Rain Alert: ಗುರುವಾರ ರಾಜ್ಯದ ಒಳನಾಡಿನ 12 ಜಿಲ್ಲೆಗಳಿಗೆ ಭಾರೀ ಮಳೆ! ಯೆಲ್ಲೋ ಅಲರ್ಟ್

Karnataka Rains: ಬೆಂಗಳೂರು ಸೇರಿ ಕರ್ನಾಟಕದ ಇತರ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಸಕ್ರಿಯವಾಗುವ ಎಲ್ಲ ಲಕ್ಷಣಗಳು ಇವೆ. ಸದ್ಯಕ್ಕೆ ಉಂಟಾಗಿರುವ ಬಿಸಿಲಿನ ವಾತಾವರಣ ಮರೆಯಾಗಿ ಮತ್ತೆ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD Rain Predication) ಮುನ್ಸೂಚನೆ ನೀಡಿದೆ.

ಐಎಂಡಿ ನೀಡಿರುವ ಮಾಹಿತಿ ಪ್ರಕಾರ, ಕರಾವಳಿ ಹಾಗೂ ಮಲೆನಾಡಿನಲ್ಲಿ ತಿಂಗಳುಗಟ್ಟಲೇ ಸುರಿದಿದ್ದ ಮುಂಗಾರು ಮಳೆ ಇದೀಗ ಅಂತ್ಯವಾಗಿದೆ. ಸದ್ಯ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಆರ್ಭಟಿಸಲು ಸಜ್ಜಾಗಿದೆ. ಇದೇ ಸೆಪ್ಟಂಬರ್ 11ರಂದು 12 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ (115 ಮಿಲಿ ಮೀಟರ್) ಆಗುವ ಸಂಭವವಿದೆ ಎಂದು ತಿಳಿಸಿದೆ.

Heavy Rain Expected in 12 Districts of Karnataka IMD Issued Yellow alert

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಯಾದಿಗಿರಿ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಾದ್ಯಂತ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ. ಸೆಪ್ಟಂಬರ್ 11ರಂದು 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಉಂಟಾಗಿದ್ದ ಚಂಡಮಾರುತ ಪ್ರಸರಣವು ತಕ್ಕಮಟ್ಟಿನ ತೀವ್ರತೆ ಉಳಿಸಿಕೊಂಡಿದೆ. ಇದರ ಹೊರತು ಬೇರಾವ ವೈಫರೀತ್ಯಗಳು ಸದ್ಯಕ್ಕೆ ಕರ್ನಾಟಕದ ಮೇಲೆ ಪ್ರಭಾವ ಉಂಟು ಮಾಡುತ್ತಿಲ್ಲ. ಸೆ.11ರಂದು ಗುರುವಾರ ಒಂದು ದಿನ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಯಾವುದೇ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ಇಲ್ಲ. ವಿವಿಧೆ ಭಾಗಗಳಲ್ಲಿ ಮಬ್ಬು ವಾತಾವರಣ, ಸಾಮಾನ್ಯ ಮಳೆ ಆದರೆ ಆಗಬಹುದೆಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ವಿವಿಧೆಡೆ ಮಳೆ ದಾಖಲು

ನೆನ್ನೆ ಹೊನ್ನಾವರ, ಕಾರವಾರ, ಧಾರವಾಡ, ಗೋಣಿಕೊಪ್ಪಲು, ಆಗುಂಬೆ ಹಾಗೂ ಮಂಗಳೂರು ಸೇರಿದಂತೆ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ದಾಖಲಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಚುರುಕಿನ ಬಿಸಿಲು ಕಂಡು ಬಂದಿದೆ. ಇದನ್ನು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಸಹಜ ಸ್ಥಿತಿಯ ವಾತಾವರಣ ಕಂಡು ಬಂದಿದೆ. ಮುಂದಿನ ಒಂದು ದಿನ (ಬುಧವಾರ) ಇದೇ ವಾತಾವರಣ ಮುಂದುವರಿದು, ನಂತರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+