Rain Alert: ಮಳೆ.. ಮಳೆ.. 48 ಗಂಟೆಗಳಲ್ಲಿ ಮತ್ತೆ ಮಳೆಯ ಆರ್ಭಟ ಶುರು....

ಮಳೆ ಆರ್ಭಟ ಇನ್ನೇನು ಮುಗಿದು ಹೋಯ್ತು, ಚಳಿಗಾಲ ಶುರುವಾಯ್ತು... ಒಂದಷ್ಟು ದಿನ ಕಳೆದರೆ ಬೇಸಿಗೆ ಕಾಲ ಬರುತ್ತೆ, ಆಗ ನೆಮ್ಮದಿಯಾಗಿ ಇರಬಹುದು ಅಂತಾ ಪ್ಲಾನ್ ಮಾಡ್ತಾ ಇದ್ರಾ? ಆದರೆ ಮಳೆ ಆರ್ಭಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ, ಬೆಂಗಳೂರು ಸೇರಿ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಗೆ ಈಗಲೂ ಮಳೆಯ ಭಯ ಕಾಡುತ್ತಲೇ ಇದೆ!

ಹೌದು, ಮಳೆ ಆರ್ಭಟ ಇಷ್ಟಕ್ಕೇ ಸೈಲೆಂಟ್ ಆಗುವ ಯಾವುದೇ ಲಕ್ಷಣ ಕೂಡ ಕಾಣುತ್ತಿಲ್ಲ. ನಿಮಗೆಲ್ಲಾ ಗೊತ್ತಿರುವಂತೆ, ಬಂಗಾಳ ಕೊಲ್ಲಿ ಭಾಗದಲ್ಲಿ ಪದೇ ಪದೇ ವಾಯುಭಾರ ಕುಸಿತ ಉಂಟಾಗುತ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿದೆ. ಹೀಗಾಗಿ ಪದೇ ಪದೇ ಮಳೆ ಬರುತ್ತಿದ್ದು, ಕನ್ನಡಿಗರು ಹೀಗೆ ಅಕಾಲಿಕ ಮಳೆಯ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ. ಮಳೆ ಯಾಕಪ್ಪಾ ಬರುತ್ತೆ? ಅಂತಾನೂ ಗೊಣಗುತ್ತಿದ್ದಾರೆ. ಹೀಗಿದ್ದಾಗಲೇ, ಮಳೆ.. ಮಳೆ.. 48 ಗಂಟೆಗಳಲ್ಲಿ ಮತ್ತೆ ಮಳೆಯ ಆರ್ಭಟ ಶುರು....

Heavy Rain Karnataka And Bengaluru Is Still Have Chances To Receive Rain In Next Few Days

ಮಳೆ.. ಮಳೆ.. 48 ಗಂಟೆಗಳಲ್ಲಿ...

ಕಳೆದ ಕೆಲವು ದಿನಗಳಿಂದ ಚಳಿಗಾಲ ಶುರುವಾದರೂ ಮಳೆ ಸುರಿದಿದ್ದು, ಈಗಾಗಲೇ ನೆಗಡಿ & ಕೆಮ್ಮು & ಜ್ವರದ ಕಾರಣಕ್ಕೆ ಲಕ್ಷಾಂತರ ಜನ ಬಳಲುತ್ತಿರುವ ಸಮಯದಲ್ಲೇ ಮತ್ತೆ ಮಳೆ ಎಚ್ಚರಿಕೆ ಸಿಕ್ಕಿದೆ. ಅಕಸ್ಮಾತ್ ಈ ಬಾರಿ ಮತ್ತೆ ಮಳೆ ಸುರಿದರೆ ಬೆಳೆಯ ಜೊತೆಗೆ ನಗರ ಪ್ರದೇಶಗಳ ಜನರು ಆಸ್ಪತ್ರೆಗೆ ಸೇರುವುದು ಗ್ಯಾರಂಟಿ ಎಂಬ ಆತಂಕ ಕಾಡುತ್ತಿದೆ.

ಹೌದು, ಬಂಗಾಳ ಕೊಲ್ಲಿಯಲ್ಲಿ ಈಗಲೂ ವಾಯುಭಾರ ಕುಸಿತದ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗಿದೆ. ಹಿಂದೂ ಮಹಾಸಾಗರ & ಬಂಗಾಳ ಕೊಲ್ಲಿಯಲ್ಲಿ ಕೂಡ ಮಳೆಯ ಮಾರುತಗಳು ಆಕ್ಟಿವ್ ಆಗಿವೆ. ಅಂದರೆ, ಮಳೆ ಸುರಿಸುವ ಭರ್ಜರಿ ಮೋಡಗಳು ಹಿಂದೂ ಮಹಾಸಾಗರ & ಬಂಗಾಳ ಕೊಲ್ಲಿಯ ಸುತ್ತಮುತ್ತ ಇದ್ದು, ಶ್ರೀಲಂಕಾ ದೇಶ ಭಾರಿ ಮಳೆಯ ಕಾರಣಕ್ಕೆ ನರಳಿ ಹೋಗಿದೆ.

ಅಕಸ್ಮಾತ್ ಮಳೆ ಬಂದರೆ ಮಗೀತು!

ಇದರ ಜೊತೆಗೆ ತಮಿಳುನಾಡು & ಕೇರಳದ ಕಡೆಗೆ ಮಳೆ ಮೋಡಗಳು ಎಂಟ್ರಿಯನ್ನ ಕೊಡುವ ಭಯ ಕಾಡುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಮಳೆ ಶುರುವಾಗುವ ಆತಂಕ ಕೂಡ ಇದೆ. ಅಕಸ್ಮಾತ್ ಅಲ್ಲಿ ಮಳೆ ಶುರುವಾದರೆ, ಬೆಂಗಳೂರಿನಲ್ಲಿ ಕೂಡ ಮಳೆ ಕಾಟ ಗ್ಯಾರಂಟಿ ಅಂತಾ ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕೂಡ ಮತ್ತೆ ಮಳೆಯ ಭಯ ಆವರಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಎಲ್ಲವೂ ನಿರ್ಧಾರ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+