Karnataka Rain: ಮಳೆ ಅಬ್ಬರ ಮತ್ತೆ ಶುರು, ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಮಳೆ... ಮಳೆ... ಮಳೆ... ಹೀಗೆ ಬೇಸಿಗೆ ಸಮಯದಲ್ಲೂ ಮಳೆಯ ಕಾಟ ಶುರುವಾಗಿದೆ. ಕರ್ನಾಟಕದ ಜನರಿಗೆ ಮಳೆರಾಯ ಮತ್ತೆ ಮತ್ತೆ ಕಾಟ ಕೊಡಲು ಶುರು ಮಾಡಿದ್ದಾನೆ. ಯಾಕೆ ಅಂದ್ರೆ 2024 ರಲ್ಲಿ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದ ಮಳೆರಾಯ ಇದೀಗ 2025ರ ಆರಂಭದಲ್ಲೇ ಅಬ್ಬರಿಸಲು ಸಜ್ಜಾಗಿದ್ದಾನೆ. ಈ ಮೂಲಕ ಮಳೆಯ ಅಬ್ಬರ ಮತ್ತೆ ಶುರು, ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಮಳೆಯ ಅವಾಂತರಕ್ಕೆ ಬ್ರೇಕ್ ಬೀಳುತ್ತಿಲ್ಲ, ಮಳೆರಾಯ ಮನುಷ್ಯರ ಮೇಲೆ ಯಾಕೋ ಕರುಣೆ ತೋರಿಸುತ್ತಿಲ್ಲ. ಯಾಕಂದ್ರೆ ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಶುರುವಾದರೂ ಮಳೆ ಆರ್ಭಟ ಜೋರಾಗಿತ್ತು, ಹೀಗೆ 2024ರ ತುಂಬಾ ಬರೀ ಮಳೆಯ ಅಬ್ಬರಕ್ಕೆ ಜನರು ಕೂಡ ಸಿಕ್ಕಾಪಟ್ಟೆ ಚಿಂತೆಯಲ್ಲಿ ಮುಳುಗಿದ್ದರು. ಆದರೆ, 2024ರ ಚಳಿಗಾಲ ಮುಗಿದು 2025ರ ಬೇಸಿಗೆ ಆರಂಭ ಆಗಿದ್ದರೂ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಇಂತಹ ಸಮಯದಲ್ಲೇ ಬಂಗಾಳ ಕೊಲ್ಲಿಯಿಂದ ಭರ್ಜರಿ ಮಳೆ ಮೋಡಗಳು ಎಂಟ್ರಿ ಕೊಡುತ್ತಿವೆ! ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?

Heavy Rain Alert Has Been Issued After 2nd Week Of 2025 March In These Areas

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಮಳೆ.. ಮಳೆ.. ಮಳೆ.. ಯಾವ ಕಾರಣಕ್ಕೆ ಈ ರೀತಿಯ ಮಳೆ ಸುರಿಯುತ್ತಿದೆಯೋ ಗೊತ್ತಿಲ್ಲ. ಬೆಂಗಳೂರು ಸೇರಿದಂತೆ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಇದೀಗ ಭಾರಿ ಮಳೆಯ ಸಾಧ್ಯತೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹಾಗೇ ತಮಿಳುನಾಡು ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರವೇ ಮಳೆ ಶುರುವಾಗಲಿದ್ದು, ಈ ಮೋಡಗಳು ಸೋಮವಾರದ ನಂತರ ಕರ್ನಾಟಕದ ದಕ್ಷಿಣ ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೂ ಆವರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.

ಒಟ್ನಲ್ಲಿ ಮಳೆ ನಿಲ್ಲಲಿ ಅಂತಾ ಜನರು ಈಗ ಪ್ರಾರ್ಥನೆ ಮಾಡುವಂತ ಆಗಿ ಹೋಗಿದೆ. ಮಳೆ.. ಮಳೆ.. ಮಳೆ.. ಸಾಕು ನಿಲ್ಲಿಸು ಮಾರಾಯ ನಿನ್ನ ರಗಳೆ.. ಹಿಂಗೆ ಜನರು ಕವಿತೆ ಹೇಳುವ ಸ್ಥಿತಿ ನಿರ್ಮಾಣ ಆಗಿದೆ. 2024ರ ಈ ಸಮಯದಲ್ಲಿ ಒಂದು ಬಾರಿ ಜೋರಾಗಿ ಮಳೆ ಬರಲಿ ದೇವರೆ... ಅಂತಾ ಬೇಡುತ್ತಿದ್ದ ಜನರೇ ಈಗ ಮಳೆಗೆ ಶಾಪ ಹಾಕಿ ನಿಲ್ಲುವಂತೆ ಬೇಡುವ ಸ್ಥಿತಿ ಎದುರಾಗಿದೆ. 2024ರ ಏಪ್ರಿಲ್-ಮೇ ತಿಂಗಳಲ್ಲಿ ಶುರು ಆಗಿದ್ದ ಮಳೆ, ಡಿಸೆಂಬರ್ ತಿಂಗಳ ತನಕ ಸುರಿದು ಸಾಕು ಸಾಕು ಎನಿಸಿದೆ. ಆದರೂ ಮತ್ತೆ, ಬೇಸಿಗೆ ಸಮಯದಲ್ಲಿ ಮಳೆ ಆರ್ಭಟ ಶುರುವಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ.

ಮಳೆ ಬಂತು ಮಳೆ... ಮಳೆ ಬಂತು ಮಳೆ...

ಒಟ್ನಲ್ಲಿ ಅಕಾಲಿಕ ಮಳೆಯಿಂದಾಗಿ ಎಲ್ಲಾ ಅಲ್ಲೋಲ ಕಲ್ಲೋಲ ಆಗಿ ಹೋಗುತ್ತಿದೆ. ಹೀಗೆ ಮತ್ತೊಮ್ಮೆ ಅಕಾಲಿಕ ಮಳೆಯು ಅಪ್ಪಳಿಸುವ ಎಲ್ಲಾ ಮುನ್ಸೂಚನೆ ಇದೀಗ ಸಿಗುತ್ತಿದ್ದು, ಈ ಹಿನ್ನೆಲೆ ಜನರು ಕೂಡ ಚಿಂತೆ ಮಾಡುವಂತೆ ಆಗಿದೆ. ಇದನ್ನೆಲ್ಲಾ ಈಗ ನೋಡುತ್ತಿದ್ದರೆ, ಮಳೆ ಕೋಪ ಕಡಿಮೆ ಆಗಿಲ್ಲ ಅಂತಾ ಕಾಣ್ತಿದೆ. ಹೀಗಾಗಿ 2024 ಕಳೆದು 2025 ಶುರುವಾಗಿದ್ದರೂ ಮಳೆ ಅರ್ಭಟ ಕಡಿಮೆ ಆಗುತ್ತಿಲ್ಲ. ಇನ್ನೇನು ಬೇಸಿಗೆ ಕಾಲ ಶುರುವಾಯ್ತು ಬಿಡು ಅಂತ ಖುಷಿ ಪಡುವ ಸಮಯದಲ್ಲೇ ಮತ್ತೆ ಮಳೆ ಅಬ್ಬರ ಹೆಚ್ಚಾಗಿದೆ. ಸೋಮವಾರ ನಂತರ ಮತ್ತೆ ಮಳೆ ಮೋಡಗಳು ಹಲವು ಜಿಲ್ಲೆಗಳನ್ನು ಆವರಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+