ್ಳಲು ಎಲ್ಲಿಂದ ಸಂಪನ್ಮೂಲ ಕ್ರೋಡೀಕರಣ ಆಗುತ್ತದೆ?

English summary
After JDS and Congress government coalition collapsed in Karnataka on Tuesday, question raised that, How and where resources created by Yeddyurappa, if he comes to power?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X