ಶಿವಮೊಗ್ಗದಲ್ಲಿ ಉತ್ತಮ ಮಳೆ: 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಆಗಸ್ಟ್ 13: ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದೆ. ಆಗುಂಬೆಯಲ್ಲಿ 15 ಸೆಂ.ಮೀ ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Recommended Video
ನೈಋತ್ಯ ಮುಂಗಾರಿ ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ 3.2 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಸಿದ್ದಾಪುರ, ಧರ್ಮಸ್ಥಳ, ಕಾರ್ಕಳ, ಬೆಳ್ತಂಗಡಿ, ಭಾಗಮಂಡಲ, ತೀರ್ಥಹಳ್ಳಿ, ಶೃಂಗೇರಿ, ಕಳಸ, ಕಮ್ಮರಡಿಯಲ್ಲಿ ಭಾರಿ ಮಳಯಾಗಿದೆ.
ಬ್ರಹ್ಮಾವರ, ನಾಪೊಕ್ಲು, ಮೂಡಬಿದಿರೆ, ಜಯಪುರ, ಉಡುಪಿ, ಭಟ್ಕಳ, ಮಡಿಕೇರಿ, ಸುಳ್ಯ, ತಾಳಗುಪ್ಪ, ಹುಂಚದಕಟ್ಟೆ, ಸೋಮವಾರಪೇಟೆ, ಬನವಾಸಿ, ಯಲ್ಲಾಪುರ, ಮಾಣಿ, ಮಾದಪುರ, ತ್ಯಾಗರ್ತಿ, ಆನವಟ್ಟಿ, ಮೂಡಿಗೆರೆ, ಹೊಸಕೋಟೆ, ದೇವನಹಳ್ಳಿ, ಅರಸಳು, ಕಾರವಾರ, ಕೃಷ್ಣರಾಜಸಾಗರ, ಕೊಟ್ಟೂರು, ಹರಪನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ
ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಆಗುಂಬೆಯಲ್ಲಿ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೊಲ್ಲೂರು 11, ಧರ್ಮಸ್ಥಳ, ಕಾರ್ಕಳ 8, ಬೆಳ್ತಂಗಡಿ, ಭಾಗಮಂಡಲ, ತೀರ್ಥಹಳ್ಳಿ 7, ಹೊಸನಗರ, ಕೊಪ್ಪ 6, ಉಡುಪಿ, ಭಟ್ಕಳ, ಸಾಗರ, ಮಡಿಕೇರಿ 4, ಸುಳ್ಯ, ಕುಂದಾಪುರ, 3, ಮಂಗಳೂರು, ಪುತ್ತೂರು, ಮೂಡಿಗೆರೆ, ಕೋಲಾರ, ಹೊಸಕೋಟೆ, ದೇವನಹಳ್ಳಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ಕಲಬುರಗಿ, ಬೀದರ್, ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ.13ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ತಗ್ಗಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ಬೆಟ್ಟ ಕುಸಿದ ಸ್ಥಳದಲ್ಲಿ ಶೋಧ ಚುರುಕು
ತಲಕಾವೇರಿಯಲ್ಲಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ಉಳಿದ ಮೂವರಿಗಾಗಿ ಗುರುವಾರವೂ ಶೋಧ ಮುಂದುವರೆದಿದೆ. ಅರ್ಚಕ ನಾರಾಯಣ ಆಚಾರ್ ಪತ್ನಿಶಾಂತಾ, ಸಹಾಯಕ ಅರ್ಚಕರಾದ ರವಿ ಕಿರಣ ಭಟ್, ಶ್ರೀನಿವಾಸ್ ಅವರಿಗಾಗಿ ಎನ್‌ಡಿಆರ್‌ಎಫ್ ತಂಡ ಹಾಗೂ ಪೊಲೀಸರು ಶೋಧ ನಡೆಸಿದ್ದಾರೆ.












Click it and Unblock the Notifications