ಜನವರಿ 20ರಿಂದ ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು

ಬೆಂಗಳೂರು, ಜನವರಿ, 18: ನೀವು ಹೆಲ್ಮೆಟ್ ಖರೀದಿ ಮಾಡಿದ್ರಾ? ಇದು ಸದ್ಯ ಎಲ್ಲ ಕಡೆ ಕೇಳಿಬರುತ್ತಿರುವ ಒಂದೇ ಒಂದು ಪ್ರಶ್ನೆ. ದ್ವಿಚಕ್ರ ವಾಹನ ಸವಾರರಿಗೆ ಇದೊಂದು ರೀತಿಯ ತಲೆನೋವು ತಂದಿರುವುದು ಸುಳ್ಳಲ್ಲ. ಪೊಲೀಸರ ಕಣ್ಣು ಕಟ್ಟಲು ಯಾವುದೋ ಒಂದು ಹೆಲ್ಮೆಟ್ ಆಯಿತೆಂದು ತಲೆಗೆ ಹಾಕಿಕೊಂಡು ಹೋದರೂ ದಂಡ ಕಟ್ಟಬೇಕಾದೀತು ಹುಷಾರ್!

ಹಾಗಾದರೆ ನೀವು ಯಾವ ಬಗೆಯ ಹೆಲ್ಮೆಟ್ ಖರೀದಿ ಮಾಡಬೇಕು ಎಂಬುದನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 129 ತಿಳಿಸುತ್ತದೆ. ಇದು ಹೇಳುವಂತೆ ಐಎಸ್‌ಐ ಮುದ್ರೆಯಿರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೀಗಾಗಿ ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿದರೆ ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಇಂಡಿಯನ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ ಕೂಡ ಸುರಕ್ಷಿತ ಹೆಲ್ಮೆಟ್‌ ನ ನಿರ್ದಿಷ್ಟ ಮಾನದಂಡಗಳನ್ನು ತಿಳಿಸಿದೆ.[ಹೆಲ್ಮೆಟ್ ಕಡ್ಡಾಯ: ಬೆಂಗಳೂರಿಗರಿಗೆ ಜನವರಿ 20 ಅಂತಿಮ ಗಡುವು]

ಪರ-ವಿರೋಧ ಚರ್ಚೆಗಳು ಯಾವುದೇ ಇರಲಿ.. ನೀವು ಧರಿಸಬೇಕಾದ ಹೆಲ್ಮೆಟ್ ಹೇಗಿರಬೇಕು, ಹಿಂಬದಿ ಸವಾರನಿರಲಿ, ಮುಂಬದಿ ಸವಾರನಿರಲಿ ಯಾವ ಬಗೆಯ ಹೆಲ್ಮೆಟ್ ಹಾಕಿಕೊಳ್ಳಬೇಕು. ಎಂಬುದರ ಸಂಪೂರ್ಣ ವಿವರ ಇಲ್ಲಿದೆ...

ನೀವು ಧರಿಸುವ ಹೆಲ್ಮೆಟ್

ನೀವು ಧರಿಸುವ ಹೆಲ್ಮೆಟ್

ಹೆಲ್ಮೆಟ್ ಎರಡು ಕಿವಿಯನ್ನು ಸಂಪೂರ್ಣವಾಗಿ ಮುಚ್ಚಬೇಕು.ತಲೆ ಮತ್ತೆ ಹಣೆಯ ಸುತ್ತ ಕವಚ ಹಾಗೂ ಗಲ್ಲವನ್ನು ಹೆಲ್ಮೆಟ್ ಕವರ್ ಮಾಡುವಂತೆ ಇರಬೇಕು.

ಅರ್ಧ ಹೆಲ್ಮೆಟ್ ಗೆ ದಂಡ

ಅರ್ಧ ಹೆಲ್ಮೆಟ್ ಗೆ ದಂಡ

ಬಿಸಿಲಿನಿಂದ ತಪ್ಪಿಸಿಕೊಳ್ಳಲು, ಪೊಲೀಸರ ಕಣ್ಣಿಗೆ ಮಣ್ಣೆರಚಲು ಅಗ್ಗದ ಬೆಲೆಯ ಅರ್ಧ ಹೆಲ್ಮೆಟ್ ಧರಿಸಿದರೂ ದಂಡ ಕಟ್ಟಬೇಕಾಗುತ್ತದೆ, ನಿಯಮ ಉಲ್ಲಂಸುವ ಹಿಂಬದಿ ಸವಾರರಿಗೂ ಜ.20ರಿಂದ ದಂಡ ವಿಧಿಸಲಾಗುವುದು ಹೆಚ್ಚುವರಿ ಪೊಲೀಸ್ ಆಯುಕ್ತರ (ಸಂಚಾರ) ಎಂ.ಎ. ಸಲೀಂ ತಿಳಿಸಿದ್ದಾರೆ.

ಅರ್ಧ ಹೆಲ್ಮೆಟ್‌ಗೆ ಬೇಡಿಕೆ

ಅರ್ಧ ಹೆಲ್ಮೆಟ್‌ಗೆ ಬೇಡಿಕೆ

ಐಎಸ್‌ಐ ಮುದ್ರೆಯಿರುವ ಹೆಲ್ಮೆಟ್‌ಗೆ ಹೋಲಿಸಿದಲ್ಲಿ 200 ರೂ.ಗೆ ಸಿಗುವ ಅರ್ಧ ಹೆಲ್ಮೆಟ್‌ಗಳಿಗೆ ರಾಜ್ಯಾದ್ಯಂತ ಬೇಡಿಕೆ ಹೆಚ್ಚಿದೆ. ಬಿಸಿಲ ಝಳ ಹೆಚ್ಚಾದಾಗ, ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದಾಗ ಈ ಹೆಲ್ಮೆಟ್‌ಗಳನ್ನು ತೆಗೆಯುವುದು ಸುಲಭ. ನೀವು ಇಂಥವನ್ನು ಧರಿಸಿ ತೆರಳಿದರೆ ದಂಡ ಕಟ್ಟಬೇಕಾಗುತ್ತದೆ.

ಹೆಚ್ಚಿದ ದರ

ಹೆಚ್ಚಿದ ದರ

700ರಿಂದ 800 ರೂ.ಗೆ ಸಿಗುತ್ತಿದ್ದ ಹೆಲ್ಮೆಟ್‌ಗಳು ಈಗ ಸಾವಿರ ರೂ.ಗೆ ಮಾರಾಟವಾಗುತ್ತಿವೆ. ಐಎಸ್‌ಐ ಮಾರ್ಕ್‌ನ ಹೆಲ್ಮೆಟ್‌ಗಳು ದಿನಕ್ಕೆ 10-15 ಮಾರಾಟವಾದರೆ, 150-200 ರೂ.ಗೆ ಸಿಗುವ ಅರ್ಧ ಹೆಲ್ಮೆಟ್‌ಗಳು ದಿನಕ್ಕೆ 30 ಕ್ಕೂ ಅಧಿಕ ಮಾರಾಟವಾಗುತ್ತಿದೆ ಎಂದು ಬಸವನಗುಡಿ ಸಮೀಪ ಹೆಲ್ಮೆಟ್ ಮಾರುತ್ತಿದ್ದ ರಮೇಶ್ ಹೇಳುತ್ತಾರೆ.

ಅಂಗಡಿಯಲ್ಲಿ ತಗೊಬೇಕೋ?

ಅಂಗಡಿಯಲ್ಲಿ ತಗೊಬೇಕೋ?

ಗ್ರಾಹಕರಿಗೆ ಈ ಗೊಂದಲವೂ ಇದೆ. ಫುಟ್ ಪಾತ್ ನಲ್ಲಿ ಮಾರುವ ಹೆಲ್ಮೆಟ್ ತಗೊಂಡರೆ ಸಾಕಾ? ಅಥವಾ ಅಂಗಡಿಗೆ ತೆರಳಿ ತಗೋಬೇಕಾ? ನಿಮ್ಮ ಸುರಕ್ಷತೆ ನಿಮ್ಮ ಜವಾಬ್ದಾರಿ. ಮೊಬೈಲ್ ಗೆ ಗೊರಿಲ್ಲಾ ಗ್ಲಾಸ್ ಹಾಕಿಸುವವರು ನಿಮ್ಮ ತಲೆಗೂ ಉತ್ತಮ ಸುರಕ್ಷಾ ಕವಚ ಹಾಕಿಕೊಂಡರೆ ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+