ಗೃಹರಕ್ಷಕ ದಳದ ಸಿಬ್ಬಂದಿ ವಿವಿಧ ಭತ್ಯೆಗಳು ಏರಿಕೆ
ಬೆಂಗಳೂರು, ಮಾರ್ಚ್ 03: ಕರ್ನಾಟಕ ಸರ್ಕಾರ ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಇಲಾಖೆಯ ಗೃಹರಕ್ಷಕ ಸ್ವಯಂ ಸೇವಕರ ಕರ್ತವ್ಯ/ ತರಬೇತಿ ಭತ್ಯೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಬಿ. ಕೆ. ಭುವನೇಂದ್ರ ಕುಮಾರ್ ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ (ಪೊಸಸೇ) ಆದೇಶವನ್ನು ಹೊರಡಿಸಿದ್ದಾರೆ. ಪೊಲೀಸ್‌ಮಹಾ ನಿರ್ದೇಶಕರು ಹಾಗೂ ಮಹಾ ಸಮಾದೇಷ್ಟರು, ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಇಲಾಖೆ ಇವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.
ದಿನಾಂಕ 11/06/2015ರ ಆದೇಶದಲ್ಲಿ ಗೃಹರಕ್ಷಕ ಸ್ವಯಂ ಸೇವಕರಿಗೆ ಭತ್ಯೆಯನ್ನು ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ರೂ. 300 ರಿಂದ ರೂ. 400ಕ್ಕೆ ಹಾಗೂ ಇತರೆ ಸ್ಥಳಗಳಲ್ಲಿ ರೂ. 250 ರಿಂದ 325ಕ್ಕೆ ಹೆಚ್ಚಿಸಿ ಮಂಜೂರಾತಿ ನೀಡಿ ಆದೇಶಿಸಲಾಗಿದೆ ಎಂದು ಹೇಳಿದೆ. ದಿನಾಂಕ 19/03/2018ರ ಆದೇಶದಲ್ಲಿ ಗೃಹರಕ್ಷಕ ಸ್ವಯಂ ಸೇವಕರಿಗೆ ನೀಡಲಾಗುತ್ತಿರುವ ಕರ್ತವ್ಯ ಭತ್ಯೆಯನ್ನು ದಿನಾಂಕ 01/04/2018ರಿಂದ ಜಾರಿಗೆ ಬರುವಂತೆ ದಿನವೊಂದಕ್ಕೆ ಬೆಂಗಳೂರು ನಗರದಲ್ಲಿ ರೂ. 400 ರಿಂದ ರೂ. 455ಕ್ಕೆ ಹಾಗೂ ಇತರ ಸ್ಥಳಗಳಲ್ಲಿ ರೂ. 325 ರಿಂದ ರೂ. 380ಗಳಿಗೆ ಹೆಚ್ಚಿಸಿ ಮಂಜೂರಾತಿ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದೆ.

ದಿನಾಂಕ 07/09/2019ರ ಆದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ನಿಯೋಜಿತರಾದ, ಪೊಲೀಸ್ ಪೇದೆಗಳಿಗೆ ಮೀಸಲಾದ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಿಗೆ ಮಾತ್ರ ದಿನಾಂಕ 01/04/2020 ರಿಂದ ಜಾರಿಗೆ ಬರುವಂತೆ ಕರ್ತವ್ಯ / ದಿನ ಭತ್ಯೆಯನ್ನು ರೂ. 750ಗಳಿಗೆ ಹೆಚ್ಚಿಸಿ ಮತ್ತು ಇನ್ನುಳಿದ ಗೃಹ ರಕ್ಷಕರಿಗೆ ಹಿಂದಿನ ದರದಂತೆ ಮುಂದುವರೆಸೆತಕ್ಕದೆಂದು ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ದಿನಾಂಕ 08/03/2022ರ ಆದೇಶದಲ್ಲಿ ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಇಲಾಖೆಯ ಗೃಹರಕ್ಷಕ ಸ್ವಯಂ ಸೇವಕರು ಆಯಾಯ ಇಲಾಖೆಗಳಿಗೆ ಮಂಜೂರಾಗಿರುವ ಖಾಲಿ ಹುದ್ದೆಗಳ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿರುವ 3025 ಮಂದಿ ಗೃಹರಕ್ಷಕರಿಗೆ ಮಾತ್ರ ಸೀಮಿತಗೊಳಿಸಿ ಕರ್ತವ್ಯ ಭತ್ಯೆಯನ್ನು ದಿನವೊಂದಕ್ಕೆ ರೂ. 600ಗಳಿಗೆ ಹೆಚ್ಚಿಸಿ ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ದಿನಾಂಕ 19/10/2023 ಮತ್ತು 18/11/2023ರ ಪತ್ರಗಳಲ್ಲಿ ಗೃಹರಕ್ಷಕದಳವು ಸ್ವಯಂ ಸೇವಕರಿಂದ ಕೂಡಿದ ಸಂಸ್ಥೆಯಾಗಿದ್ದು, 30,000 ಸಂಖ್ಯಾಬಲ ಮಂಜೂರಾಗಿದ್ದು, ಪ್ರೆಸುತ 26,016 ವಾಸ್ತವಿಕ ಸಂಖ್ಯಾಬಲವಿರುತ್ತದೆ. ಪೊಲೀಸ್ ಇಲಾಖೆ ಪೂರಕ ಪಡೆಯಾಗಿ ಗೃಹರಕ್ಷಕದಳವು ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಕೋರಿಕೆಯ ಮೇರೆಗೆ ವಿವಿಧ ಕರ್ತವ್ಯಗಳಿಗೆ ಗೃಹರಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದೆ.
ನೋಂದಣಿಗೊಂಡ ಗೃಹರಕ್ಷಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಜೀವ, ಆಸ್ತಿ-ಪಾಸ್ತಿ ರಕ್ಷಿಸುವುದು, ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ, ಪ್ರಾಕೃತಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಮುಂತಾದ ಕರ್ತವ್ಯಗಳನ್ನು ಗೃಹರಕ್ಷಕರು ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕ, ಸ್ವಯಂ ಸೇವಕರಿಗೆ ದಿನವೊಂದಕ್ಕೆ 8 ಗಂಟೆಯ ಕರ್ತವ್ಯದ ಅವಧಿ ನಿಗದಿಯಾಗಿದ್ದರೂ ಸದ್ಯ ಹೆಚ್ಚಿನ ಅವಧಿಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕರಿಗೆ ನೀಡುವ ಕರ್ತವ್ಯದ ಮೊತ್ತವು ಕನಿಷ್ಠದಾಯಕವಾಗಿದೆ.
ಪ್ರಸಕ್ತ ದಿನಗಳಲ್ಲಿ ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಉಂಟಾಗಿದೆ. ಮನೆ ಬಾಡಿಗೆ, ಜೀವನ ನಿರ್ವಹಣಾ ವೆಚ್ಚ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರ್ತವ್ಯದ ಮೇಲೆ ತೆರಳಿದಾಗ ಊಟ-ತಿಂಡಿ ಸೇರಿದಂತೆ ಇತರ ಪ್ರಾಸಂಗಿಕ ವೆಚ್ಚಗಳು ದುಬಾರಿಯಾಗಿದ್ದು, ಗೃಹರಕ್ಷಕ ಸ್ವಯಂ ಸೇವಕರಿಗೆ ಖರ್ಚು ವೆಚ್ಚಗಳನ್ನು ಭರಿಸುವುದು ಕಷ್ಟಸಾಧವಾಗಿರುತ್ತದೆ.
ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರ ಸರ್ಕಾರಿ ನೌಕರರಿಗೆ ಇರುವ ಪ್ರಾಸಂಗಿಕ ವೆಚ್ಚದ ಸೌಲಭಗಳು ಗೃಹರಕ್ಷಕ ಸದಸ್ಯರಿಗೆ ಇರುವುದಿಲ್ಲ. ಕರ್ತವ್ಯ ಭತ್ಯೆಯನ್ನು ಹೊರತುಪಡಿಸಿ ಇತರೆ ಯಾವುದೇ ಭತ್ಯೆ ಇರುವುದಿಲ್ಲ. ಊಟ-ಉಪಹಾರ ಆ ದಿನದ ನಿರ್ವಹಣಾ ವೆಚ್ಚಗಳು ಸಾಕಾಗುವಷ್ಟು ಭತ್ಯೆ ಇಲ್ಲದಿರುವುದರಿಂದ ಗೃಹರಕ್ಷಕದಳದ ಸಂಸ್ಥೆಯಲ್ಲಿ ನೋಂದಣಿಗೊಳ್ಳುವ ಅಭ್ಯರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದೆ.
ಪ್ರಸ್ತುತ, ದಿನಕೂಲಿ ಕಾರ್ಮಿಕರಿಗೆ ರೂ. 642ಗಳ ದಿನಭತ್ಯೆಯನ್ನು ನೀಡಲಾಗುತ್ತಿದ್ದು ಗೃಹ ರಕ್ಷಕರಿಗೆ ಅತ್ಯಂತ ಕನಿಷ್ಟ ಮೊತ್ತವನ್ನು ನೀಡಲಾಗುತ್ತಿದೆ. ಇದರಿಂದ ಗೃಹ ರಕ್ಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಕರ್ತವ್ಯ ಭತ್ಯೆಯನ್ನು ಹೆಚ್ಚಿಸುವುದು ಅತ್ಯಾವಶ್ಯಕವಾಗಿರುತ್ತದೆಂದು ತಿಳಿಸಿ ಸರ್ಕಾರದ ವಿವಿಧ ಇಲಾಖೆಗಳಿಗೆ ಪಾವತಿ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜಿಸುವ ಗೃಹರಕ್ಷಕರಿಗೆ ಆಯಾ ಇಲಾಖೆಗಳಿಂದಲೇ ಕರ್ತವ್ಯ ಭತ್ಯೆ ಪಾವತಿಸಲಾಗುತ್ತಿರುವುದರಿಂದ ಇಲಾಖೆಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲವಾದ್ದರಿಂದ ಗೃಹ ರಕ್ಷಕರ ಕರ್ತವ್ಯ ಭತ್ಯೆ/ ತರಬೇತಿ ಭತ್ಯೆ ಹಾಗೂ ಕವಾಯತು ಭತ್ಯೆಗಳನ್ನು ಪರಿಷ್ಕರಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ಸಮಾದೇಷ್ಟರು, ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಇಲಾಖೆ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಆದ್ದರಿಂದ ಸರ್ಕಾರಿ ಆದೇಶದ ಪ್ರಕಾರ ಗೃಹರಕ್ಷಕದಳ ಹಾಗೂ ಪೌರರಕ್ಷಣಾ ಇಲಾಖೆಯ ಗೃಹರಕ್ಷಕ ಸ್ವಯಂ ಸೇವಕರಿಗೆ ನೀಡಲಾಗುತ್ತಿರುವ ಕರ್ತವ್ಯ ಭತ್ಯೆ/ ತರಬೇತಿ ಭತ್ಯ ಮತ್ತು ಕವಾಯತು ಭತ್ಯೆಯ ದರಗಳನ್ನು ಈ ಕೆಳಗಿನಂತೆ ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಗೃಹರಕ್ಷಕ ದಳ ಕಾನೂನು ಸುವ್ಯವಸ್ಥೆ ಪಸ್ತುತ ಜಾರಿಯಲ್ಲಿರುವ ದರ 750 ರೂ. ಇದನ್ನು 800 ರೂ.ಗೆ ಹೆಚ್ಚಳ. ಬೆಂಗಳೂರು ನಗರ ಪ್ರಸ್ತುತ 455 ರೂ., ಇದನ್ನು 600 ರೂ.ಗಳಿಗೆ ಏರಿಕೆ. ಬೆಂಗಳೂರು ನಗರ ಹೊರತುಪಡಿಸಿ ಇತರೆ ಸ್ಥಳಗಳಲ್ಲಿ ಪ್ರಸ್ತುತ 380 ರೂ.ಗಳು, ಪರಿಷ್ಕರಿಸಲಾದ ದರ 500 ರೂ.ಗಳು. ಕವಾಯತು ಭತ್ಯೆ ರೂ. 22.50 ರಿಂದ ರೂ. 100 ಕ್ಕೆ ಪರಿಷ್ಕರಣೆ.
-
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲಭೂತ ರಚನೆಯ ಭಾಗ: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರಕ್ಕೆ ಸಿದ್ದರಾಮಯ್ಯ ಉತ್ತರ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
ಮಾರ್ಚ್ 3ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು












Click it and Unblock the Notifications