ಕಾವೇರಿ ಕಿಚ್ಚು; ಬಂಗಾರಪ್ಪನವರಂತೆ ಸುಗ್ರೀವಾಜ್ಜೆ ಹೊರಡಿಸುತ್ತಾ ಸರ್ಕಾರ: ಪರಮೇಶ್ವರ್‌ ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್‌ 22: ರಾಜ್ಯದಲ್ಲಿ ಈ ಬಾರೀ ಮಳೆ ಅಭಾವ ಉಂಟಾಗಿದ್ದು, ಸುಪ್ರೀಂ ಕೋರ್ಟ್‌ ಇನ್ನೂ 15 ದಿನಗಳ ಕಾಲ ಪ್ರತಿನಿತ್ಯ 5000 ಕ್ಯೂಸಕ್‌ ನೀರು ಬಿಡುವಂತೆ ಆದೇಶ ನೀಡಿದ್ದು, ಕಾವೇರಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ರೀತಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುತ್ತಾ ಎಂಬ ಚರ್ಚೆಗಳ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾವೇರಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲುವ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಬಹುದು ಎಂದುಕೊಂಡಿದ್ದೇನೆ.
ಬಂಗಾರಪ್ಪವನರಂತೆ ಸುಗ್ರೀವಾಜ್ಜೆ ಹೊರಡಿಸುತ್ತಾ ಎಂಬುದನ್ನ ನೋಡೋಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ದೆಹಲಿಗೆ ಹೋಗಿ ಬಂದಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಮಾಹಿತಿ ನೀಡುತ್ತಾರೆ.

Home Minister Dr G Parameshwar Reaction On Cauvery Water Dispute

ಕೆಆರ್ ಎಸ್ ನಲ್ಲಿ 20.56 ನೀರು ಇದೆ. ಒಳ ಹರಿವು 5 ಸಾವಿರ ಕ್ಯೂಸೆಕ್ ಇದೆ, ನೀರಿನ ಮಟ್ಟ ಹೆಚ್ಚುತ್ತಿಲ್ಲ. ನಮ್ಮಲ್ಲಿ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಲಾಗಿದೆ. ಆದರು ಸಹ ಸುಪ್ರೀಂಕೋರ್ಟ್ CWMA ಆದೇಶ ಪಾಲಿಸಿ ಎಂದು ಹೇಳಿದೆ. ಈ ಬಗ್ಗೆ ಸಂಪುಟದಲ್ಲಿ ತೀರ್ಮಾನ ಮಾಡಬಹುದು ಎಂದು ಹೇಳಿದ್ದಾರೆ.

ಮಂಡ್ಯ ಬಂದ್ ಗೆ ಬಿಜೆಪಿ ಬೆಂಬಲ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ, ರಾಜಕೀಯ ಮಾಡಬಾರದು. ರಾಜಕೀಯ ಮಾಡಬಾರದ್ದು ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ಬಿಜೆಪಿ ಸಹ ವಿವಾದದಲ್ಲಿ ಭಾಗಿಗಳೇ ಅದರಿಂದ ಅವರಿಗೂ ಜವಾಬ್ದಾರಿ ಇದೆ. ಇದರಲ್ಲಿ ರಾಜಕೀಯ ಮಾಡೋದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ರಾಜಕೀಯ ಬೇರೆ ರೀತಿಯಲ್ಲಿ ಬಿಜೆಪಿಯವರು ಮಾಡಲಿ. ನಾವು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ, ಎಲ್ಲ ರೀತಿಯಲ್ಲಿಯೂ ಕ್ರಮ ತೆಗೆದುಕೊಂಡಿದ್ದೀವಿ. ಸರ್ವ ಪಕ್ಷ ಸಭೆಯಲ್ಲಿ ಎಲ್ಲ ವಿವರಣೆ ನೀಡಿದ್ದೇವೆ, ನೀರು ಬಿಡುವ ಮೊದಲು ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಅಮೇಲೆ ಎರಡನೇ ಸರ್ವ ಪಕ್ಷ ಸಭೆ ಕರೆದಿದ್ದು, ಎಲ್ಲ ಒಪ್ಪಿಕೊಂಡು ನಿಮ್ಮ ಜೊತೆಗೆ ಇರ್ತೀವಿ. ಸರ್ಕಾರ ಎನೇ ನಿರ್ಧಾರ ತೆಗೆದುಕೊಂಡರು ಸರ್ಕಾರದ ಜೊತೆ ಇರ್ತೀವಿ ಅಂತ ಹೇಳಿದ್ದಾರೆ ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ ಎಂದ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಡ್ಯದಲ್ಲಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಪ್ರತಿಭಟನೆ ಮಾಡುವುದು ಅವರ ಹಕ್ಕು. ಅದರ ಬಗ್ಗೆ ನಮ್ಮದು ತಕರಾರು ಎನು ಇಲ್ಲ, ನೀರು ಬಿಡಬಾರದು ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು. ಯಾವುದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದಾಗಲಿ, ಜನ ಸಾಮಾನ್ಯರಿಗೆ ತೊಂದರೆ ಮಾಡುವುದಾಗಲಿ, ಕಾನೂನು ಬಾಹಿರವಾಗಿ ಚಟುವಟಿಕೆಗಳು ಮಾಡಬಾರದು. ಒಂದು ವೇಳೆ ಆ ರೀತಿಯ ಘಟನೆಗಳು ಆದ ಸಂದರ್ಭದಲ್ಲಿ ತಡೆಯಲು ಪೊಲೀಸ್ ಸಿದ್ದರಾಗಿದ್ದಾರೆ

ಈಗಾಗಲೇ ನಾವು ಕೆ ಆರ್ ಎಸ್, ಮಂಡ್ಯ ಜಿಲ್ಲೆ, ಪ್ರತಿಭಟನೆ ನಡೆಯುವ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳು ಮಾಡಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಕಾನೂನು ಪ್ರಕಾರ ಎಚ್ಚರಿಕೆ ವಹಿಸುತ್ತೇವೆ. ಮಂಡ್ಯದಲ್ಲಿ ಈಗಾಗಲೇ ಆರ್ ಎಎಫ್ ನಿಯೋಜನೆ ಮಾಡಿದ್ದೇವೆ, ಪದ್ದತಿ ಪ್ರಕಾರ ನಿಯೋಜನೆ ಮಾಡಿದ್ದೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+