Heavy Rain: ಮುಂದಿನ 10 ದಿನ ಮಳೆ.. ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಭರ್ಜರಿ ವರ್ಷಧಾರೆ?
ಕರ್ನಾಟಕದಲ್ಲಿ ಬಹುಬೇಗ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ. ಈ ಮೂಲಕವಾಗಿ ಕನ್ನಡಿಗರಿಗೆ ವರುಣ ದೇವ ಸಿಹಿಸುದ್ದಿ ನೀಡಿದ್ದಾನೆ. ಯಾಕಂದ್ರೆ ಮಳೆ ಇಲ್ಲದೆ ಬೆಳೆ ಒಣಗಿ, ಪರದಾಡುತ್ತಿದ್ದ ಸಮಯಕ್ಕೆ ಪೂರ್ವ ಮುಂಗಾರು ಮಳೆ ಕೈಹಿಡಿದು ನಿಲ್ಲಿಸಿತ್ತು. ಈಗ ಮತ್ತೆ ಮುಂಗಾರು ಮಳೆ ಕೂಡ ಕನ್ನಡಿಗರ ಬೆನ್ನಿಗೆ ನಿಂತಿದೆ. ಈ ಮೂಲಕ ಭರ್ಜರಿ ಮಳೆಯಲ್ಲಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಮುಂದಿನ 10 ದಿನಗಳ ಕಾಲ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಮಳೆ ಬೀಳುವುದು ಯಾವ ಯಾವ ಜಿಲ್ಲೆಗಳಲ್ಲಿ ಗೊತ್ತಾ?
ಕನ್ನಡ ನಾಡಿಗೆ ಮತ್ತು ಇಡೀ ಭಾರತಕ್ಕೆ ಮುಂಗಾರು ಮಳೆಯೇ ಆಧಾರ. ಇದೊಂದು ಮಳೆ ಬಾರದೆ ಹೋದರೆ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಮುಂಗಾರು ಮಳೆಯನ್ನ ಜನರು ದೇವರಿಗೆ ಹೋಲಿಸುತ್ತಾರೆ. ಇಂತಹ ಮುಂಗಾರು ಮಳೆ 2024 ರಲ್ಲಿ ಭರ್ಜರಿ ಆರ್ಭಟ ತೋರಿಸುತ್ತಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಎಲ್ಲರೂ ಖುಷ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕೇರಳ ಪ್ರವೇಶಿಸಿದ್ದ ಮುಂಗಾರು ಮಳೆ ಮೋಡಗಳು ದಿಢೀರ್ ಕರ್ನಾಟಕದ ಒಳಗೂ ಭರ್ಜರಿ ಮಳೆಯ ಸಿಂಚನ ಮಾಡಿಸುತ್ತಿವೆ. ಈ ಮೂಲಕ ಭಾರಿ ಮಳೆಯಿಂದ ಕನ್ನಡ ನಾಡು ಈಗ ನೆನೆಯುತ್ತಿದೆ ಹಾಗಾದ್ರೆ ಮುಂದಿನ 10 ದಿನಗಳ ಕಾಲ ಮಳೆಯಾಗುವ ಜಿಲ್ಲೆಗಳು ಯಾವುವು?

ಮಳೆ.. ಮಳೆ.. ಈ ಜಿಲ್ಲೆಗಳಿಗೆ!
ಈಗಿನ ಮಾಹಿತಿ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಆಗಲಿದೆ.
ಅದ್ರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಭಾರಿ ಮಳೆ ಸಿಂಚನ ಆಗಲಿದ್ದು, ಈ ಮೂಲಕ ಕನ್ನಡ ನಾಡಿನ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಬೇಸಿಗೆ ಬಿಸಿಲಿಗೆ ಒಣಗಿ ಹೋಗಿದ್ದ ಕರ್ನಾಟಕದ ನದಿಗಳಿಗು ಜೀವಕಳೆ ಬರುತ್ತಿದ್ದು, ಡ್ಯಾಂ ತುಂಬಿ ತುಳುಕುವ ಮುನ್ಸೂಚನೆ ಸಿಗುತ್ತಿದೆ.
ಎಲ್ಲವೂ ಒಳ್ಳೆಯದೇ ಆಗುತ್ತಿದೆ...
ಮಳೆ ವಿಚಾರದಲ್ಲಿ ಈಗ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು, ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಪ್ರವೇಶ ಆಗಿದೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಮತ್ತೊಂದ್ಕಡೆ ಇದೇ ರೀತಿಯಾಗಿ ಮಳೆ ಇನ್ನೂ ಕೆಲವು ದಿನಗಳ ಕಾಲ ಅಬ್ಬರಿಸುವ ಮುನ್ಸೂಚನೆ ಇದ್ದು, ಮುಂಗಾರು ಮಳೆಯ ಅಬ್ಬರಕ್ಕೆ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಇದೇ ರೀತಿ ಮುಂದಿನ ಕೆಲವು ವಾರಗಳ ಕಾಲ ಮುಂಗಾರು ಮಳೆ ಕರ್ನಾಟಕದಲ್ಲಿ ಅಬ್ಬರಿಸುವ ನಿರೀಕ್ಷೆ ಇದೆ. ಈ ಮೂಲಕ ಭರ್ಜರಿ ಮಳೆಯಿಂದ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.
ತುಂಬುತ್ತಿವೆ ಕರ್ನಾಟಕದ ಡ್ಯಾಂಗಳು
ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಮುಂಗಾರು ಮಳೆಯ ಆಗಮನಕ್ಕೆ ಮೊದಲೇ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತೆ ಅಂತ, ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮಳೆ ಅಬ್ಬರದ ಪರಿಣಾಮ, ಈಗಾಗಲೇ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಕೂಡ ಬರುತ್ತಿದೆ.
ಭರ್ಜರಿ ಮಳೆಗೆ ತುಂಬುತ್ತಿವೆ ಡ್ಯಾಂ!
ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೂ ನಿಲುಕದು. ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮನುಷ್ಯರು ಪರದಾಡುತ್ತಿದ್ದು ನೀರಿಗೆ ಯುದ್ಧವೇ ನಡೆಯುತ್ತೇನೋ.? ಎಂಬ ಭಯವು ಕೂಡ ಆವರಿಸಿತ್ತು. ಇದೇ ಸಮಯದಲ್ಲಿ ಸರಿಯಾಗಿ ಭರ್ಜರಿ ಮಳೆ ಬರುತ್ತಿದ್ದು, ಕಾವೇರಿ ನದಿ ಸೇರಿದಂತೆ ಹಲವು ಡ್ಯಾಂಗಳು ತುಂಬುತ್ತಿವೆ.
ಮಳೆ ಅಬ್ಬರಕ್ಕೆ ಅಂಡರ್‌ಪಾಸ್ ಬಂದ್!
ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದ ರೀತಿಗೆ ಅಂಡರ್‌ಪಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿ ಮಾಡಿತ್ತು. ಅದರಲ್ಲೂ ಬೆಂಗಳೂರು ಹೃದಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿತ್ತು. ಹೀಗೆ ಭಾರಿ ಮಳೆ ಬಿದ್ದ ಸುದ್ದಿ ಗೊತ್ತಾಗದೆ ನೇರವಾಗಿ ರಸ್ತೆಗಳಿಗೆ ಬೈಕ್ & ಕಾರ್‌ನಲ್ಲಿ ಎಂಟ್ರಿ ಕೊಟ್ಟ ಸವಾರರು ರೋಡ್‌ನಲ್ಲಿ ನಿಂತಿದ್ದ ಎದೆ ಎತ್ತರದ ನೀರು ನೋಡಿ ಬೆಚ್ಚಿಬಿದ್ದರು.












Click it and Unblock the Notifications