Hosakote Assembly Constituencey: ಈ ಸಲವೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ಭಾರಿ ಕಾಳಗ- ವರದಿ, ವಿಶ್ಲೇಷಣೆ
ಬಿಜೆಪಿಯಿಂದ ಸಿಡಿದೆದ್ದ ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡ ಈ ಭಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ಬಹುತೇಕ ಅಂತಿಮವೂ ಆಗಿದೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್ ಇಲ್ಲವೇ ಎಂಟಿಬಿ ದರ್ಶನ್ ಕಣಕ್ಕಿಳಿಯಲಿದ್ದಾರೆ. ವರದಿ, ವಿಶ್ಲೇಷಣೆ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 21: ಕರ್ನಾಟಕ ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ತಾಲೂಕು ಸಹ ಆಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರವು ಒಂದು. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಧಾನಸಭಾ ಕ್ಷೇತ್ರವಾಗಿದೆ. ಈ ತಾಲೂಕು ಪ್ರದೇಶ ಭೌಗೋಳಿಕವಾಗಿ 500 ಕಿಲೋ ಮೀಟರ್‌ಗೂ ಹೆಚ್ಚಿದ್ದು, ಸುರಕ್ಷಿತ ಕೋಟೆಯನ್ನು ಹೊಂದಿತ್ತು.
ಸುಗಟುರು ಪಾಳೆಗಾರರು ವಂಶಸ್ಥರ ಆಳ್ವಿಕೆ ವೇಳೆ ಅವರ ಮೂಲ ಪುರುಷನಾದ ಅಂದಿನ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದ ದೇವಪ್ಪ ಗೌಡನ ನಂತರ ಆತನ ಮಗ ಹಾಗೂ ಹೊಸಕೋಟೆಯ ಮೂಲಪುರುಷನು ಅದ ತಮ್ಮೆಗೌಡನ ಅಧಿಕಾರದ ವೇಳೆ ಹೊಸಕೋಟೆಯಲ್ಲಿ ಮಣ್ಣಿನ ಕೋಟೆ ನಿರ್ಮಿಸಲಾಗಿತ್ತು. ಶತ್ರುಗಳಿಂದ ಈ ಕೋಟೆಯಡಿ ರಕ್ಷಣೆ ಪಡೆಯಲಾಗುತ್ತಿತ್ತು ಎಂಬ ಪ್ರತೀತಿ ಇದೆ. ಇದೆ ಮುಂದೆ ಹೊಸಕೋಟೆಯಾಗಿ ಬದಲಾಯಿತು ಎಂದು ಹೇಳುತ್ತಾರೆ.
ಒಟ್ಟು ಸುಮಾರು 75 ವರ್ಷಗಳ ಹಿಂದೆಯೆ ಹೊಸಕೋಟೆ ಉದಯವಾಗಿದೆ. ಮೊದಲು ಮೈಸೂರು ಸಂಸ್ಥಾನಕ್ಕೆ ಒಳಪಟ್ಟಿದ್ದ ಹೊಸಕೋಟೆಯು ಕೆಸಿ ರೆಡ್ಡಿ ಅವರ ಆಡಳಿತದಲ್ಲಿ ಕರ್ನಾಟಕಕ್ಕೆ ಸೇರ್ಪಡೆಯಾಯಿತು. ಇಲ್ಲಿ ವಿಜ್ಞಾನ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST), ಪ್ರಮುಖ ಸರ್ಕಾರಿ ಕಾಲೇಜು, ವೈದ್ಯಕೀಯ ಕಾಲೇಜು, ವಿವೇಕಾನಂದ ವಿದ್ಯಾಕೇಂದ್ರ ಸೇರಿದಂತೆ ಶಿಕ್ಷಣ ಸಂಸ್ಥೆಗಳು ಇವೆ.
ಒಂದು ತಾಲೂಕಿಗೆ ಬೇಕಾದ ಅತ್ಯಗತ್ಯ ಸೌಲಭ್ಯಗಳು ಹೊಸಕೋಟೆಯಲ್ಲಿವೆ. ಸಾರಿಗೆ ವ್ಯವಸ್ಥೆ, ಶಿಕ್ಷಣ, ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಸುಭೀಕ್ಷ ಕ್ಷೇತ್ರ ಇದಾಗಿದೆ. ಈ ಹೊಸಕೋಟೆ ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿಸಿ ಬಿಜೆಪಿ ಅಧಿಕಾರ ಪಡೆದಿತ್ತು. 2018ರ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಇಲ್ಲಿ ವಿಜಯ ಸಾಧಿಸಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸ
ಈ ಕ್ಷೇತ್ರದಲ್ಲಿ 1957ರಲ್ಲಿ ಮೊದಲ ಭಾರಿಗೆ ಕಾಂಗ್ರೆಸ್ ಗೆದ್ದಿತ್ತು. ನಂತರ ಒಂದೆರಡು ಭಾರಿ ವಿಜಯ ಸಾಧಿಸಿತಾದರೂ ಪೂರ್ಣ ಹಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ವಿಫಲವಾಯಿತು. ನಂತರ ಒಮ್ಮೆ ಜನತಾ ಪಕ್ಷ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಗಳು ಗೆಲುತ್ತಿದ್ದರು. ಬಳಿಕ 1999 ಬಿಜೆಪಿ ಮೊದಲ ಬಾರಿ ಗೆಲುವಿನ ನಗೆ ಬೀರಿತು. ಅಲ್ಲಿಂದ ಹಂತ ಹಂತವಾಗಿ ಹೊಸಕೋಟೆಯಲ್ಲಿ ಕಮಲ ಅರಳುತ್ತಾ ಬಂತು. ಆದರೆ 2013 ಹಾಗೂ 2018ರಲ್ಲಿ ಕೇಸರಿ ಪಡೆಗೆ ಸೋಲಾಯಿತು. 2018ರ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಂತಿದ್ದ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿ ವರ್ಚಸ್ಸು ಕುಂದಿದ್ದು ಹೇಗೆ?
ಹೊಸಕೋಟೆಯಲ್ಲಿ ಹಿಂದಿನಿಂದ ಕಾಂಗ್ರೆಸ್, ಇತ್ತೀಚೆಗೆ ಜೆಪಿ ಪ್ರಭಾವ ಹೊಂದಿದೆ. ಹೊಸಕೋಟೆಯಲ್ಲಿ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದ ಎಂಟಿಬಿ ನಾಗರಾಜ್‌ಗೆ ಬಿಜೆಪಿ ಶರತ್ ಬಚ್ಚೇಗೌಡ ಭಾರಿ ಪೈಪೋಟಿ ನೀಡಿದ್ದರು. ಅತ್ಯಂತ ಕಡಿಮೆ ಅಂತರದಲ್ಲಿ ಅವರು ಸೋತರು. ಬಳಿಕ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಯಾದರು. ಬಳಿಕವೇ ಗೊಂದಲ ಸೃಷ್ಟಿಯಾಯಿತು. ಬಿಜೆಪಿಯ ಶರತ್ ಬಚ್ಚೇಗೌಡ ಅವರಿಗೆ ತಲೆನೋವಾಯಿತು. ಹೀಗಾಗಿ ಬಂಡಾಯವೆದ್ದ ಶರತ್ ಬಚ್ಚೆಗೌಡ್ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಿಂತ ಎಂಟಿಬಿ ನಾಗರಾಜ್‌ರನ್ನು ಸೋಲಿಸಿದರು. ಆಗ ಬಿಜೆಪಿಗೆ ಮುಖಭಂಗವಾಗಿತ್ತು.

ಈ ಭಾರಿಯು ಸದ್ದು ಮಾಡಲಿರುವ ಹೋಸಕೋಟೆ ಕ್ಷೇತ್ರ
ಹೊಸಕೋಟೆಯು 2023 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸದ್ದು ಮಾಡಲಿದೆ. ಕಾಂಗ್ರೆಸ್ ಕೋಟೆಯನ್ನು ಬಿಜೆಪಿ ತೆಕ್ಕೆಗೆ ತರಲು ಶ್ರಮಿಸಿದ್ದ ಎಂಟಿಬಿ ನಾಗರಾಜ್‌ಗೆ ಕಮಲ ಪಡೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಗುರುತಿಸಿಕೊಂಡು ಶರತ್ ಬಚ್ಚೇಗೌಡ ಟಕ್ಕರ್ ಕೊಟ್ಟಿದ್ದರು. ಎಂಟಿಬಿ ಉಪಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಶರತ್ ಸದ್ಯ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ. ಶರತ್ ಬಂಡಾಯದ ಬೆಂಕಿ ಸಾಕಷ್ಟು ಬೆಂಬಲಿಗರು ತುಪ್ಪ ಸುರಿದಿದ್ದರು. ಶಾಸಕರ ಅನರ್ಹತೆ, ಬಂಡಾಯ, ಪಕ್ಷಾಂತರ ಎಲ್ಲದ್ದರಿಂದ ಹೊಸಕೋಟೆ ಭಾರಿ ಸದ್ದು ಮಾಡಿತ್ತು. ಈ ಭಾರಿಯು ಅದೇ ರೀತಿಯಲ್ಲಿ ಚುನಾವಣೆಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.

ಹೊಸಕೋಟೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಆಕಾಂಕ್ಷಿಗಳು?
ಬಿಜೆಪಿಯಿಂದ ಸಿಡಿದೆದ್ದ ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡ ಈ ಭಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ಬಹುತೇಕ ಅಂತಿಮವೂ ಆಗಿದೆ. ಇತ್ತ ಬಿಜೆಪಿಯಿಂದ ಈ ಬಾರಿ ಎಂಟಿಬಿ ನಾಗರಾಜ್ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಎಂಟಿಬಿ ಸ್ಪರ್ಧಿಸದಿದ್ದರೆ, ಅವರ ಪುತ್ರ ಎಂಟಿಬಿ ದರ್ಶನ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನೂ ಸಮಾಜ ಸೇವಕ ದೊಡ್ಡಹುಲ್ಲೂರು ಕಿರಣ್ ಗೌಡ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಟಿಕೆಟ್ ಬಗ್ಗೆ ಯಾವ ಮಾಹಿತಿಯನ್ನು ಪಕ್ಷ ಬಹಿರಂಗಪಡಿಸಿಲ್ಲ.
ಮತದಾರರ ಸಂಖ್ಯೆ
ಒಟ್ಟು ಮತದಾರರು- 2,21,770
ಒಕ್ಕಲಿಗರು- 45,826
ಲಿಂಗಾಯತ - 18,442
ಕುರುಬರು30,132
ಎಸ್‌ಸಿ-ಎಸ್‌ಟಿ - 58,883
ಮುಸ್ಲಿಂ - 45,642












Click it and Unblock the Notifications