KRS Dam: ಹಿಂಗಾರು ಅಬ್ಬರ; ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ರಾಜ್ಯದಲ್ಲಿ ಉತ್ತಮ ಮುಂಗಾರು ಮುಗಿದ ಬಳಿಕ, ಹಿಂಗಾರು ಕೂಡ ಚುರುಕುಗೊಂಡಿದ್ದು ವ್ಯಾಪಕ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಮತ್ತೆ ರಭಸವಾಗಿ ಹರಿಯಲು ಆರಂಭಿಸಿದೆ. ಮುಂಗಾರಿನಲ್ಲೇ ಭರ್ತಿಯಾಗಿದ್ದ ರಾಜ್ಯದ ಬಹುತೇಕ ಜಲಾಶಯಗಳಿಗೆ ಮತ್ತೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಗಳಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಇನ್ನೂ ಐದು ದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಗಾರಿನಲ್ಲೇ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಲಿಂಗನಮಕ್ಕಿ ಮತ್ತು ಸೂಪಾ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಉಳಿದ ಎಲ್ಲಾ ಜಲಾಶಯಗಳು ಗರಿಷ್ಠ ಸಾಮರ್ಥ್ಯವನ್ನು ತಲುಪಿವೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಸಾಮರ್ಥ್ಯ 151.75 ಟಿಎಂಸಿ ಇದ್ದು, ಇಂದಿನ 146.42 ಟಿಎಂಸಿ ನೀರು ಸಂಗ್ರಹವಾಗಿದೆ. 4349 ಕ್ಯೂಸೆಕ್ಸ್ ಒಳಹರಿವು ಇದ್ದು, 6718 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

Heavy rain karnataka know the karnataka dams water level

ಕೃಷ್ಣರಾಜಸಾಗರ (ಕೆಆರ್ ಎಸ್), ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದು ಕಾವೇರಿ ಕೊಳ್ಳದ ರೈತರಲ್ಲಿ ಸಂತಸ ತಂದಿದೆ. ತಮಿಳುನಾಡು ಜೊತೆಗಿನ ನೀರಿನ ಸಮಸ್ಯೆ ಈ ಬಾರಿ ತಲೆದೋರುವ ಸಾಧ್ಯತೆ ಕಡಿಮೆ ಇದೆ. 124.80 ಗರಿಷ್ಠ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಅಷ್ಟೇ ಪ್ರಮಾಣದ ನೀರು ಸಂಗ್ರಹವಾಗಿದೆ. 6777 ಕ್ಯೂಸೆಕ್ಸ್ ಒಳಹರಿವು ಇದ್ದು, 4903 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಉತ್ತರ ಕರ್ನಾಟಕದ ಭಾಗದಲ್ಲಿರುವ ಜಲಾಶಯಗಳು ಕೂಡ ಜೀವಕಳೆ ಪಡೆದುಕೊಂಡಿವೆ. ತುಂಗಭದ್ರ, ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಭರ್ತಿಯಾಗಿದ್ದು, ಎರಡನೇ ಬೆಳೆಗು ನೀರು ಸಿಗುವ ವಿಶ್ವಾಸದಲ್ಲಿದ್ದಾರೆ ರೈತರು.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 562.73 ಮೀಟರ್ / 139.90 ಟಿಎಂಸಿ
ಒಳಹರಿವು: 1779 ಕ್ಯೂಸೆಕ್ಸ್
ಹೊರಹರಿವು: 3245 ಕ್ಯೂಸೆಕ್ಸ್

ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 593.10 ಮೀಟರ್ / 28.67 ಟಿಎಂಸಿ
ಒಳಹರಿವು: 440 ಕ್ಯೂಸೆಕ್ಸ್
ಹೊರಹರಿವು: 0 ಕ್ಯೂಸೆಕ್ಸ್

ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2854 ಅಡಿ / 7.17 ಟಿಎಂಸಿ
ಒಳಹರಿವು: 1498 ಕ್ಯೂಸೆಕ್ಸ್
ಹೊರಹರಿವು: 800 ಕ್ಯೂಸೆಕ್ಸ್

ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2918.51 ಅಡಿ / 33.79 ಟಿಎಂಸಿ
ಒಳಹರಿವು: 5009 ಕ್ಯೂಸೆಕ್ಸ್
ಹೊರಹರಿವು: 5650 ಕ್ಯೂಸೆಕ್ಸ್

ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2283 ಅಡಿ / 19.48 ಟಿಎಂಸಿ
ಒಳಹರಿವು: 1477 ಕ್ಯೂಸೆಕ್ಸ್
ಹೊರಹರಿವು: 1525 ಕ್ಯೂಸೆಕ್ಸ್

ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2158 ಅಡಿ / 71.53 ಟಿಎಂಸಿ
ಒಳಹರಿವು: 7423 ಕ್ಯೂಸೆಕ್ಸ್
ಹೊರಹರಿವು: 6208 ಕ್ಯೂಸೆಕ್ಸ್

ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1631.97 ಅಡಿ / 101.65 ಟಿಎಂಸಿ
ಒಳಹರಿವು: 82,504 ಕ್ಯೂಸೆಕ್ಸ್
ಹೊರಹರಿವು: 82,504 ಕ್ಯೂಸೆಕ್ಸ್

ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2174 ಅಡಿ / 50.84 ಟಿಎಂಸಿ
ಒಳಹರಿವು: 3,492 ಕ್ಯೂಸೆಕ್ಸ್
ಹೊರಹರಿವು: 5,426 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2079 ಅಡಿ / 37.73 ಟಿಎಂಸಿ
ಒಳಹರಿವು: 6865 ಕ್ಯೂಸೆಕ್ಸ್
ಹೊರಹರಿವು: 4756 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 519 ಮೀಟರ್ / 122.83 ಟಿಎಂಸಿ
ಒಳಹರಿವು: 27,921 ಕ್ಯೂಸೆಕ್ಸ್
ಹೊರಹರಿವು: 25,896 ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 491.97 ಮೀಟರ್ / 32.14 ಟಿಎಂಸಿ
ಒಳಹರಿವು: 52,893 ಕ್ಯೂಸೆಕ್ಸ್
ಹೊರಹರಿವು: 64,797 ಕ್ಯೂಸೆಕ್ಸ್

ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2132.35 ಅಡಿ / 24.01 ಟಿಎಂಸಿ
ಒಳಹರಿವು: 1040 ಕ್ಯೂಸೆಕ್ಸ್
ಹೊರಹರಿವು: 135 ಕ್ಯೂಸೆಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+