House Rent: ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್
House Rent: ಮನೆ ಬಾಡಿಗೆ ಕುರಿತು ಸರ್ಕಾರ ಹೊಸ ನಿಯಮಗನ್ನು ಜಾರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯ ಸರ್ಕಾರ ಬಾಡಿಗೆ ಕಾಯ್ದೆಗೆ ಮಹತ್ವದ ತಿದ್ದುಪಡಿ ಮುಂದಾಗಿದೆ. ಹಾಗಾದ್ರೆ ಅದೇನು ಹಾಗೂ ಯಾರ ಮೇಲೆ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇನ್ನು ಹೊಸ ನಿಯಮದಂತೆ ಬಾಡಿಗೆದಾರರಿಗೆ ಅಷ್ಟೇ ಅಲ್ಲದೆ, ಮನೆ ಮಾಲೀಕರಿಗೂ ಅನ್ವಯ ಆಗಲಿದೆ. ಒಂದು ವೇಳೆ ಈ ನಿಯಮ ಉಲ್ಲಂಘನೆಯಾದ್ರೆ, ಬೃಹತ್ ಮೊತ್ತದ ದಂಡ ಬೀಳಲಿದೆ. ಜೊತೆಗ ದುಬಾರಿ ಬಾಡಿಗೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು, ಮಾರುಕಟ್ಟೆಗೆ ಅನುಗುಣವಾಗಿ ಬಾಡಿಗೆ ದರ ನಿಗದಿ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಬಾಡಿಗೆ ಮನೆಗಳ ನಿಯಮಗಳನ್ನ ಬದಲಾಯಿಸಲು ಸರ್ಕಾರ ಮುಂದಾಗಿದ್ದು, ಕರ್ನಾಟಕ ಬಾಡಿಗೆ ಕಾಯ್ದೆ 1999ಕ್ಕೆ ತಿದ್ದುಪಡಿ ತರಲು ನಿರ್ಧರಿಸಿದೆ. ಈ ತಿದ್ದುಪಡಿಯಿಂದ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಹಾಗೂ ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯ ಆಗುತ್ತವೆ.
ಅದರಲ್ಲೂ ಮುಖ್ಯವಾಗಿ ಬಾಡಿಗೆ ಮನೆಯನ್ನ ಮಾಲೀಕರ ಅನುಮತಿ ಇಲ್ಲದೆ, ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನ 5,000-50,000 ರೂಪಾಯಿಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಡಿದೆ. ಇದು ಶೇಕಡಾ 90ರಷ್ಟು ಹೆಚ್ಚಳ ಆದಂತಾಗಲಿದೆ.
ದಂಡ ಕೇವಲ ಬಾಡಿಗೆದಾರರಿಗೆ ಅಷ್ಟೇ ಅಲ್ಲದೆ, ಮನೆ ಮಾಲೀಕರಿಗೂ ದಂಡ ಬೀಳಲಿದೆ. ಬಾಡಿಗೆ ಮನೆಯನ್ನ ಬೇರೆಯವರಿಗೆ ಬಾಡಿಗೆಗೆ ಕೊಡಲು ಅವಕಾಶ ಮಾಡಿಕೊಟ್ಟರೆ, ಅಂತಹ ಮನೆ ಮಾಲೀಕರಿಗೆ 3,000-30,000 ರೂಪಾಯಿಗೆ ದಂಡ ಹೆಚ್ಚಳ ಆಗಲಿದೆ. ಜೈಲು ಶಿಕ್ಷೆ ಬದಲು ದಂಡದ ಮೊತ್ತ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಈ ನಿರ್ಧಾರ ಏಕೆ?: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರ ನೇತೃತ್ವದ ಸಮಿತಿಯು ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಇದನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗುವುದು ಅಂತಾ ಕಾನೂನು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಜಗಳಗಳು ಸಹ ಹೆಚ್ಚಳ ಆಗುತ್ತಿರುವ ಹಿನ್ನೆಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಅನಧಿಕೃತವಾಗಿ ಕಾರ್ಯನಿರ್ವಹಿಸುವ ಮಧ್ಯವರ್ತಿಗಳಿಗೂ ಸರ್ಕಾರ ಬಿಸಿ ಮುಟ್ಟಿಸಲಿದೆ. ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ನೋಂದಣಿ ಮಾಡಿಸದ ಮಧ್ಯವರ್ತಿಗಳಿಗೆ ದಿನಕ್ಕೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಮೊದಲು ಇದು 2,000 ರೂಪಾಯಿ ಇತ್ತು. ಮತ್ತೆ ಮತ್ತೆ ತಪ್ಪು ಮಾಡಿದ್ರೆ, ದಿನಕ್ಕೆ 20,000 ರೂಪಾಯಿ ಹೆಚ್ಚುವರಿಯಾಗಿ ದಂಡ ವಿಧಿಸಲಾಗುತ್ತದೆ.
ಬಾಡಿಗೆ ಒಪ್ಪಂದಗಳನ್ನ ಆನ್‌ಲೈನ್‌ನಲ್ಲಿ ನೋಂದಾಣಿ ಮಾಡಿಕೊಳ್ಳಲು ಸರ್ಕಾರವು ಪೋರ್ಟಲ್ ಪ್ರರಂಭ ಮಾಡಿದೆ. ಇದರಿಂದ ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನ ಕಡಿಮೆ ಮಾಡಬಹುದು. ಅಲ್ಲದೆ, ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಬಹುದು. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅನೌಪಚಾರಿಕ ಒಪ್ಪಂದಗಳು ನಡೆಯುತ್ತವೆ. ಇವುಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ದರಗಳನ್ನ ನಿಗದಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಮನೆ ಮಾಲೀಕರಿಗೆ ಸರಿಯಾದ ಬಾಡಿಗೆ ಸಿಗುತ್ತದೆ. ಬಾಡಿಗೆದಾರರನ್ನ ರಕ್ಷಣೆ ಮಾಡಲು ದಿಧೀರ್ ಬಾಡಿಗೆ ಏರಿಕೆ ಮಾಡುವುದನ್ನ ತಡೆಯಲು ಸಾಧ್ಯ ಆಗುತ್ತದೆ.
ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು, ಸೂಕ್ತ ನೋಟಿಸ್ ನೀಡಬೇಕು. ಇದರಿಂದ ಬಾಡಿಗೆದಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬಹುದು. ಕಡಿಮೆ ಬಾಡಿಗೆಗೆ ಮನೆ ನೀಡುವವರಿಗೆ ಸರ್ಕಾರ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡಲು ಚಿಂತಿಸುತ್ತಿದೆ. ಇದರಿಂದ ಕಡಿಮೆ ಬೆಲೆ ಮನೆಗಳು ಲಭ್ಯ ಆಗುವಂತೆ ನೋಡಿಕೊಳ್ಳಬಹುದು.












Click it and Unblock the Notifications