Rain Alert: ಮಳೆ ಅಬ್ಬರ ಶುರು, ಆಲಿಕಲ್ಲು ಸಹಿತ ಮಳೆಗೆ ಬೆಚ್ಚಿಬಿದ್ದ ಕರ್ನಾಟಕ!
ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಮಳೆರಾಯ ಸಿಹಿ ಸುದ್ದಿ ನೀಡಿದ್ದಾನೆ. ಇಂದು ಕೂಡ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯು ಬಿದ್ದಿದೆ. ಮಲೆನಾಡು ಭಾಗ ಚಿಕ್ಕಮಗಳೂರು ಸೇರಿದಂತೆ ಕೊಡಗು ಮತ್ತು ಶಿವಮೊಗ್ಗದಲ್ಲಿ ಭರ್ಜರಿ ಮಳೆ ಬಂದಿದೆ.
ಮತ್ತೊಂದು ಕಡೆ ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ಜನ ಭರ್ಜರಿ ಮಳೆಯಿಂದ ಖುಷಿಯಾಗಿದ್ದಾರೆ. ಹಾಗಾದ್ರೆ ಯಾವ ಯಾವ ಜಿಲ್ಲೆಯಲ್ಲಿ ಮಳೆ ಎಷ್ಟು ಪ್ರಮಾಣದಲ್ಲಿ ಬಂದಿದೆ? ಮಳೆಯ ವಿಡಿಯೋ ನೋಡಲು ಮುಂದೆ ಓದಿ.

ಎಲ್ಲಾ ಕಡೆಯೂ ಒಣ ಭೂಮಿ ಕಾಣುತ್ತಿದೆ ಮಳೆ ಇಲ್ಲದೆ ಭೂಮಿ ಸಂಪೂರ್ಣ ಒಣಗಿ ಹೋಗಿ ಜನರು ಪರದಾಡುತ್ತಿದ್ದಾರೆ. ಇದೆಲ್ಲವೂ ಮನುಷ್ಯ ಮಾಡುತ್ತಿರುವ ಎಡವಟ್ಟು & ಅಹಂಕಾರದ ಫಲಿತಾಂಶ ಎನ್ನಬಹುದು. ಹೀಗಾಗಿ ಬೇಸಿಗೆ ಆರಂಭದ ಸಮಯದಲ್ಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರೇ ಇಲ್ಲದೆ ಜನರು ಪರದಾಡಿದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟವು ಶುರು ಆಗಿದ್ದು, ಭರ್ಜರಿ ಮಳೆ ಬೀಳುತ್ತಿದೆ. ಅದೇ ರೀತಿ ಇಂದು ಕೂಡ ಭಾರಿ ಮಳೆಯಾಗಿದ್ದು, ಆ ವಿಡಿಯೋಗಳು ಇಲ್ಲಿವೆ ಮುಂದೆ ಓದಿ.
ಮಳೆ.. ಕರ್ನಾಟಕದಲ್ಲಿ ಭರ್ಜರಿ ಮಳೆ!
ಏಪ್ರಿಲ್ 12 & ಏಪ್ರಿಲ್ 13 ರಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ & ಹಾಸನ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
Hailstones, Heavy rain in Belagavi !!
— Belagavi Infra.co.in (@Belagavi_infra) April 12, 2024
ಬೆಳಗಾವಿಯಲ್ಲಿ ಆಲಿಕಲ್ಲು ಮಳೆ ! #Belagavi#Karnataka#Hailstones #Thunderstorm #Rain pic.twitter.com/eVBvV8EE6f
ಈಗ ಕರ್ನಾಟಕದ ಮಲೆನಾಡು ಭಾಗ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆಯಾಗಿದೆ. ಮಳೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭರ್ಜರಿ ಮಳೆಯ ವಿಡಿಯೋ ನೋಡೋಣ ಬನ್ನಿ.
ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ
ಬೆಳಗಾವಿ ರೀತಿಯಲ್ಲಿ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯ ಹಲವು ಪ್ರದೇಶದಲ್ಲಿ ಕೂಡ ಭಾರಿ ಮಳೆ ಬಿದ್ದಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿ ಜನ ಫುಲ್ ಖುಷ್ ಆಗಿದ್ದಾರೆ. ಹಾಗೇ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರ ಬಲು ಜೋರಾಗಿ ಇತ್ತು. ಒಣಗಿ ಹೋಗಿದ್ದ ತೋಟಗಳಿಗೆ ಈಗ ಮತ್ತೆ ಕಳೆ ಬಂದಂತಾಗಿದೆ.
ಕುಂಬಳದಾಳುವಿನಲ್ಲಿ ಇಂದು ಮಧ್ಯಾಹ್ನ ಸುರಿದ ಮೊದಲ ಮಳೆ pic.twitter.com/zyKvqqVn9T
— Coorgthekashmirofkarnataka (@Coorgthekashmir) April 12, 2024
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ.
ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣ ಮಳೆಯ ಆರ್ಭಟ ಶುರುವಾಗದೇ ಇದ್ದರೆ ಕರ್ನಾಟಕದಲ್ಲಿ ಅನಾಹುತ ಸಂಭವಿಸಲಿದೆ ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭರ್ಜರಿ ಮಳೆ ಬಂದಿದೆ.
ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ ಮಳೆ
ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯ ಅಬ್ಬರ ಶುರುವಾಗಿದ್ದು ಜನರು ಖುಷ್ ಆಗಿದ್ದಾರೆ. ಅದರಲ್ಲೂ ನೀರನ್ನೇ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ, ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ. ಇನ್ನೇನು ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿ ನರಳಿದ್ದ ಅನ್ನದಾತ ರೈತರು ಮಳೆ ಹಿನ್ನೆಲೆ ಒಂದಷ್ಟು ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಬರುವ ನಿರೀಕ್ಷೆ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಜನ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಸರಿ ಹೋಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.












Click it and Unblock the Notifications