ಅಕ್ಟೋಬರ್ 25 ರಂದು ಕರ್ನಾಟಕದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ
ಬೆಂಗಳೂರು, ಅಕ್ಟೋಬರ್ 17: ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದ್ದು, ಕರಾವಳಿ ಪ್ರದೇಶದಲ್ಲಿ ಸಕ್ರಿಯವಾಗಿದೆ.
ಮಂಗಳೂರು ಏರ್‌ಪೋರ್ಟ್‌ನಲ್ಲಿ 8 ಸೆಂ.ಮೀ. ಮಳೆಯಾಗಿದೆ. ಪಣಂಬೂರ್, ಕ್ಯಾಸಲ್ ರಾಕ್‌ನಲ್ಲಿ ತಲಾ 7 ಸೆಂ.ಮೀನಷ್ಟು ಮಳೆಯಾಗಿದೆ.ಗೋಕರ್ಣ, ಕಾರವಾರ, ಅಂಕೋಲಾ, ಮುಲ್ಕಿ, ಮಾಣಿ,ಆಗುಂಬೆ,ಪುತ್ತೂರು,ಧರ್ಮಸ್ಥಳ, ಕಿರವತ್ತಿ, ಬ್ರಹ್ಮಾವರ, ಉಪ್ಪಿನಂಗಡಿ, ಯಲ್ಲಾಪುರ, ಮಂಚಿಕೆರೆ, ಲೋಂಡಾ, ಹೊನ್ನಾವರ, ಅಥಣಿ,ಕುಡಚಿ, ಸಕಲೇಶಪುರ, ಮಡಿಕೇರಿ, ಕೊಪ್ಪದಲ್ಲಿ ಮಳೆಯಾಗಿದೆ.

ರಾಯಚೂರಿನಲ್ಲಿ ಅತಿ ಗರಿಷ್ಠ ಅಂದರೆ 30.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೀದರ್ ಹಾಗೂ ಮಂಡ್ಯದಲ್ಲಿ ಕನಿಷ್ಠ ಅಂದರೆ 18.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಅಕ್ಟೋಬರ್ 25 ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ,ಚಿತ್ರದುರ್ಗ,ದಾವಣಗೆರೆ, ಯಾದಗಿರಿಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಿನಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ.












Click it and Unblock the Notifications