R Ashok: ಆರ್‌ ಅಶೋಕ್‌ ವಿರುದ್ಧ ನೂರಾರು ಕೋಟಿ ಭೂ ಅಕ್ರಮದ ಆರೋಪ

ಬೆಂಗಳೂರು ಅಕ್ಟೋಬರ್ 2: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮದ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮತ್ತು ಸಚಿವ ಹೆಚ್‌ಕೆ ಪಾಟೀಲ್‌ ಅವರು ಆರ್‌. ಅಶೋಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.

ಈಗ ಮುಡಾ ಹಗರಣದ ಬಗ್ಗೆ ಮಾತನಾಡುತ್ತಿರುವ ಆರ್‌ ಅಶೋಕ್ ಅವರ ಅಧಿಕಾರ ಅವಧಿಯಲ್ಲಿ ಏನಾಗಿತ್ತು ಎನ್ನುವ ಬಗ್ಗೆ ದಾಖಲೆಗಳನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ. ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ನಡೆದಿತ್ತು. ಅದು ಕಾಲ ನಂತರ ಹೇಗೆ ಮರೆಯಾಯಿತು ಅನ್ನೋ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಬಳಿಕ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ವಿವರಿಸಿದ್ದಾರೆ.

Home Minister Dr G Parameshwar Allegation against R Ashok

ಈ ಬಗ್ಗೆ ದಾಖಲೆಯನ್ನು ಹಂಚಿಕೊಂಡ ಜಿ ಪರಮೇಶ್ವರ್ ಹಗರಣ ಹೇಗೆ ನಡೆಯಿತು ಎನ್ನುವ ಬಗ್ಗೆ ವಿವರಿಸಿದರು. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೋಟಿಫಿಕೇಷನ್ ಹೊರಡಿಸಿತ್ತು. 26 ಫೆಬ್ರವರಿ 2003ರಲ್ಲಿ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟೊಫಿಕೇಚನ್‌ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ಅದಾದ ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್‌ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ.

ರಾಮಸ್ವಾಮಿಯಿಂದ 32 ಗುಂಟೆ ಖರೀದಿ ಮಾಡಿದರು. ಆದರೆ ರಾಮಸ್ವಾಮಿ ಮಾಲೀಕನೇ ಅಲ್ಲ. ಆ ಭೂಮಿ ಬಿಡಿಎ ಸ್ವಾಧೀನದಲ್ಲಿರುತ್ತೆ ಎಂದು ಆರೋಪ ಮಾಡಿದ್ದಾರೆ. 2009ರ ಅಕ್ಟೋಬರ್‌ 1ಕ್ಕೆ ಡಿನೋಟಿಫೈ ಮಾಡಿಕೊಡಿ ಅಂತಾ ರಾಮಸ್ವಾಮಿಯಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಅದಕ್ಕೆ ಅಶೋಕ್ ಹಾಗೂ ರಾಮಸ್ವಾಮಿ ಮಾಲೀಕರೇ ಅಲ್ಲ. ಆದರೂ ಅರ್ಜಿ ಸಲ್ಲಿಸುತ್ತಾರೆ. ಅಂದಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೂಡಲೇ ಮಂಡಿಸಿ ಅಂತ ಷರಾ ಬರೀತಾರೆ. ಎರಡೇ ತಿಂಗಳಲ್ಲೇ ಅಂದಿನ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಮಾಡಿಕೊಡ್ತಾರೆ.

ಬಳಿಕ ಈ ಬಗ್ಗೆ ವಿಚಾರಣೆಗೆ ನಿವೃತ್ತ ವಿಂಗ್ ಕಮಾಂಡರ್‌ ಜಿವಿ ಅತ್ರಿ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚಾರ ಕೋರ್ಟ್‌ಗೆ ಹೋಗುತ್ತೆ. ಆಗ ಅಶೋಕ್ ವಾಪಸ್ ಕೊಡುವ ತೀರ್ಮಾನ ತಗೋತಾರೆ. 26-08-2011 ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ಭೂಮಿ ಹಿಂತಿರುಗಿಸುತ್ತಾರೆ. ಓನರ್‌ಶಿಪ್ ಇಲ್ಲದೇ ಅಶೋಕ್ ಗಿಫ್ಟ್‌ ಬಿಡಿಎಗೆ ನೀಡಿದ್ದಾರೆ ಎಂದು ಹಳೆಯ ಪ್ರಕರಣವೊಂದನ್ನು ಬಯಲು ಮಾಡಿದರು.

Home Minister Dr G Parameshwar Allegation against R Ashok

ನಂತರ ಅತ್ರಿಯವರು ಹೈಕೋರ್ಟ್‌ ಅರ್ಜಿ ಹಾಕ್ತಾರೆ, ಕ್ರಿಮಿನಲ್ ಕೇಸ್ ಹಾಕಬೇಕು ಅನ್ನೊದು ಬೇಕಾಗಿಲ್ಲ ಅಂತಾ ಹೈಕೋರ್ಟ್‌ನಿಂದ ತೀರ್ಪು ಬರುತ್ತೆ. ವಾಪಸ್ ಕೊಟ್ಟುಬಿಟ್ಟರಲ್ಲ ಕೇಸ್ ಬೇಕಾಗಿಲ್ಲ ಅಂತಾ ಜಡ್ಜ್‌ಮೆಂಟ್ ಬರುತ್ತೆ. ಈಗ ಆರ್ ಅಶೋಕ್ ಮಾಡುತ್ತಿರುವ ಆರೋಪವೇನು? ಅವರು ಮಾಡಿದ್ದೇನೆ? ಕಬಳಿರೋದು, ಕಳ್ಳತನ ಮಾಡಿರೋದು ಅಂತಾ ಹೇಳಿದ್ರಿ ನಾವು ನಿಮಗೇನು ಹೇಳ್ಬೇಕು? ಅಂತ ಸಚಿವ ಪರಮೇಶ್ವರ್ ವಾಗ್ದಾಳಿ ಮಾಡಿದ್ದಾರೆ.

ಮುಡಾ ಹಗರಣದ ಬಗ್ಗೆ ಆರ್‌ ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪವಿದು- ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತನಾಡಿದ್ದಾರೆ. ಈಗ ಕಾಂಗ್ರೆಸ್ ನಾಯಕರು ಆರ್‌ ಅಶೋಕ್ ಅವರ ಅವಧಿಯಲ್ಲಾದ ಹಗರಣದ ಬಗ್ಗೆ ಪ್ರಸ್ತಾಪ ಮಾಡಿ ತಿರುಗೇಟು ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+