ಖುಷಿ ಸುದ್ದಿ: ಅಪ್ರಾಪ್ತರನ್ನು ತಾಯಿಯ ಮಡಲಿಗೆ ಸೇರಿಸಿದ ಹೈಕೋರ್ಟ್

ಬೆಂಗಳೂರು, ಮೇ. 21: ಹೈಕೋರ್ಟ್ ಅಪರೂಪದ ಪ್ರಕರಣದಲ್ಲಿ ಇಬ್ಬರೂ ಅಪ್ರಾಪ್ತರನ್ನು ತಾಯಿಯ ಮಡಿಲು ಸೇರುವಂತೆ ಮಾಡಿದೆ. ಅಲ್ಲದೆ, ಕಾನೂನು ಬಾಹಿರವಾಗಿ ಇಬ್ಬರು ಅಪ್ರಾಪ್ತರನ್ನು ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರ ಮಧ್ಯಸ್ಥಿಕೆಯಲ್ಲಿ ತಾಯಿಯಿಂದ ತಂದೆಗೆ ಹಸ್ತಾಂತರ ಮಾಡಿದ್ದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರಿನ ನಾಯಂಡಹಳ್ಳಿ ರೆಹಾನಾ ಬೇಗಂ ತಮ್ಮ ಮಕ್ಕಳನ್ನು ಕಾನೂನು ಬಾಹಿರವಾಗಿ ತಂದೆಗೆ ಹಸ್ತಾಂತರಿಸಿರುವ ಮಕ್ಕಳನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸುವಂತೆ ಸೂಚನೆ ನೀಡಬೇಕು ಎಂದು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

High Court of Karnataka handed over two minors to their mother

ಮಕ್ಕಳ ಸಮಿತಿಗೆ ಹೈಕೋರ್ಟ್ ಎಚ್ಚರಿಕೆ

ಅಲ್ಲದೆ, ಮಕ್ಕಳ ಕಲ್ಯಾಣ ಸಮಿತಿಯಿಂದ ಲಿಖಿತ ಬೇಷರತ್ ಕ್ಷಮಾಪಣೆ ದಾಖಲಿಸಿಕೊಂಡಿತು. ಜತೆಗೆ, ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳದಂತೆ ಮಕ್ಕಳ ಸಮಿತಿಗೆ ಎಚ್ಚರಿಕೆ ನೀಡಿ ಹೈಕೋರ್ಟ್ ಅರ್ಜಿ ಇತ್ಯರ್ಥ ಪಡಿಸಿದೆ.

ವಿಚಾರಣೆ ವೇಳೆ ನ್ಯಾಯಾಲಯದ ಸೂಚನೆಯ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ನಾಗರತ್ನ ಅವರು ಖುದ್ದು ಹಾಜರಾಗಿದ್ದರು. ಈ ವೇಳೆ, ಅರ್ಜಿದಾರರ ಪತಿಯ ಮನವಿಯಂತೆ ಮಕ್ಕಳನ್ನು ಹಸ್ತಾತರಕ್ಕೆ ಸೂಚನೆ ನೀಡಲಾಗಿದೆ. ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಕಾನೂನಿನ ಕೊರತೆಯಿಂದ ಈ ಆದೇಶ ನೀಡಿದ್ದಾರೆ ಎಂಬುದಾಗಿ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದ್ದರು.

ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶ ಸಂಪೂರ್ಣವಾಗಿ ಅಧಿಕಾರದ ದುರುಪಯೋಗವನ್ನು ಬಿಂಬಿಸುತ್ತದೆ. ಈ ಕ್ರಿಯೆಗೆ ಬಾಲ ನ್ಯಾಯ ಕಾಯಿದೆಯಡಿಯಲ್ಲಿ ತಿಳಿಸಿರುವಂತೆ ಅಧ್ಯಕ್ಷರು, ಸದಸ್ಯರ ಅಧಿಕಾರವಧಿ ಕೊನೆಗೊಳಿಸಬಹುದು. ಕ್ಷಮೆ ಇಲ್ಲದಂತೆ ಶಿಕ್ಷೆ ನೀಡಬಹುದಾಗಿದೆ ಎಂದು ಹೈಕೋರ್ಟ್ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ರೆಹಾನಾ ಬೇಗಂ ಅವರ ಪತಿ, ತನ್ನ ಇಬ್ಬರು ಮಕ್ಕಳನ್ನು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಾರ ತನ್ನೊಂದಿಗೆ ಕಳುಹಿಸಲು ಕೋರಿ ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ರೆಹಾನ್ ಬೇಗಮ್ ಅವರ ಸಿದ್ದರಿದ್ದ ಪರಿಣಾಮ ಮಕ್ಕಳನ್ನು ಪತಿಯೊಂದಿಗೆ ಕಳುಹಿಸಲು ಸೂಚಿಸಿದ್ದೇನೆ. ಈ ಸಂಬಂದ ಆದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ಸಹಿ ಮಾಡಿದ್ದೇನೆ.

ಅಲ್ಲದೆ, ಅಪ್ರಾಪ್ತ ಮಕ್ಕಳನ್ನು ತಂದೆಯೊಂದಿಗೆ ಕಳುಹಿಸುವುದಕ್ಕೆ ಅಧಿಕಾರವಿಲ್ಲ. ಆದರೆ, ಕೇವಲ ಏಳು ದಿನಗಳ ಕಾಲ ಮೇಲ್ವಿಚಾರಣೆಯಿಂದ ಎಂದಾಗು ತಂದೆಯೊಂದಿಗೆ ಕಳುಹಿಸಿದ್ದೇನೆ. ಇದರಲ್ಲಿ ಮಕ್ಕಳ ಹಿತದೃಷ್ಠಿಯೇ ವಿನಃ, ಯಾವುದೇ ದುರುದ್ದೇಶವಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಯಾಗಿರುವ ರೆಹಾನಾ ಬೇಗಂ ಎಂಬುವರರು ಮತ್ತು ಅವರ ಪತಿ ಯ ನಡುವೆ ವೈವಾಹಿಕ ಕಲಹಗಳಿತ್ತು. ಈ ನಡುವೆ ಅರ್ಜಿದಾರರ ಇಬ್ಬರ ಅಪ್ರಾಪ್ತ ಮಕ್ಕಳನ್ನು ನಗರದ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಚಂದ್ರ ಬಡಾವಣೆ ಪೊಲೀಸ್‌ರ ನಡುವೆ ನಡೆದ ಚರ್ಚೆಯಲ್ಲಿ ಇಬ್ಬರೂ ಮಕ್ಕಳನ್ನು ಪತಿಗೆ ಹಸ್ತಾಂತರ ಮಾಡಬೇಕು ಎಂದು ನಿರ್ದೇಶಿಸಲಾಗಿತ್ತು. ಅದರಂತೆ ಅರ್ಜಿದಾರರು ಮಕ್ಕಳನ್ನು ಪತಿಗೆ ನೀಡಿದ್ದರು.

ಇದು ಕಾನೂನು ಬಾಹಿರವಾಗಿ ಹಸ್ತಾಂತರ ಮಾಡಲಾಗಿತ್ತು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಅಧಿಕಾರ ಮೀರಿ ಮಕ್ಕಳನ್ನು ಪತಿಗೆ ನೀಡುವಂತೆ ಸೂಚನೆ ನೀಡಿದೆ. ಆದ್ದರಿಂದ ತಮ್ಮ ಇಬ್ಬರೂ ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರಿ ಪಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+