Rain Alert: ಮಳೆ.. ಮಳೆ.. ಭರ್ಜರಿ ಮಳೆ ಗುರೂ!

ಮಳೆ ಬರದೇ ಕರ್ನಾಟಕದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣ ಆಗಿತ್ತು, ಹೀಗಾಗಿ ಕನ್ನಡಿಗರೂ ಚಿಂತೆಯಲ್ಲಿ ನರಳಿದ್ದರು. ಯಾವಾಗ ಮಳೆ ಬರುತ್ತೆ ದೇವರೇ ಅಂತಾ ನರಳುತ್ತಿರುವ ವೇಳೆ, ಭರ್ಜರಿಯಾಗಿ ಮಳೆ ಶುರುವಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತವಾದ ಮಳೆ ಬೀಳುತ್ತಿದೆ. ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ.

Heavy Rain This Districts In Karnataka Has Received Heavy Rain On 13 April 2024

ಗಣಿ ಜಿಲ್ಲೆಯಲ್ಲಿ ಭಾರಿ ಮಳೆ

ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆ ಅಬ್ಬರ ಶುರುವಾಗಿದ್ದು, ಜನರು ಖುಷ್ ಆಗಿದ್ದಾರೆ. ಅದ್ರಲ್ಲೂ ನೀರನ್ನ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ. ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿ, ನರಳಿದ್ದ ಅನ್ನದಾತ ರೈತರು ಮಳೆ ಹಿನ್ನೆಲೆ ಒಂದಷ್ಟು ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಅದರಲ್ಲೂ ಗಣಿ ಜಿಲ್ಲೆಯಾದ, ಬಳ್ಳಾರಿಯ ಹಲು ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದೆ.

ಮುಂದಿನ ಕೆಲ ದಿನಗಳ ಕಾಲ, ಇದೇ ರೀತಿ ಭಾರಿ ಮಳೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಬರುವ ನಿರೀಕ್ಷೆ ಕೂಡ ಇದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೂಡ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಈಗಾಗಲೇ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿಯ ನೀಡಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿ.

ಬರದ ನಡುವೆ ಭರ್ಜರಿ ಮಳೆ

ಮಳೆ ಇಲ್ಲದೆ ಕನ್ನಡಿಗರು ನರಳಾಡಿ ಹೋಗಿದ್ದಾರೆ, ಅದರಲ್ಲೂ ಹಳ್ಳಿಗಳಲ್ಲಿ ಕೆರೆ & ಕುಂಟೆ ಬತ್ತಿ ಹೋಗಿ ಬರಡು ಭೂಮಿಯಾಗಿ ಬದಲಾಗಿವೆ. ಇದರ ಜೊತೆಗೆ ಬಿಸಿಲಿನ ಝಳವೂ ಹೆಚ್ಚಾಗಿ ಏನು ಮಾಡಬೇಕು ಅಂತ ಕನ್ನಡಿಗರು ಪರಿತಪಿಸುವ ಸಮಯದಲ್ಲಿ ಭರ್ಜರಿ ಮಳೆ ಬಂದಿದ್ದು ಭೂಮಿ ತಂಪಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನರು ಪರದಾಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. ಈ ಸಮಯದಲ್ಲೇ ಮಳೆ ಆರಂಭವಾಗಿರುವುದು ಜನರಿಗೆ ಖುಷಿ ಕೊಟ್ಟಿದೆ.

ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ

ಕಾವೇರಿ ನದಿಯ ತವರು ಅಂತಾನೆ ಕರೆಯುವ ನಮ್ಮ ಕೊಡಗು ಜಿಲ್ಲೆಯಲ್ಲಿ ಭರ್ಜರಿಯಾಗಿ ಮಳೆ ಬಿದ್ದಿದೆ. ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಿದ್ದ ಹಿನ್ನೆಲೆಯಲ್ಲಿ ನೆಲ ಕೂಡ ಈಗ ಹಸಿರಾಗಿದೆ. ಇನ್ನು ಕಾಫಿ ತೋಟಗಳ ಮಾಲೀಕರು ಮಳೆ ಇಲ್ಲದೆ ಕಂಗಾಲಾಗಿ ಹೋಗಿದ್ದು, ತಮ್ಮ ತಮ್ಮ ಕಾಫಿ ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಆದರೆ ಈಗ ಮಳೆಯಿಂದ ಕೊಡಗು ಜಿಲ್ಲೆ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ.

ಮುನಿಸಿಕೊಂಡಿದ್ದ ಮಳೆರಾಯ ಸೈಲೆಂಟ್!

ಕನ್ನಡಿಗರ ಮೇಲೆ ಮುನಿಸಿಕೊಂಡಿದ್ದ ವರುಣ ದೇವ ಇದೀಗ ಒಂದಷ್ಟು ಕರುಣೆ ತೋರಿಸಿದ್ದಾನೆ. ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆ ಭಾರಿ ಮಳೆಯೂ ಶುರುವಾಗಿದೆ. ಅದರಲ್ಲೂ ಕನ್ನಡ ನಾಡಿನ ಮಲೆನಾಡು ಭಾಗ, ಕರಾವಳಿ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಈಗ ಬಯಲು ಸೀಮೆ ಪ್ರದೇಶವಾದ ಉತ್ತರ ಕರ್ನಾಟಕದಲ್ಲಿ ಕೂಡ ಅಬ್ಬರಿಸಲು ಶುರು ಮಾಡಿದೆ. 4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನ ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ಅದ್ರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಮಸ್ಯೆ ಕೊಟ್ಟಿತ್ತು ಆದರೆ ಕಳೆದ ವರ್ಷ ಮಳೆ ನಾಪತ್ತೆ. ಹೀಗಾಗಿ 2024ರ ಬೇಸಿಗೆ ಆರಂಭಕ್ಕೆ ಮೊದಲೇ ನೀರಿಗೆ ಕೊರತೆ ಉಂಟಾಗಿತ್ತು. ಜನ ಹನಿ ಹನಿ ನೀರಿಗೆ ನರಳಿದ್ದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+